ಬಳ್ಳಾರಿ: ಕೆಲವೇ ದಿನಗಳ ಹಿಂದೆ ಅಲ್ಲಿ ನಿತ್ಯವೂ ನೂರಾರು ಜನರಿಗೆ ಉಚಿತ ಅನ್ನ ದಾಸೋಹ ನಡೆಯುತ್ತಿತ್ತು. ಜನರು ಮುಖಂಡರನ್ನು ಕಾಣಲೆಂದೇ ಕಾದು ನಿಂತುಕೊಂಡು ಜಯಘೋಷ ಮೊಳಗಿಸುತ್ತಿದ್ದರು. ಹತ್ತಾರು ಕಾವಲುಗಾರರು ಭದ್ರತೆಗೆ ನಿಯೋಜನೆಗೊಂಡಿದ್ದರೆ, ಐಷಾರಾಮಿ ವಾಹನಗಳು, ಬೈಕ್ಗಳು ಸಾಲಾಗಿ ನಿಲ್ಲುತ್ತಿದ್ದವು.

ಆದರೆ, ಇದೀಗ ಅಲ್ಲಿ ಕಾವಲುಗಾರರೂ ಇಲ್ಲ. ಮುಖಂಡರೂ ಇಲ್ಲ. ಅಲ್ಲದೆ, ಕಾದು ನಿಂತುಕೊಳ್ಳಲು ಜನರೂ ಇಲ್ಲ. ಗಾಳಿಗೆ ತಿರುಗುತ್ತಿದ್ದ ಪಕ್ಷದ ಚಿಹ್ನೆಯಾದ `ಫ್ಯಾನ್' ಸಹ ಕಾಣೆಯಾಗಿದೆ.

ಇದು ನಗರದ ಮಹರ್ಷಿ ವಾಲ್ಮೀಕಿ ವೃತ್ತದ ಬಳಿ ಇರುವ ಬಿಎಸ್ಆರ್ ಕಾಂಗ್ರೆಸ್ ಪಕ್ಷದ ಪ್ರಧಾನ ಕಚೇರಿಯ ಇಂದಿನ ಸ್ಥಿತಿ.
ವಿಧಾನಸಭೆ ಚುನಾವಣೆಗೆ ಮುನ್ನ ಇಲ್ಲಿ ಕಂಡುಬರುತ್ತಿದ್ದ ಕಾವಲುಗಾರರು, ಖಾಸಗಿ ಗನ್ ಮ್ಯಾನ್ಗಳು ಕೈಯಲ್ಲಿ ಬಂದೂಕು ಹಿಡಿದುಕೊಂಡು ಅತ್ತಿಂದಿತ್ತ ಓಡಾಡುತ್ತ ಜನರನ್ನು ತಕ್ಷಣಕ್ಕೆ ಒಳಗೆ ಬಿಡುತ್ತಿರಲಿಲ್ಲ. ಆದರೆ, ಇದೀಗ ಸ್ಥಿತಿ ತದ್ವಿರುದ್ಧವಾಗಿದೆ.

ಕಾವಲುಗಾರರು, ಖಾಸಗಿ ಗನ್ ಮ್ಯಾನ್ಗಳು ಹಾಗೂ ಆಪ್ತ ಸಹಾಯಕರ ದಂಡಿನೊಂದಿಗೆ ಕಂಗೊಳಿಸುತ್ತಿದ್ದ ಈ ಕಟ್ಟಡದ ಬಳಿ ಯಾರೂ ಇಲ್ಲ. ಆರೇಳು ತಿಂಗಳುಗಳಿಂದ ಭದ್ರತಾ ಕಾವಲುಗಾರರಿಗೆ ಸಂಬಳ ನೀಡಿಲ್ಲ ಎಂಬ ಕಾರಣದಿಂದ ಅವರನ್ನು ಒದಗಿಸಿದ್ದ ಏಜೆನ್ಸಿ ಸೇವೆಯನ್ನು ಹಿಂದಕ್ಕೆ ಪಡೆದಿದೆ ಎನ್ನಲಾಗಿದೆ.

3 ಅಂತಸ್ತಿನ ಈ ಭಾರಿ ಕಟ್ಟಡದ ಎಡ ಭಾಗದಲ್ಲಿ ಅಡುಗೆ ಮಾಡಲೆಂದೇ ಇರಿಸಲಾಗಿದ್ದ ಪರಿಕರಗಳು ದೂಳು ತಿನ್ನತೊಡಗಿವೆ. ಹಗಲು ಹೊತ್ತಿನಲ್ಲಿ ಕಚೇರಿಯ ಬಾಗಿಲು ತೆರೆದು ಕುಳಿತುಕೊಳ್ಳುವ ಇಬ್ಬರು ಕಾರ್ಮಿಕರು, ಸಂಜೆ ಆಗುತ್ತಿದ್ದಂತೆಯೇ ಕಚೇರಿಗೆ ಬೀಗ ಜಡಿದು ಹೊರಡುವುದರಿಂದ ಬಿಕೋ ಎನ್ನುವ ವಾತಾವರಣ ಕಂಡುಬರುತ್ತಿದೆ.

ಮುಖಂಡರ ಸುಳಿವಿಲ್ಲ
ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ಬಂಧನಕ್ಕೆ ಒಳಗಾಗಿ, ಬಿ.ಶ್ರೀರಾಮುಲು ಮತ್ತಿತರರು ಬಿಜೆಪಿ ತೊರೆದು, ಬಿಎಸ್ಆರ್ ಕಾಂಗ್ರೆಸ್ ಪಕ್ಷ ಸ್ಥಾಪಿಸಿದ ಬಳಿಕ ನಡೆದ ನಗರ ಸ್ಥಳೀಯ ಸಂಸ್ಥೆ ಮತ್ತು ವಿಧಾನಸಭೆ ಚುನಾವಣೆಯ ಫಲಿತಾಂಶ `ಬಿಎಸ್ಆರ್' ಬಳಗವನ್ನೇ ಅಲ್ಲೋಲ ಕಲ್ಲೋಲ ಮಾಡಿದೆ.

ರಾಜ್ಯದಲ್ಲಿ ಈ ಹಿಂದೆ ಪ್ರಾದೇಶಿಕ ಪಕ್ಷಗಳಿಗೆ ಅಷ್ಟಾಗಿ ಆದ್ಯತೆ ದೊರೆಯದಿದ್ದರೂ, ಈಗ ಜನರು ಜಾಣರಾಗಿದ್ದು, ಮನ್ನಣೆ ನೀಡೇ ನೀಡುತ್ತಾರೆ ಎಂದೇ ಹೇಳಿಕೊಂಡು ಪಕ್ಷ ಸ್ಥಾಪಿಸಿ ಪಾದಯಾತ್ರೆ, ಉಪವಾಸ ಸತ್ಯಾಗ್ರಹ ಮಾಡಿದ್ದ ಬಿ.ಶ್ರೀರಾಮುಲು ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಗ್ರಾಮೀಣ ಕ್ಷೇತ್ರದಲ್ಲಿ ಜಯಿಸಿದರೂ ನಂತರ ಜನರನ್ನು ಭೇಟಿ ಮಾಡುವ ಗೋಜಿಗೆ ಹೋಗಿಲ್ಲ.

ಶ್ರೀರಾಮುಲು ಇಲ್ಲದಿದ್ದರೂ ಕಚೇರಿಗೆ ನಿತ್ಯ ಬರುತ್ತಿದ್ದ ಬೆಂಬಲಿಗರು, ಪಕ್ಷದ ಕಾರ್ಯಕರ್ತರು, ಪಾಲಿಕೆಯ ಮಾಜಿ ಸದಸ್ಯರು, ಜಿಲ್ಲಾ, ತಾಲ್ಲೂಕು ಪಂಚಾಯಿತಿ ಸದಸ್ಯರೂ ಈಗೀಗ ಕಚೇರಿಯತ್ತ ಮುಖ ಮಾಡುತ್ತಿಲ್ಲ.

ಸಿರುಗುಪ್ಪ ರಸ್ತೆಯಲ್ಲಿರುವ ಹವಂಭಾವಿಯಲ್ಲಿನ ಜಿ.ಜನಾರ್ದನರೆಡ್ಡಿ ಹಾಗೂ ಶ್ರೀರಾಮುಲು ಅವರ ಮನೆಯ ಸ್ಥಿತಿಯೂ ಅವರ ಕಚೇರಿ ಸ್ಥಿತಿಗಿಂತ ಹೊರತಾಗಿಲ್ಲ. ಅಲ್ಲೂ ಕಂಡುಬರುತ್ತಿದ್ದ ಜನರ ದಂಡು ಮಾಯವಾಗಿದೆ. ಖಾಕಿ, ನೀಲಿ ಬಣ್ಣದ ದಿರಿಸಿನಲ್ಲಿ ಇರುತ್ತಿದ್ದ ಭದ್ರತಾ ಸಿಬ್ಬಂದಿಯ ಸಂಖ್ಯೆ ಕರಗಿದೆ.

ಜನಾರ್ದನ ರೆಡ್ಡಿ ಬಂಧನದ ನಂತರ ಕೆಲವು ದಿನ ಮುಂದುವರಿದಿದ್ದ ಹಣಕಾಸಿನ ನೆರವು ಚುನಾವಣೆಯಲ್ಲಿನ ಆಘಾತಕಾರಿ ಫಲಿತಾಂಶದ ನಂತರ ಸ್ಥಗಿತಗೊಂಡಿರುವುದು, ಆರ್ಥಿಕ ಸ್ಥಿತಿ ಪೂರಕವಾಗಿ ಇಲ್ಲದಿರುವುದು ಈ ಎಲ್ಲ ಬೆಳವಣಿಗೆಗೆ ಕಾರಣವಾಗಿದೆ.
ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ ವಿವಿಧೆಡೆ ಪಕ್ಷದಿಂದ ಸ್ಪರ್ಧಿಸಿದ್ದ ಅಭ್ಯರ್ಥಿಗಳಿಗೆ ಪಾರ್ಟಿ ಫಂಡ್ ನೀಡುವ ಭರವಸೆ ನೀಡಿಯೂ ಹಣ ನೀಡದೆ ಅನೇಕರ ಕೆಂಗಣ್ಣಿಗೆ ಗುರಿಯಾಗಿದ್ದ ಮುಖಂಡರು, ವಿದ್ಯುತ್, ಅಡುಗೆ ಕೆಲಸದವರು, ಭದ್ರತಾ ಸಿಬ್ಬಂದಿಯ ಸಂಬಳವನ್ನೂ ನೀಡಿಲ್ಲ ಎಂದು ಆಪ್ತ ವಲಯದಿಂದಲೇ ಕೇಳಿಬರುತ್ತಿದೆ.

ಬಿಜೆಪಿಯತ್ತ ಚಿತ್ತ?
ಚುನಾವಣೆಯಲ್ಲಿನ ಪಕ್ಷದ ಸೋಲು ಶ್ರೀರಾಮುಲು ಮತ್ತಿತರರನ್ನು ಕಂಗೆಡಿಸಿದ್ದು, ಪಕ್ಷದಿಂದ ಒಬ್ಬೊಬ್ಬರೇ ಮುಖಂಡರು ದೂರವಾಗುತ್ತಿರುವುದು ಬಿಜೆಪಿ ಜತೆಗೇ ಪಕ್ಷವನ್ನು ವಿಲೀನಗೊಳಿಸಲು ಆಲೋಚನೆ ನಡೆಯುತ್ತಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಬಿಜೆಪಿ ಇಲ್ಲದಿದ್ದರೆ ಬೇರೆ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಕುರಿತ ಪ್ರಕ್ರಿಯೆಗೂ ಈಗಾಗಲೇ ಚಾಲನೆ ದೊರೆತಿದೆ. ಲೋಕಸಭೆ ಚುನಾವಣೆಯ ಹೊತ್ತಿಗೆ ಬಿಜೆಪಿ ಅಥವಾ ಇನ್ನೊಂದು ಪಕ್ಷದೊಂದಿಗೆ ಮುನ್ನಡೆಯುವ ಚಿಂತನೆಯನ್ನು ಬಿಎಸ್ಆರ್ ಬಳಗ ನಡೆಸಿದೆ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.