ಶುಕ್ರವಾರ, ಮೇ 7, 2021
26 °C

ಬಾಲ್ ಬ್ಯಾಡ್ಮಿಂಟನ್‌ಗೆ ಕರ್ನಾಟಕ ತಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಹೈದರಾಬಾದ್‌ನಲ್ಲಿ ಇದೇ 26 ರಿಂದ 28 ರವರೆಗೆ ನಡೆಯಲಿರುವ 37ನೇ ದಕ್ಷಿಣ ವಲಯ ಅಂತರ ರಾಜ್ಯ ಬಾಲ್‌ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ಗೆ ರಾಜ್ಯ ಬಾಲ್‌ಬ್ಯಾಡ್ಮಿಂಟನ್ ತಂಡಗಳನ್ನು ಪ್ರಕಟಿಸಲಾಗಿದೆ. ಪುರುಷರ ತಂಡವನ್ನು ಕೆನರಾ ಬ್ಯಾಂಕಿನ ಸುದರ್ಶನ್ ಹಾಗೂ ಮಹಿಳಾ ತಂಡವನ್ನು ಮೂಡುಬಿದಿರೆ ಆಳ್ವಾಸ್‌ನ ಸವಿತಾ ಎಂ.ಕೆ. ಮುನ್ನಡೆಸಲಿದ್ದಾರೆ.

ತಂಡಗಳು ಇಂತಿವೆ: ಪುರುಷರ ವಿಭಾಗ: ಸುದರ್ಶನ್ (ನಾಯಕ, ಕೆನರಾ ಬ್ಯಾಂಕ್), ದಿವಾಕರ್, ಪ್ರದೀಪ್ (ಡಿಲಕ್ಸ್ ತುಮಕೂರು), ಪುರುಷೋತ್ತಮ್, ಸಲೀಂ (ಚಾಮರಾಜನಗರ), ಶ್ರಿಧರ್ (ಚಿತ್ರದುರ್ಗ), ಶೌಕತ್ (ಬಾಳೆಹೊನ್ನೂರು), ಕಿರಣ್ ಕುಮಾರ್ (ದೊಡ್ಡಬಳ್ಳಾಪುರ), ವಿಜಯಕುಮಾರ್  (ಬನಶಂಕರಿ), ರಾಘವೇಂದ್ರ ಸ್ವಾಮಿ (ಕೆ.ಆರ್. ನಗರ). ಮಹಾದೇವ ಗೌಡ (ತರಬೇತುದಾರ, ಎಚ್.ಎಂ.ಟಿ, ತುಮಕೂರು), ಸಾಸ ನರೇಂದ್ರ (ವ್ಯವಸ್ಥಾಪಕ, ದೊಡ್ಡಬಳ್ಳಾಪುರ).

ಮಹಿಳಾ ವಿಭಾಗ : ಸವಿತಾ ಎಂ.ಕೆ. (ನಾಯಕಿ), ಪಯಸ್ವಿನಿ, ಶುೃತಿ, ಸ್ವಪ್ನಶ್ರಿ, ಕಾವ್ಯಾ ಎಂ.ಆರ್, ಬೀನಾ ಬಿ.ಟಿ., ಅಶ್ವಿನಿ ಭಟ್, ಕಾವ್ಯಾ ಎಂ.ಎಂ. (ಎಲ್ಲರೂ ಆಳ್ವಾಸ್) ಕಾವ್ಯ ಪಿ. (ಎಸ್.ಬಿ.ಬಿ.ಸಿ. ತುಮಕೂರು) ನಿಮಿತಾ (ಪಾಂಡವಪುರ). ಪ್ರವೀಣ್ ಕುಮಾರ್ (ತರಬೇತುದಾರ), ರಶ್ಮಿ ಜಿ. (ವ್ಯವಸ್ಥಾಪಕಿ).

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.