ಬಿಗ್ ಬಾಸ್ 5 ಸೀಸನ್ನಲ್ಲಿ ಈ ವರ್ಷ ಸುದ್ದಿಯೋ ಸುದ್ದಿ ಸದ್ದೋ ಸದ್ದು. ಪೋರ್ನ್ ತಾರೆ ಸನ್ನಿ ಲಿಯೊನ್ ಪ್ರವೇಶ, ಪೂಜಾ ಮಿಶ್ರಾಳ ಜಗಳ, ಸ್ವಾಮಿ ಅಗ್ನಿವೇಶ್ ಪ್ರವೇಶ, ಕ್ರಿಕೆಟಿಗ ಆ್ಯಂಡ್ರೂ ಸೈಮಂಡ್ಸ್ನ `ಆತಿ ಕ್ಯಾ ಖಂಡಾಲ~ ಹಾಡು, ಸುಮೊ ಪಟು ಯಮಾನ ದಬಾಂಗ್ ಹಾಡನ್ನು ಜಪಾನ್ ಜಪಾನ್ ಅಂತ ಜಪಿಸ್ದ್ದಿದು- ಹೀಗೆ ಇಡೀ ಸೀಸನ್ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಾಗುತ್ತಲೇ ಇತ್ತು.

ಆದರೆ, ಹೆಚ್ಚು ಸುದ್ದಿಯಾಗದೇ ಇರುವ ಜೂಹಿ ಪರಮಾರ್ಗೆ ಬಿಗ್ಬಾಸ್ ಪಟ್ಟ ಒಲಿದದ್ದು ಅಚ್ಚರಿ. ಅಲ್ಲಿಗೆ, `ಬಿಗ್ ಬಾಸ್ 5~ ಸಂಜೂಬಾಬಾ ಹಾಗೂ ಸಲ್ಲುಮಿಯಾನ `ಫೈಫೈ ಬೈಬೈ~ಯೊಂದಿಗೆ ಕಲರ್ಸ್ ಚಾನೆಲ್ನ ಇತಿಹಾಸದ ಪುಟ ಸೇರಿದೆ.

`ಬಿಗ್ ಬಾಸ್ ಫೈ.. ಜೂಹಿ ಸ್ಕೈ ಬೈಬೈ~ ಅಂತ ಶುಕ್ರವಾರ ರಾತ್ರಿಯವರೆಗೂ ಸಿದ್ದಾರ್ಥ್ ಭಾರದ್ವಾಜ್ ಹಾಗೂ ಮೆಹಕ್ ಕೂಗಾಡುತ್ತಿದ್ದರು. ಇಬ್ಬರೂ ಮೆಲ್ಲಮೆಲ್ಲನೆ, ತಮ್ಮಲ್ಲಿ ಯಾರೊಬ್ಬರು ಗೆದ್ದರೂ ಇಬ್ಬರೂ ಸೇರಿ ಟ್ರೋಫಿ ಹಿಡಿಯುವ ಕನಸು ಕಾಣುತ್ತಿದ್ದರು.

ಸ್ಕೈ ಎಂದೇ ಹೆಸರಾದ ಆಕಾಶ್ ಸೆಹಗಲ್ ಸೋಲು ಗೆಲುವಿನ ರೇಸ್ನಲ್ಲಿ ತನ್ನ `ಚಾನ್ಸ್~ ಏನು ಎಂಬ ಲೆಕ್ಕಾಚಾರದಲ್ಲಿದ್ದ. ಆದರೆ ಇದ್ಯಾವುದರ ಪರಿವೆಯೇ ಇಲ್ಲದೆ, ಜೂಹಿ ಆರಾಮಾಗಿ, `ನಾಳೆ ಒಂದಿನ, ನಾಳಿದ್ದು... ಆಮೇಲೆ ಇಷ್ಟೊತ್ತಿಗೆ ಮನೇಲಿ ಇರ್ತೇವೆ~ ಅಂತ ಅಮರ್ ಉಪಾಧ್ಯಾಯ್ ಜೊತೆ ಕನಸು ಕಾಣುತ್ತಿದ್ದಳು.
ಶನಿವಾರ ಬಿಗ್ ಬಾಸ್ ಕಿರೀಟ ತೊಟ್ಟಾಗ ಜೂಹಿಯೊಂದಿಗೆ ಇಡೀ `ಕುಂಕುಮ್~ ಪರಿವಾರವೇ ಖುಷಿ ಪಟ್ಟಿತ್ತು.

ಬಿಗ್ಬಾಸ್-5 ಆರಂಭವಾದಾಗಿನಿಂದಲೂ ಮನೆಯಲ್ಲಿದ್ದ ಜೂಹಿ, ಹೆಚ್ಚಿನ ವಾದ-ವಿವಾದಗಳಿಗೆ ಕಾರಣವೂ ಆಗಿರಲಿಲ್ಲ. ಭಾಗಿಯೂ ಆಗಿರಲಿಲ್ಲ.
ಪೂಜಾ ಬೇಡಿಯೊಂದಿಗೆ ಹೆಚ್ಚಾಗಿ ಇರುತ್ತಿದ್ದ ಜೂಹಿಗೆ `ಪೂಜಾ ಕಿ ಚಮ್ಚಿ~ ಎಂದೂ ಹೆಸರು ದೊರೆತಿತ್ತು.

ಶೊನಾಲಿ ಹೊರನಡೆದಾಗ, ಸನ್ನಿ ಹೊರ ಬಿದ್ದಾಗ... ಆ್ಯಂಡ್ರೂಗೆ `ಆತಿ ಕ್ಯಾ ಖಂಡಾಲಾ~ ಹಾಡು ಕಲಿಸುವಾಗ ಜೂಹಿ ಸಹಜವಾಗಿಯೇ ಇದ್ದರು.
ಗ್ರ್ಯಾಂಡ್ ಫಿನಾಲೆಗೆ ಮುನ್ನಾ ದಿನ ಎಲ್ಲರೂ ತಮ್ಮ ಪರವಾಗಿ ಮತ ಕೇಳಬೇಕಾಗಿತ್ತು.

ಮೆಹಕ್ ತಾವು ವೈಲ್ಡ್ಕಾರ್ಡ್ ಮೂಲಕ ಮರು ಪ್ರವೇಶ ಪಡೆಯಲು ಕಾರಣರಾದ ಮತದಾರರಿಗೆ ಧನ್ಯವಾದ ಹೇಳುತ್ತಲೇ, ಮುಂದಿನ ವಿಜಯಿ ತಾವಾಗಲು ಆತ್ಮವಿಶ್ವಾಸ ದೊರೆತಿದೆ ಎಂದಿದ್ದರು. ಆದರೆ ಕೊನೆಯ ಎರಡು ದಿನಗಳ ಅವರ `ನಖರಾ~ ಸಹಿಸದ ಮತದಾರ, ಜೂಹಿಯ ಸರಳತೆಗೆ ಜೈ ಕಾರ ಹಾಕಿದ್ದರು.
`ಮೈ ಉನ್ ಏಕ್ ಏಕ್ ವೋಟೊಂಕಾ ಭಿ ಮಾಯಿನೆ ರಖತೀ ಹೂಂ ಜೋ ಮುಝೆ ಇಸ್ ಮುಖಾಂ ತಕ್ ಪೊಹುಂಚಾಯಾ..

ಔರ್ ಉನ್ ಏಕ್ ಏಕ್ ಸದಸ್ಯ ಕೋ ಭಿ ಮೈ ಅಪನಾ ಧನ್ಯವಾದ್ ದೇತಿ ಹುಂ...~ (ನನಗೆ ಯಶಸ್ಸಿನ ಈ ಮೆಟ್ಟಿಲು ಹತ್ತಲು ಸಹಾಯವಾಗಿರುವ ಪ್ರತಿ ಒಂದು ಮತದ ಮಹತ್ವವೂ ಗೊತ್ತಿದೆ. ಆ ಎಲ್ಲ ಸದಸ್ಯರಿಗೂ ನನ್ನ ಧನ್ಯವಾದ ತಿಳಿಸುತ್ತೇನೆ) ಎನ್ನುತ್ತಲೇ... `ಒಂದು ವೇಳೆ ಈ ಷೋನಲ್ಲಿ ನನ್ನ ಇರುವು ಹಾಗೂ ಸ್ವಭಾವ ಇಷ್ಟವಾದಲ್ಲಿ, ಬಿಗ್ ಬಾಸ್ನ ಟ್ರೋಫಿ ನನಗೆ ದಕ್ಕುವಂತೆ ನೀವೆಲ್ಲ ಮಾಡುವಿರಿ ಎಂಬ ನಂಬಿಕೆಯೊಂದಿಗೆ ಮತ್ತೊಮ್ಮೆ ಧನ್ಯವಾದ ಹೇಳುತ್ತೇನೆ ಎಂದಾಗಲೇ ಅರ್ಧ ವೋಟುಗಳನ್ನು ಪಡೆದಿದ್ದರು.

ಈಗ ಬಿಗ್ ಬಾಸ್ 5 - ಸೀಸನ್ ಮುಗಿದು, ಜೂಹಿ ಪರಮಾರ್ ತನ್ನ ಪ್ರೀತಿಯ ಪತಿ ಸಚಿನ್ ಜೊತೆಗಿದ್ದಾರೆ. ಸಿದ್ದಾರ್ಥ್ ತಮ್ಮನ್ನು ಬಚ್ಚಾ ಎಂದೇ ಬಿಂಬಿಸುತ್ತಿದ್ದವರು, ಸ್ಕೈಗೆ ಮಣ್ಣು ಮುಕ್ಕಿಸಲು ಹಲ್ಲು ಮಸೆಯುತ್ತಿದ್ದಾರೆ. ಮೆಹಕ್ ಸಹ ಸ್ಕೈಗೆ `ಖೂನ್ ಕೆ ಆಂಸು ಬಹಾನೆ ಲಗಾವುಂಗಿ~ ಎಂಬ ಪ್ರಮಾಣ ಮಾಡಿಯೇ ಹೊರಬಿದ್ದಿದ್ದಾರೆ. ಆದರೆ ಜೂಹಿ ಮಾತ್ರ ಟ್ರೋಫಿ, ಚೀಲದ ತುಂಬ ಹಣ ಹಾಗೂ ಅಸಂಖ್ಯಾತ ಜನರ ಒಲವನ್ನು ಗಳಿಸಿ ಮನೆಗೆ ಮರಳಿದ್ದಾರೆ.

ಕೂಡುಕುಟುಂಬದಲ್ಲಿರುವ ಅಸೂಯೆ, ಹುನ್ನಾರ, ಸಂಚುಗಳೆಲ್ಲವನ್ನೂ ನಿಭಾಯಿಸುತ್ತಲೇ `ಘರ್ ಕಿ ಬಹು- ಬನಿ ಬೇಟಿ~ ಎಂಬ ಖ್ಯಾತಿಯ ಕುಂಕುಮ್ ಈಗ ಮನೆಯ ಬಿಗ್ ಬಾಸ್ ಪಟ್ಟವನ್ನೂ ಅಲಂಕರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.