ಮಂಗಳವಾರ, ಜನವರಿ 21, 2020
18 °C

ಬಾಲ್ ಬ್ಯಾಡ್ಮಿಂಟನ್: ಕರ್ನಾಟಕ ರನ್ನರ್ ಅಪ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕರ್ನಾಟಕ ಬಾಲಕಿಯರ ತಂಡದವರು ಹೈದರಾಬಾದ್‌ನಲ್ಲಿ ನಡೆದ 57ನೇ ರಾಷ್ಟ್ರೀಯ ಜೂನಿಯರ್ ಬಾಲ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ `ರನ್ನರ್ ಅಪ್~ ಸ್ಥಾನ ಪಡೆದರು. ಬಾಲಕರು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.ಮಂಗಳವಾರ ನಡೆದ ಫೈನಲ್‌ನಲ್ಲಿ ತಮಿಳುನಾಡು ಬಾಲಕಿಯರು 14-29, 29-14, 29-14 ರಲ್ಲಿ ಕರ್ನಾಟಕ ತಂಡವನ್ನು ಮಣಿಸಿ ಚಾಂಪಿಯನ್ ಆದರು. ಇದಕ್ಕೂ ಮುನ್ನ ನಾಲ್ಕರಘಟ್ಟದ ಪಂದ್ಯದಲ್ಲಿ ಕರ್ನಾಟಕ 29-18, 29-15 ರಲ್ಲಿ ಆಂಧ್ರ ಪ್ರದೇಶ ಎದುರು ಜಯ ಪಡೆದಿತ್ತು ಎಂದು ಇಲ್ಲಿಗೆ ಬಂದ ವರದಿ ತಿಳಿಸಿದೆ.ಬಾಲಕರ ವಿಭಾಗದ ಸೆಮಿಫೈನಲ್‌ನಲ್ಲಿ ತಮಿಳುನಾಡು 29-27, 29-5 ರಲ್ಲಿ ಕರ್ನಾಟಕ ತಂಡವನ್ನು ಮಣಿಸಿತು. ಆ ಬಳಿಕ ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ರಾಜ್ಯ ತಂಡ 29-16, 29-14 ರಲ್ಲಿ ಕೇರಳ ತಂಡವನ್ನು ಸೋಲಿಸಿತು.ಕರ್ನಾಟಕದ ಎಂ.ಆರ್. ಕಾವ್ಯಾ ಮತ್ತು ಶ್ರೀನಿಧಿ ಆವರು `ಸ್ಟಾರ್ ಆಫ್ ಇಂಡಿಯಾ~ ಗೌರವ ತಮ್ಮದಾಗಿಸಿಕೊಂಡರು.

ಪ್ರತಿಕ್ರಿಯಿಸಿ (+)