ಶನಿವಾರ, ಜನವರಿ 18, 2020
19 °C

ಬಿಜೆಪಿ ಕಾರ್ಯಕರ್ತರಿಂದ ವಿಜಯೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಸವನಬಾಗೇವಾಡಿ: ಉತ್ತರ ಭಾರತದ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಹೆಚ್ಚು ಸ್ಥಾನ ಪಡೆದ ಹಿನ್ನೆಲೆಯಲ್ಲಿ ಸ್ಥಳೀಯ ಬಸವೇಶ್ವರ ವೖತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ  ವಿಜಯೋತ್ಸವ ಆಚರಿಸಿದರು.ರಾಜ್ಯ ಬಿಜೆಪಿ ಕಾರ್ಯದರ್ಶಿ ಶಿವಾನಂದ ಕಲ್ಲೂರ ಮಾತನಾಡಿ.  ದೇಶದಲ್ಲಿ ಈಗ ಬಿಜೆಪಿ ಪಕ್ಷದ ಅಲೆ ಇದೆ. ಇಡೀ ದೇಶದ ಜನತೆ ದೇಶದ ಮುಂದಿನ ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಗಲಿ ಎನ್ನುವ ವಿಶ್ವಾಸದೊಂದಿಗೆ  ಬಿಜೆಪಿಗೆ ಹೆಚ್ಚು ಮತಗಳನ್ನು ನೀಡಿದ್ದಾರೆ ಎಂದರು.ಹಿರಿಯ ಧುರೀಣ, ವಕೀಲ ವಿ.ಎಂ. ಪರಣ್ಣೆನವರ, ಯುವಮೋರ್ಚಾ ತಾಲ್ಲೂಕು ಘಟಕದ ಅಧ್ಯಕ್ಷ ಸಂಗಮೇಶ ವಾಡೇದ ಮಾತನಾಡಿದರು. ವಿಜಯೋತ್ಸವದಲ್ಲಿ ಅಂಬೋಜಿ ಪವಾರ, ಪುರಸಭೆ ಸದಸ್ಯರಾದ ನೀಲು ನಾಯಕ, ಮುತ್ತು  ಕಿಣಗಿ, ಪ್ರವೀಣ ಪವಾರ, ಧುರೀಣರಾದ ಶಿವಪ್ರತ್ರಪ್ಪ ಕೆಂಭಾವಿ, ಸಂಗು ಕಲ್ಯಾಣಿ, ವೈ.ಎಸ್. ಮ್ಯಾಗೇರಿ, ಮಂಜು ಕಲಾಲ, ರಾಜು ಚಿಕ್ಕೊಂಡ, ಡಾ. ಅಂಬರೀಷ ಮಿಣಜಗಿ, ಮಹೇಶ ಹಿರೇಕುರಬರ, ಮುತ್ತು ಅಗಸರ, ಕನಕೇಶ ಬಾಗೇವಾಡಿ, ಮಹಾಂತೇಶ ಮನಗೂಳಿ, ಶರಣು ಮುದೋಳ, ಮಲಯ್ಯ ಹಿರೇಮಠ, ರಾಮೇಶ ನಿಡಗುಂದಿ  ಭಾಗವಹಿಸಿದ್ದರು.‘ಲೋಕಸಭೆ ಚುನಾವಣೆ  ದಿಕ್ಸೂಚಿ’

ಮುದ್ದೇಬಿಹಾಳ: ಉತ್ತರ ಭಾರತದ ನಾಲ್ಕು ರಾಜ್ಯಗಳಾದ ದೆಹಲಿ, ರಾಜಸ್ತಾನ, ಮಧ್ಯಪ್ರದೇಶ, ಛತ್ತೀಸಗಡ ರಾಜ್ಯಗಳಲ್ಲಿ ಭಾರತೀಯ ಜನತಾ ಪಕ್ಷ ಬಹುಮತ ಗಳಿಸಿ ಅಧಿಕಾರದ ಗದ್ದುಗೆ ಏರುವುದು ಖಚಿತವಾಗುತ್ತಿದ್ದಂತೆಯೇ ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು ಬಸವೇಶ್ವರ ವೃತ್ತದಲ್ಲಿ ಸೇರಿ ವಿಜಯೋತ್ಸವ ಆಚರಿಸಿದರು.ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಪ್ರಭು ಕಡಿ, ಭವಿಷ್ಯದ ಲೋಕಸಭೆಯ ಚುನಾವಣೆಯ ದಿಕ್ಸೂಚಿ ಎಂದೇ ಗುರುತಿಸಲಾಗಿತ್ತು. ಇದರಲ್ಲಿ ಬಿಜೆಪಿ ಗೆಲುವು ಸಾಧಿಸಿರುವುದರಿಂದ  ನರೇಂದ್ರ ಮೋದಿ ಅವರ ದಾರಿ ಸುಗಮವಾಗಿದೆ ಎಂದು ಹೇಳಿದರು.ರಾಜಶೇಖರ ಹೊಳಿ, ಉದಯ ರಾಯಚೂರ ಮಾತನಾಡಿದರು. ವಿಜಯೋತ್ಸವದಲ್ಲಿ ಮಲಕೇಂದ್ರಗೌಡ ಪಾಟೀಲ, ಬಾಬುಲಾಲ ಓಸ್ವಾಲ, ಮಾಣಿಕ ದಂಡಾವತಿ, ಅರವಿಂದ ಕಾಶೀನಕುಂಟಿ, ಶಂಕರಗೌಡ ಪಾಟೀಲ,  ಮುತ್ತು ದಳವಾಯಿ, ಜಗದೀಶ ಪಂಪಣ್ಣವರ, ಸಂತೋಷ ಬಾವೂರ, ಶರಣು ಸಜ್ಜನ, ದೀಪಕ ರಾಯಚೂರ, ಶಿವಣ್ಣ ವಾಲೀಕಾರ, ಶ್ರೀಕಾಂತ ಹಿರೇಮಠ, ಬಸವಂತ ಘಾಟಗೆ, ಮುತ್ತು ತಾಳಿಕೋಟಿ, ಸಿದ್ದಯ್ಯ ಗುರುವಿನ  ಪಾಲ್ಗೊಂಡಿದ್ದರು.ಸಿಹಿ ವಿತರಣೆ

ಚಡಚಣ: ನಾಲ್ಕು ರಾಜ್ಯಗಳಲ್ಲಿ  ಬಿಜೆಪಿ ಬಹುಮತ  ಪಡೆಯುತ್ತಿದ್ದಂತೆಯೇ  ಚಡಚಣದಲ್ಲಿ ಬಿಜೆಪಿ ಕಾರ್ಯಕರ್ತರು  ವಿಜಯೋತ್ಸವ  ಆಚರಿಸಿ, ಸಿಹಿ ಹಂಚಿ ಪಟಾಕಿ ಸಿಡಿಸಿ  ಸಂಭ್ರಮಿಸಿದರು.ಸ್ಥಳೀಯ ಬಸವೇಶ್ವರ ವೃತ್ತದಲ್ಲಿ  ಜಮಾಯಿಸಿದ ಕಾರ್ಯಕರ್ತರು, ಮೋದಿ  ಪರ ಘೋಷಣೆ  ಕೂಗಿದರು. ಬಿಜೆಪಿ  ನಾಗಠಾಣ ಬ್ಲಾಕ್‌ ಅಧ್ಯಕ್ಷ ಹಣಮಂತ ಹೂನಳ್ಳಿ, ಮೋದಿ ಅಲೆಯಲ್ಲಿ  ಕಾಂಗ್ರೆಸ್‌ ಕೊಚ್ಚಿಹೋಗಿದೆ. ಲೋಕಸಭಾ ಚುಣಾ ವಣೆಯಲ್ಲಿ    ಬಿಜೆಪಿ ಅತ್ಯಧಿಕ ಸ್ಥಾನ ಪಡೆದು  ನರೇಂದ್ರ ಮೋದಿ  ಪ್ರಧಾನಿ ಯಾಗುವ  ಮೂನ್ಸೂಚನೆಯಾಗಿದೆ  ಎಂದರು.ಮುಖಂಡ  ಗಂಗಾಧರ ಪಾವಲೆ   ಮಾತನಾಡಿ, ರಾಜ್ಯದಲ್ಲಿ  ಮೋದಿ ಆಟ ನಡೆಯದು ಎಂಬ   ಮುಖ್ಯಮಂತ್ರಿಗಳ  ಹೇಳಿಕೆಗೆ ನಾಲ್ಕು ರಾಜ್ಯಗಳ  ಚುನಾವಣೆಯ ಫಲಿತಾಂಶ ತಕ್ಕ  ಉತ್ತರ ನೀಡಿದೆ  ಎಂದರು.ಬಿಜೆಪಿ  ಚಡಚಣ ಬ್ಲಾಕ್‌ ಅಧ್ಯಕ್ಷ ಶಿವಾನಂದ ಖಟ್ಟಿ, ಮುಖಂಡ  ಪ್ರಭಾಕರ ನಿರಾಳೆ, ಸೋಮು ಬಡಿಗೇರ, ಮಹೇಶ  ಸಿಂಧೆ, ಮಹಾದೇವ ಕರ್ಲಮಳ  ಮಾತನಾಡಿ   ರಾಜ್ಯಲ್ಲಿ   ಮುಂಬ ರುವ  ಚುಣಾವಣೆಯಲ್ಲೂ  ಬಿಜೆಪಿ ಅತ್ಯಧಿಕ ಸ್ಥಾನ ಪಡೆಯುವುದರಲ್ಲಿ ಯಾವುದೇ  ಸಂಶಯವಿಲ್ಲ  ಎಂದರು.ವಿಜಯೋತ್ಸವದಲ್ಲಿ  ತಾಲ್ಲೂಕು ಪಂಚಾಯಿತಿ ಸದಸ್ಯರಾದ ಅಶೋಕ ನಡಗಟ್ಟಿ, ರಾಮ ಅವಟಿ,ಮುಖಂಡ ಅಶೊೋಕ ಕುಲಕರ್ಣಿ,ಸುರೇಶ ಮೊಗಲಿ, ಶ್ರೀಶೈಲ ಹತ್ತರಕಿ,ಸಿದ್ದು ತೆಲಗಾಂವ, ಅಕ್ಬರ್  ಮುಲ್ಲಾ, ಧರೆಪ್ಪ ಕೋಟಿ, ಸದಾಶಿವ ಪಾವಲೆ, ಚನ್ನಪ್ಪ ಕೆಶೆಟ್ಟಿ, ಸಿದ್ದರಾಮ ಅಲಮೇಲ, ಶ್ರೀಶೈಲ ಮಾಳಕೊಟಗಿ, ರಾಮಚಂದ್ರ ಬಡಿಗೇರ, ಸದಾಶಿವ ಬಗಲಿ, ಬಸವರಾಜ ಕೊನೆರಿ, ಸದಾಶಿವ ಟಕ್ಕಳಕಿ, ಬಿ.ಆರ್‌.ತೇಲಿ, ಬಸವರ  ಅಂಕದ, ಅಶೋಕ  ಕರಜಗಿ   ಪಾಲ್ಗೊಂಡಿದ್ದರು.ಜೀರಂಕಲಗಿ: ಚಡಚಣ ಸಮೀಪದ ಜೀರಂಕಲಗಿಯಲ್ಲಿ    ಬಿಜೆಪಿ ಕಾರ್ಯಕರ್ತರು  ಪಟಾಕಿ ಸಿಡಿಸಿ ವಿಜೋತ್ಸವ ಆಚರಿಸಿದರು.ಮಹಾದೇವ ಕರ್ಲಮಳ, ಭೀಮಾಶಂಕರ ತೇಲಿ,ಸದಾಶಿವ ಭತಗುಣಕಿ, ಚನಬಸಯ್ಯ  ಬಾಲಗಾಂವ, ಬಸವರಾಜ, ಯತ್ನಾಳ, ಸಂತೋಷ ಕರ್ಲಮಳ  ಭಾಗವಹಿಸಿದ್ದರು.ಲೋಣಿ ಬಿಕೆ  ಗ್ರಾಮದಲ್ಲೂ  ಬಿಜೆಪಿ ಕಾರ್ಯಕರ್ತರು  ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು. ರಮೇಶ  ಜಿತ್ತಿ, ನಾಗಪ್ಪ ಜಿತ್ತಿ, ನಿಂಗಣ್ಣ ಮಂದಾಲಿ, ಸಿದ್ದು ಜಿತ್ತಿ, ಶ್ರೀಶೈಲ ಜಿತ್ತಿ, ರಾಜಶೇಖರ ಜಿತ್ತಿ, ರಾಜು  ಕೋಳಿ, ಅರವಿಂದ ಹಾವಿನಾಳ, ಬಸವರಾಜ ಆಕಳವಾಡಿ, ಮುದಕಪ್ಪ ಹೊಸಮನಿ, ಸುರೇಶ ಜಿತ್ತಿ  ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)