ಮಂಗಳವಾರ, ಏಪ್ರಿಲ್ 13, 2021
23 °C

ಬಾಲಕನಿಗೆ ರಕ್ತದ ಕ್ಯಾನ್ಸರ್: ಸಹಾಯಕ್ಕೆ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಿರಿಯಾಪಟ್ಟಣ: ಇಲ್ಲಿಯ ಬಡ ಆಟೋ ಚಾಲಕ ಗಣೇಶ್ ಅವರ ಪುತ್ರ 6 ವರ್ಷದ ಸಾತ್ವಿಕ್ ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಚಿಕಿತ್ಸೆಗೆ ಆರ್ಥಿಕ ಸಹಾಯ ಕೋರಿದ್ದಾರೆ.ಆಟೋ ಚಾಲನೆಯಿಂದ ಜೀವನ ನಡೆಸುತ್ತಿರುವ ತಾಲ್ಲೂಕಿನ ದೊಡ್ಡಹರವೆಯ ಗಣೇಶ್ ಅವರಿಗೆ ಸಾತ್ವಿಕ್ ಹಾಗೂ ದೀಪ್ತಿ  ಮಕ್ಕಳಿದ್ದಾರೆ. ಸಾತ್ವಿಕ್ ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿರುವ ವಿಷಯ ಪಾಲಕರನ್ನು ಕಂಗೆಡಿಸಿದೆ. ಆಟೋ ಚಾಲನೆಯಿಂದ  ಸಂಪಾದಿಸಿದ ಹಣ ಈ ಬಾಲಕನ ಆರೋಗ್ಯ ತಪಾಸಣೆಗೂ ಸಾಲುತ್ತಿಲ್ಲ. ಮಗನನ್ನು ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಗೆ ಸೇರಿಸಿದ್ದಾರೆ.ಚಿಕಿತ್ಸೆಗೆ ಕನಿಷ್ಠ ರೂ. 4 ರಿಂದ 5ಲಕ್ಷದಷ್ಟು ಹಣ ಭರಿಸಬೇಕಾಗಿದ್ದು, ಮಗನ ಉಳಿವಿಗಾಗಿ ಸಮಾಜದ ಸಹಾಯಹಸ್ತ ನಿರೀಕ್ಷಿಸಿದ್ದಾರೆ. ಸಹೃದಯರ ಮತ್ತು ಸಮಾಜ ಸೇವಾ ಸಂಘಟನೆಗಳು ನೆರವು ನೀಡುವಂತೆ ಗಣೇಶ್ ಮನವಿ ಮಾಡಿದ್ದಾರೆ.ಸಹಾಯ ಮಾಡಲಿಚ್ಛಿಸುವವರು ಕುಶಾಲನಗರ ಎಸ್‌ಬಿಎಂ ಶಾಖೆಯ ಉಳಿತಾಯ ಖಾತೆ ನಂ.54021158064ಕ್ಕೆ ಹಣ ಹಾಕಬಹುದು. ವಿವರಗಳಿಗೆ ಮೊ-9591172311 ಸಂಪರ್ಕಿಸಿ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.