ನವದೆಹಲಿ: ಹೊಸ ರಾಜಕೀಯ ಪಕ್ಷ ಸ್ಥಾಪನೆಗೆ ಸಿದ್ಧತೆ ನಡೆಸಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನ ಕೊಡಲು ವರಿಷ್ಠರು ತಯಾರಿದ್ದಾರೆ. ಆದರೆ, ಯಾವುದೇ ಪರಿಸ್ಥಿತಿಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದ ಜವಾಬ್ದಾರಿ ವಹಿಸಲು ಅಥವಾ ಮುಂದಿನ ಮುಖ್ಯಮಂತ್ರಿ ಎಂದು ಬಿಂಬಿಸಲು ಸಾಧ್ಯವಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ.

ಮಾಜಿ ಮುಖ್ಯಮಂತ್ರಿ ಬಿಜೆಪಿಯಲ್ಲಿ ಉಳಿಯುವುದಾಗಿ ಭರವಸೆ ನೀಡಿದರೆ ಮಾತ್ರ ವರಿಷ್ಠರು ಸಭೆ ಸೇರಿ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನ ವಹಿಸಿಕೊಡುವ ಬಗ್ಗೆ ತೀರ್ಮಾನ ಮಾಡಲಿದ್ದಾರೆ ಎಂದು ಬಿಜೆಪಿ ಉನ್ನತ ಮೂಲಗಳು ಸ್ಪಷ್ಟಪಡಿಸಿವೆ.

ಯಡಿಯೂರಪ್ಪ ಪಕ್ಷದಲ್ಲೇ ಉಳಿಯಬೇಕು ಎಂಬುದು ಪಕ್ಷದ ಎಲ್ಲ ನಾಯಕರ ಅಭಿಲಾಷೆ. ಹೇಗಾದರೂ ಮಾಡಿ ಅವರನ್ನು ಉಳಿಸಿಕೊಳ್ಳಬೇಕೆಂದು ಹಿರಿಯ ನಾಯಕ ಅರುಣ್ ಜೇಟ್ಲಿ ಸೇರಿದಂತೆ ಹಲವರು ಬಲವಾಗಿ ಪ್ರತಿಪಾದಿಸಿದ್ದಾರೆ. ಎಲ್.ಕೆ. ಅಡ್ವಾಣಿ ಗರಂ ಆಗಿದ್ದಾರೆ. ಅಕ್ರಮ ಗಣಿಗಾರಿಕೆ ಹಗರಣದಲ್ಲಿ ಸಿಕ್ಕಿಕೊಂಡಿರುವ ಮಾಜಿ ಮುಖ್ಯಮಂತ್ರಿಗೆ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನದ ಹೊಣೆಗಾರಿಕೆ ನೀಡುವುದು ಸದ್ಯಕ್ಕಂತೂ ಸಾಧ್ಯವಿಲ್ಲದ ಮಾತು ಎಂಬ ನಿಲುವು ವರಿಷ್ಠರಲ್ಲಿದೆ.

ಬಿಜೆಪಿ ಮುಂಬರುವ ಚುನಾವಣೆಯಲ್ಲಿ ಯುಪಿಎ ಸರ್ಕಾರದ ಭ್ರಷ್ಟಾಚಾರವನ್ನೇ ಪ್ರಮುಖ ಅಸ್ತ್ರವಾಗಿ ಬಳಸಿಕೊಳ್ಳಲಿದೆ. ಈ ಪರಿಸ್ಥಿತಿಯಲ್ಲಿ ಭ್ರಷ್ಟಾಚಾರ ಆರೋಪಕ್ಕೆ ಸಿಕ್ಕಿದವರ ಕೈಗೆ ಪಕ್ಷದ ನಾಯಕತ್ವ ಕೊಟ್ಟರೆ ತೀವ್ರ ಮುಜುಗರ ಎದುರಿಸಬೇಕಾಗುತ್ತದೆ. ಇದೇ ಕಾರಣಕ್ಕೆ ಯಡಿಯೂರಪ್ಪನವರಿಗೆ ರಾಜ್ಯದ ಚುಕ್ಕಾಣಿ ನೀಡಲು ಸಾಧ್ಯವಿಲ್ಲವೆಂದು ವರಿಷ್ಠರು ಖಚಿತವಾಗಿ ಹೇಳಿದ್ದಾರೆ.

ಆರೋಪಗಳ ಸುಳಿಗೆ ಸಿಕ್ಕಿರುವ ನಿತಿನ್ ಗಡ್ಕರಿ ಭವಿಷ್ಯವೇ ತೂಗುಯ್ಯಾಲೆಯಲ್ಲಿದೆ. ಹೀಗಿರುವಾಗ ಮಾಜಿ ಮುಖ್ಯಮಂತ್ರಿಗೆ ಪ್ರಮುಖ ಸ್ಥಾನ ನೀಡಲು ಹೇಗೆ ಸಾಧ್ಯ ಎಂದು ಮೂಲಗಳು ಕೇಳಿವೆ.

ಯಡಿಯೂರಪ್ಪ ಅವರ ಮನವೊಲಿಸಲು ಅರುಣ್ ಜೇಟ್ಲಿ ಅಕ್ಟೋಬರ್ 2ರಂದು ಬೆಂಗಳೂರಿಗೆ ಹೋಗಿದ್ದರು. ಅವರನ್ನು ಭೇಟಿಯಾಗಲು ಒಲ್ಲದ ಯಡಿಯೂರಪ್ಪ ಶಿವಮೊಗ್ಗಕ್ಕೆ ತೆರಳಿದರು.

ಮಾಜಿ ಮುಖ್ಯಮಂತ್ರಿಗೆ ನಿಷ್ಠರಾಗಿರುವ ಕೆಲ ಸಚಿವರ ಒತ್ತಾಯಕ್ಕೆ ಮಣಿದು ರಾಜ್ಯಸಭೆ ವಿರೋಧ ಪಕ್ಷದ ನಾಯಕರು ಈ ಪ್ರಯತ್ನ ಮಾಡಿದ್ದರು. ಅದು ಸಫಲವಾಗಲಿಲ್ಲ. ಈಗಲೂ ಯಡಿಯೂರಪ್ಪ ಪಕ್ಷದಲ್ಲೇ ಉಳಿಯಬೇಕು ಎಂಬುದು ಎಲ್ಲ ನಾಯಕರ ಬಯಕೆ ಎಂದು ಮೂಲಗಳು ವಿವರಿಸಿವೆ.

ಪ್ರಧಾನ್ ಬೆಂಗಳೂರಿಗೆ: ರಾಜ್ಯ ಬಿಜೆಪಿ ಉಸ್ತುವಾರಿ ಹೊತ್ತಿರುವ ಧರ್ಮೇಂದ್ರ ಪ್ರಧಾನ್ ಮಂಗಳವಾರ ರಾತ್ರಿ ಬೆಂಗಳೂರಿಗೆ ತೆರಳಲಿದ್ದಾರೆ. ಬುಧವಾರ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಎಲ್ಲ ಮಂತ್ರಿಗಳು, ಶಾಸಕರು, ಸಂಸದರು ಹಾಗೂ ಪ್ರಭಾರಿಗಳನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಲಿದ್ದಾರೆ. ಯಡಿಯೂರಪ್ಪ ಅವರನ್ನು ಕಂಡು ಪಕ್ಷದಲ್ಲೇ ಉಳಿಯುವಂತೆ ಮನವೊಲಿಸುವ ಕಾರ್ಯಕ್ರಮ ಇದೆ. ಮಾಜಿ ಮುಖ್ಯಮಂತ್ರಿ ಮಾತುಕತೆಗೆ ಸಿಕ್ಕಿದರೆ ಮಾತ್ರ.

ಮಾಜಿ ಮುಖ್ಯಮಂತ್ರಿ ಬಿಜೆಪಿ ತೊರೆಯಬಾರದು ಎಂಬ ಪ್ರಯತ್ನಕ್ಕೆ ಅವರಿಗೆ ನಿಷ್ಠರಾಗಿರುವ ಕೆಲ ಸಚಿವರೂ ಕೈ ಜೋಡಿಸಿದ್ದಾರೆ. ಹೊಸ ಪಕ್ಷ ಸುಲಭದ ಮಾತಲ್ಲ. ಹಿಂದೆ ಅನೇಕರು ಹೊಸ ಪಕ್ಷ ಕಟ್ಟಿ ಕೈ ಸುಟ್ಟುಕೊಂಡ ಉದಾಹರಣೆ ಕಣ್ಣ ಮುಂದಿರುವಾಗ ಯಡಿಯೂರಪ್ಪ ಅದೇ ತಪ್ಪು ಮಾಡಬಾರದು ಎಂಬ ಅಭಿಪ್ರಾಯ ಅವರಲ್ಲಿದೆ.

ಈ ಕಾರಣಕ್ಕೆ ಈಚೆಗೆ ಬಸವರಾಜ ಬೊಮ್ಮಾಯಿ, ಉಮೇಶ್ ಕತ್ತಿ, ಸಿ.ಎಂ. ಉದಾಸಿ, ಸೋಮಣ್ಣ ಮತ್ತಿತರರು ಜಗದೀಶ್ ಶೆಟ್ಟರ್ ಮತ್ತು ಈಶ್ವರಪ್ಪನವರ ಜತೆ ರಾಜಧಾನಿಗೆ ಧಾವಿಸಿ ವರಿಷ್ಠರ ಜತೆ ಮಾತುಕತೆ ನಡೆಸಿದರು. ವರಿಷ್ಠರು ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನ ನೀಡಲು ಸಿದ್ಧ. ಅದರಾಚೆಗೆ ಯಾವುದೇ ಬೇಡಿಕೆ ಒಪ್ಪಲು ಸಾಧ್ಯವಿಲ್ಲ ಎಂದು ಮನವರಿಕೆ ಮಾಡಿಕೊಟ್ಟಿದ್ದಾರೆ.

ಚೆಂಡು ಈಗ ಯಡಿಯೂರಪ್ಪನವರ ಅಂಗಳದಲ್ಲಿದೆ. ಮುಂದಿನ ನಿರ್ಧಾರ ಅವರಿಗೆ ಬಿಟ್ಟಿದ್ದು ಎಂದು ಮೂಲಗಳು ಸ್ಪಷ್ಟಪಡಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.