ಭಾನುವಾರ, ಜೂನ್ 20, 2021
21 °C

ಬಿಎಸ್‌ಆರ್‌ ಕಾಂಗ್ರೆಸ್‌ಗೆ ಬಿಜೆಪಿ ಕಡೆ ಒಲವು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಲಬುರ್ಗಾ: ಬಿಎಸ್‌ಆರ್‌ ಕಾಂಗ್ರೆಸ್‌ ಸಂಸ್ಥಾಪಕ ಬಿ.ಶ್ರೀರಾಮುಲು ಬಿಜೆಪಿ ಸೇರ್ಪಡೆಯಾಗುತ್ತಿರುವ ಹಿನ್ನೆಲೆಯಲ್ಲಿ ತಾಲ್ಲೂಕಿನ ಬಿಎಸ್‌ಆರ್‌ ಕಾಂಗ್ರೆಸ್‌ ಮುಖಂಡರು ಕೂಡಾ ಬಿಜೆಪಿ ಸೇರಲು ಚರ್ಚೆ ನಡೆಸಿದ್ದಾರೆ.ಈ ಕುರಿತು ತಾಲ್ಲೂಕು ಮುಖಂಡ ನವೀನ ಗುಳಗಣ್ಣವರ್‌ ತಾಲ್ಲೂಕಿನ ಇಟಗಿ ಗ್ರಾಮದ ನಿವಾಸದಲ್ಲಿ ಆಯೋ­ಜಿ­ಸಿದ್ದ ಕಾರ್ಯಕರ್ತರ ಹಾಗೂ ಮುಖಂ­ಡರ ಸಭೆಯಲ್ಲಿ ಅಭಿಪ್ರಾಯ­ಗಳನ್ನು ಸಂಗ್ರಹಿಸಿದ್ದಾರೆ.ಎರಡು ವರ್ಷಗಳಲ್ಲಿ ರಾಜ್ಯ­ಮಟ್ಟದಲ್ಲಿ ಆಗಿರುವ ಅನೇಕ ಬದಲಾವ­ಣೆಯಿಂದ ರಾಜಕೀಯವಾಗಿ ಪ್ರತಿಯೊ­ಬ್ಬ­ರಿಗೂ ಒಂದಲ್ಲಾ ಒಂದು ರೀತಿಯಲ್ಲಿ ರಾಜಕೀಯದ ಅನುಭವವಾಗಿದೆ. ಸಂಸ್ಥಾ­­ಪಕ ರಾಮುಲು ಅವರು ಕೈಗೊಂ­ಡಿರುವ ತೀರ್ಮಾನಗಳಿಗೆ ಬೆಂಬಲಾರ್ಥ­ವಾಗಿ ತಾಲ್ಲೂಕಿನ ಕಾರ್ಯಕರ್ತರು ಹಾಗೂ ಮುಖಂಡರು ನಡೆದುಕೊಳ್ಳ­ಬೇಕಾ­ಗಿದೆ.ಅವರ ಮಾರ್ಗದರ್ಶ­ನದಂತೆ ಕಾರ್ಯಕರ್ತರ ಸಭೆ ಕರೆದು ಅಭಿಪ್ರಾಯ ಸಂಗ್ರಹಕ್ಕಾಗಿ ಈ ಸಭೆ ಆಯೋಜಿಸಲಾಗಿದೆ. ನರೇಂದ್ರ ಮೋದಿ­ಯ­ವರನ್ನು ದೇಶದ ಪ್ರಧಾನಿಯನ್ನಾಗಿ ಮಾಡಬೇಕೆಂಬುದು ಬಿಎಸ್‌ಆರ್‌ ಕಾಂಗ್ರೆಸ್‌ನ ರಾಮುಲು ಅವರ ಬಯಕೆ­ಯಾಗಿದ್ದರ ಹಿನ್ನೆಲೆಯಲ್ಲಿ ಬಿಜೆಪಿ ಸೇರುವುದು ಬಹುತೇಕ ಖಚಿತವಾಗಿದ್ದ­ರಿಂದ ಅವರ ನಡೆಯಂತೆ ತಾಲ್ಲೂಕಿನ ಕಾರ್ಯಕರ್ತರು ನಡೆದುಕೊಂಡರೆ ಹೆಚ್ಚು ಸೂಕ್ತವಾದುದು ಎಂದು ನವೀನ ಗುಳಗಣ್ಣವರ್‌ ಅಭಿಪ್ರಾಯಪಟ್ಟರು.ಇದಕ್ಕು ಮುನ್ನ ಮಾತನಾಡಿದ ಬಿಎಸ್‌ಆರ್‌ ಕಾಂಗ್ರೆಸ್‌ ಮುಖಂಡ ದೊಡ್ಡನಗೌಡ ತೋಟಗಂಟಿ ಮಾತನಾಡಿ, ಯಾವುದೇ ಪಕ್ಷ ಸೇರಿದರೂ ಸೂಕ್ತ ಸ್ಥಾನಮಾನ ಸಿಗುವಂತಾಗಬೇಕು. ಎಲ್ಲರೂ ಸಮಾನರು ಎಂಬ ಭಾವನೆಯೊಂದಿಗೆ ಪಕ್ಷ ಸಂಘಟನೆಗೆ ಶ್ರಮಿಸುವ ವಾತಾವರಣ ಸೃಷ್ಟಿಯಾಗಬೇಕು. ಇಂತಹ ಸೂಕ್ಷ್ಮ ವಿಚಾರಗಳ ಬಗ್ಗೆ ಹೆಚ್ಚು ಚರ್ಚಿಸಿ ಯೋಗ್ಯ ಪಕ್ಷಕ್ಕೆ ಸೇರಿವುದು ಮುಖ್ಯ ಎಂದು ಸಲಹೆ ನೀಡಿದರು.ಯುವ ಮುಖಂಡರಾದ ಮಂಜು­ನಾಥ ಕುದ್ರಿಮೋತಿ, ನಾಗನಗೌಡ ಜಾಲಿಹಾಳ, ಕಳಕಪ್ಪ ಉಪನಾಳ, ಅಮರೇಶ ಮಾಳೆಕೊಪ್ಪ ಸೇರಿದಂತೆ ಅನೇಕರು ಮಾತನಾಡಿ, ಬಿಜೆಪಿ ಪಕ್ಷ ಸೇರಿವುದೇ ಹೆಚ್ಚು ಸೂಕ್ತ ಮೊದಲಿನಂತೆ ಎಲ್ಲರೂ ಒಗ್ಗೂಡಿ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯವರನ್ನು ಪ್ರಧಾನಿಯನ್ನಾಗಿ ಮಾಡಲು ಶ್ರಮಿಸಬೇಕಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.ತಾ.ಪಂ. ಸದಸ್ಯ ರಾಜಶೇಖರ ಹೊಂಬಳ, ಗ್ರಾ.ಪಂ. ಸದಸ್ಯ ಪ್ರಕಾಶ ಬೋರಣ್ಣವರ, ರಾಮಣ್ಣ ಯಡ್ಡೋಣಿ, ಪ್ರಮುಖರಾದ ಮಹೇಶ ದಿವಟರ್‌, ವಿಕ್ರಮ, ನಿಂಗಪ್ಪ ರ್‍ಯಾವಣಕಿ, ಷಣ್ಮುಖಪ್ಪ ರಾಂಪೂರ, ಹಿರೇಹನಮಪ್ಪ ಬೊಮ್ಮನಾಳ, ಶರಣಪ್ಪ ಮುರಾರಿ, ವಸಂತ ಭಾವಮನಿ, ಶೇಖರಗೌಡ್ರ ಚಿಕ್ಕೊಪ್ಪ ಕನಕರಾಜ ಪೂಜಾರ, ಬಸವರಾಜ ಪೂಜಾರ ಸೇರಿದಂತೆ ಅನೇಕರು ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.