ಮಂಗಳವಾರ, ಜುಲೈ 14, 2020
27 °C

ಬಿರುಗಾಳಿ: ದೂಳಿನ ಸ್ನಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿರುಗಾಳಿ: ದೂಳಿನ ಸ್ನಾನ

ಕೆಜಿಎಫ್: ನಗರದ ರಾಬರ್ಟ್‌ಸನ್‌ಪೇಟೆ ಬಳಿ ಮಂಗಳವಾರ ಸಂಜೆ ಬೀಸಿದ ಭಾರಿ ಬಿರುಗಾಳಿಯಿಂದ ನಗರದ ಜನತೆ ಸೈನೆಡ್ ದೂಳಿನ ಸ್ನಾನ ಅನುಭವಿಸಿದರು.ಸಂಜೆ 4.30ರಿಂದ ಸುಮಾರು ಅರ್ಧ ಗಂಟೆ ಕಾಲ ಬೀಸಿದ ಬಿರುಗಾಳಿಯಿಂದ ಊರಿಗಾಂ, ಕೆನಡೀಸ್ ಲೈನ್, ಅಶೋಕನಗರ, ಡಾ.ಅಂಬೇಡ್ಕರ್ ರಸ್ತೆ, ಎಂ.ಜಿ.ಮಾರುಕಟ್ಟೆ ಸಂಕೀರ್ಣ ಹಾಗೂ ರಾಬರ್ಟ್‌ಸನ್‌ಪೇಟೆ ಸಂಪೂರ್ಣವಾಗಿ ದೂಳುಮಯವಾಯಿತು.ಬಿಜಿಎಂಎಲ್‌ನ ಸೈನೆಡ್ ಗುಡ್ಡದ ಮೇಲ್ಭಾಗದ ತೆಳುಮಣ್ಣು ಬಿರುಗಾಳಿಯೊಂದಿಗೆ ಮಿಶ್ರವಾಗಿ ಹರಡತೊಡಗಿದಾಗ ಇಡೀ ಪ್ರದೇಶದ ಜನತೆ ಸಂಕಟ ಪಡುವಂತಾಯಿತು.

ಬಸ್ ನಿಲ್ದಾಣದಲ್ಲಿದ್ದ ಸಾವಿರಾರು ಜನ ದೂಳಿನಿಂದ ರಕ್ಷಿಸಿಕೊಳ್ಳಲು ಸುರಕ್ಷಿತ ಸ್ಥಳಕ್ಕೆ ಓಡಿದರು. ಪಾದಚಾರಿಗಳು ಹಾಗೂ ವಾಹನ ಚಾಲಕರು ದೂಳಿನಿಂದ ತಪ್ಪಿಸಿಕೊಳ್ಳಲು ಹರಸಾಹಸ ಮಾಡುತ್ತಿದ್ದ ದೃಶ್ಯ ಕಂಡು ಬಂದಿತು.ಮಂಗಳವಾರ ಬಹುತೇಕ ಅಂಗಡಿಗಳು ಮುಚ್ಚಿದ್ದ ಕಾರಣ ವ್ಯಾಪಾರಿಗಳು ನಿಟ್ಟುಸಿರು ಬಿಡುವಂತಾಯಿತು. ತೆರೆದಿದ್ದ ಅಂಗಡಿಗಳ ಮಾಲೀಕರು ಸಹ ಕೆಲ ಹೊತ್ತು ಅಂಗಡಿಗಳ ಬಾಗಿಲನ್ನು ಮುಚ್ಚಿ ಗಾಳಿ ನಿಲ್ಲುವುದನ್ನೇ ಕಾಯುತ್ತಿದ್ದರು.ಸೈನೆಡ್ ಗುಡ್ಡದಿಂದ ನಗರದ ಜನತೆ ಕಷ್ಟ ಅನುಭವಿಸುವುದು ಹೊಸತೇನೂ ಅಲ್ಲದಿದ್ದರೂ; ಸಾಮಾನ್ಯವಾಗಿ ಆಷಾಢದಲ್ಲಿ ಏಳುತ್ತಿದ್ದ ದೂಳು ಈಗ ಅಕಾಲದಲ್ಲಿ ಎದ್ದಿದ್ದು ತಾಪತ್ರಯಕ್ಕೆ ಕಾರಣವಾಯಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.