ಭಾನುವಾರ, ಜೂನ್ 13, 2021
21 °C

ಬಿಎಂಎಸ್ ಇ– ಸಪ್ತಾಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿಎಂಎಸ್‌ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಈ ವಾರವಿಡೀ ನಡೆಯುವ ‘ಇ–ಸಪ್ತಾಹ’ ಕಾರ್ಯಕ್ರಮ ಈಗಾಗಲೇ ಆರಂಭಗೊಂಡಿದೆ. ದೇಶದಾದ್ಯಂತ ಸಂಪರ್ಕ ಜಾಲ ಹೊಂದಿರುವ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಈ ಸಪ್ತಾಹದಲ್ಲಿ ಪಾಲ್ಗೊಂಡಿದ್ದಾರೆ.ಕಾರ್ಯಕ್ರಮದ ಅಂಗವಾಗಿ ಇ–ವಾಕ್‌, ಫ್ಲೀ–ಮಾರ್ಕೆಟ್‌, ಇಂಟರ್ನ್‌ಷಿಪ್‌ ಫೇರ್‌, ಇಂಟರ್ನ್‌ಷಿಪ್‌ ಡ್ರೈವ್‌, ಬಿ–ಪ್ಲಾನ್‌ ವರ್ಕ್‌ಶಾಪ್‌ ಹಾಗೂ ಕಾಲೇಜು ಥಿಯೇಟರ್‌ ತಂಡದಿಂದ ರೋಡ್‌ ಶೋಗಳನ್ನು ಆಯೋಜಿಸಲಾಗಿದೆ.‘ಕ್ರಿಯಾತ್ಮಕ ಪರಿಕಲ್ಪನೆಗಳ ಅಭಿವ್ಯಕ್ತಿಗೆ ಇದೊಂದು ಉತ್ತಮ ವೇದಿಕೆಯಾಗಿದೆ. ಈ ಮೂಲಕ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ ಅವರ ಗುರಿ ತಲುಪಲು ಅವಶ್ಯಕ ನೆರವು ಒದಗಿಸಲು ಬದ್ಧರಾಗಿದ್ದೇವೆ’ ಎಂದು ಕಾಲೇಜು ಪ್ರಾಂಶುಪಾಲ ಡಾ. ಮಲ್ಲಿಕಾರ್ಜುನ ಬಾಬು ಅವರು ತಿಳಿಸಿದ್ದಾರೆ.ದೊಡ್ಡ ಬಸವನಗುಡಿ ರಸ್ತೆಯಲ್ಲಿರುವ ಬಿಎಂಎಸ್‌ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ನಡೆಯುತ್ತಿರುವ ಇ–ಸಪ್ತಾಹವು ಮಾರ್ಚ್‌ 7ರವರೆಗೂ ನಡೆಯಲಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.