ಬೆಂಗಳೂರು:‘ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಐದನೇ ಬಜೆಟ್ ಮಂಡಿಸಲು ಸಾಧ್ಯವಾಗುವಂತೆ ಮಾಡಿದ್ದು ಬಿಜೆಪಿಯ ಕಾನೂನು ಮತ್ತು ಶಾಸಕಾಂಗ ಘಟಕ’ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದರು.ನಗರದಲ್ಲಿ ಭಾನುವಾರ ನಡೆದ ಬಿಜೆಪಿಯ ಕಾನೂನು ಮತ್ತು ಶಾಸಕಾಂಗ ಘಟಕದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ನಡೆದ ಅನೇಕ ರಾಜಕೀಯ ವಿದ್ಯಮಾನಗಳ ನಿರ್ವಹಣೆಯಲ್ಲಿ ಬಿಜೆಪಿಯ ಕಾನೂನು ಮತ್ತು ಶಾಸಕಾಂಗ ಘಟಕ ಮಹತ್ವದ ಪಾತ್ರ ವಹಿಸಿತ್ತು ಎಂದು ನೆನಪಿಸಿಕೊಂಡರು.

ಶಾಸಕರ ಅನರ್ಹತೆ ಪ್ರಕರಣವನ್ನು ನ್ಯಾಯಾಲಯದಲ್ಲಿ ಸಮರ್ಥವಾಗಿ ಎದುರಿಸಿ ಈ ಘಟಕ ಪಕ್ಷಕ್ಕೆ ಸೇವೆ ಸಲ್ಲಿಸಿದೆ. ಶಾಸಕರ ಅನರ್ಹತೆ ಪ್ರಕರಣದ ಸಂದರ್ಭದಲ್ಲಿ ಸರ್ಕಾರ ಬಿದ್ದೇಹೋಯಿತು ಎನ್ನುವ ಪರಿಸ್ಥಿತಿ ಸೃಷ್ಟಿಯಾಗಿದ್ದ ಸಂದರ್ಭದಲ್ಲೂ ನ್ಯಾಯಾಲಯದಲ್ಲಿ ಸಮರ್ಥವಾಗಿ ವಾದ ಮಂಡಿಸಿದ ಮತ್ತು ನಮಗೆ ಸೂಕ್ತ ಮಾರ್ಗದರ್ಶನ ನೀಡಿದ ಶ್ರೇಯಸ್ಸು ವಕೀಲರದ್ದು ಎಂದರು.

ಅಷ್ಟೇ ಅಲ್ಲ ತುರ್ತು ಪರಿಸ್ಥಿತಿಯ ಕಾಲದಿಂದಲೂ ಅನೇಕ ವಕೀಲರು ಪಕ್ಷದಲ್ಲಿ ಪ್ರಮುಖ ಜವಾಬ್ದಾರಿ ನಿರ್ವಹಿಸಿದ್ದಾರೆ ಎಂದು ಪ್ರಶಂಸಿಸಿದರು.‘ಸಮಸ್ಯೆ ಎದುರಿಸುತ್ತಿರುವವರಿಗೆ ಕಾನೂನು ಸರಿಯಾಗಿ ತಿಳಿದಿರುವುದಿಲ್ಲ, ಆದರೆ ಸಮಸ್ಯೆಗಳನ್ನು ಸೃಷ್ಟಿಸಿದವರಿಗೆ ಕಾನೂನು ಚೆನ್ನಾಗಿ ತಿಳಿದಿರುತ್ತದೆ’ ಎಂದು ಚಟಾಕಿ ಹಾರಿಸಿದ ಸಚಿವರು, ‘ಮಾಹಿತಿ ಹಕ್ಕು ಕಾಯ್ದೆಯನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು, ಜನರಿಗೆ ಕಾನೂನಿನ ಅರಿವು ನೀಡಬೇಕು’ ಎಂದು ಕರೆ ನೀಡಿದರು.

ಬಿಜೆಪಿಯ ಕಾನೂನು ಘಟಕದ ವತಿಯಿಂದ ‘ಸರ್ಕಾರದಲ್ಲಿ ಪಾರದರ್ಶಕತೆ - ವಕೀಲರ ಪಾತ್ರ’ ಎಂಬ ಪರಿಕಲ್ಪನೆಯಡಿ ಏಪ್ರಿಲ್ 24ರಂದು ನವದೆಹಲಿಯಲ್ಲಿ ಸಮಾವೇಶ ನಡೆಯಲಿದೆ ಎಂದು ಅವರು ಹೇಳಿದರು. ಈ ಸಮಾವೇಶಕ್ಕೆ ರಾಜ್ಯದಿಂದ 2000 ಮಂದಿ ತೆರಳಲಿದ್ದಾರೆ.ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿ ಭೂಪೇಂದ್ರ ಯಾದವ್ ಮಾತನಾಡಿ, ‘ದೇಶಭಕ್ತಿಯ ಭಾವವನ್ನು ಜನಸಾಮಾನ್ಯರ ಮಟ್ಟಕ್ಕೆ ತಲುಪಿಸಬೇಕು, ಸಾಮಾಜಿಕ ಚಳವಳಿಗಳೊಂದಿಗೆ ಗುರುತಿಸಿಕೊಳ್ಳಬೇಕು’ ಎಂದು ಘಟಕದ ಕಾರ್ಯಕರ್ತರಿಗೆ ಕರೆ ನೀಡಿದರು.ಕಾನೂನು ಮತ್ತು ಶಾಸಕಾಂಗ ಘಟಕದ ರಾಜ್ಯ ಸಂಚಾಲಕ ವಿವೇಕ ರೆಡ್ಡಿ, ಮತ್ತು ಘಟಕದ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

‘ಲೋಕಸಭಾ ಚುನಾವಣೆ ಸನ್ನಿಹಿತ’
2011ರಲ್ಲಿ ಲೋಕಸಭಾ ಚುನಾವಣೆ ಎದುರಿಸಲು ಸಿದ್ಧವಾಗಿರಬೇಕು ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಅರುಣ್ ಜೇಟ್ಲಿ ಅವರು ಹಿಂದೆಯೇ ಹೇಳಿದ್ದರು. ಈಗ ಡಿಎಂಕೆ, ಎನ್ಸಿಪಿ ಪಕ್ಷಗಳ ವರ್ತನೆ ನೋಡಿದರೆ ಆ ಮಾತು ನಿಜವಾಗುವಂತಿದೆ ಎಂದು ಸುರೇಶ್ ಕುಮಾರ್ ಹೇಳಿದರು.ಬಿಜೆಪಿಯ ಕಾನೂನು ಮತ್ತು ಶಾಸಕಾಂಗ ಘಟಕದ ಸಭೆಯ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.ಭೂಪೇಂದ್ರ ಯಾದವ್ ಮಾತನಾಡಿ, ‘2-ಜಿ ಹಗರಣ, ಪಿ.ಜಿ. ಥಾಮಸ್ ನೇಮಕ ವಿವಾದ ಮುಂತಾದ ಹಗರಣಗಳ ಕುರಿತು ವಕೀಲರು ಧ್ವನಿ ಎತ್ತಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.