ಬುಧವಾರ, ಜೂನ್ 16, 2021
23 °C

ಬಿಸಿಯೂಟ: ಎಚ್ಚರಿಕೆ ಅಗತ್ಯ

ಶರಣಪ್ಪ ಹಾಳಕೇರಿ,ಯಲಬುರ್ಗಾ Updated:

ಅಕ್ಷರ ಗಾತ್ರ : | |

ಶಾಲೆಗಳಿಗೆ ಬಿಸಿಯೂಟ ಯೋಜನೆ ಜಾರಿಯಾದಾಗಿನಿಂದ ಒಂದಲ್ಲ ಒಂದು ದುರಂತ ನಡೆಯುತ್ತಲೇ ಇದೆ. ಇದಕ್ಕೆ ಶಾಲೆಯ ಸಿಬ್ಬಂದಿ ಮತ್ತು ಶಿಕ್ಷಕರ ನಿರ್ಲಕ್ಷ್ಯವೇ ಕಾರಣ. ಇತ್ತೀಚೆಗೆ ರೋಣ ತಾಲ್ಲೂಕಿನ ಮಾರನಬಸರಿಯಲ್ಲಿ ಮಧ್ಯಾಹ್ನದ ಬಿಸಿಯೂಟ ಸೇವಿಸಿ ೪೦ ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದರು.ಕೂಡಲೇ ಅವರನ್ನು ಪಾಲಕರು ಆಸ್ಪತ್ರೆಗೆ ದಾಖಲಿಸಿ ಪ್ರಾಣಪಾಯದಿಂದ ಪಾರು ಮಾಡಿದ್ದಾರೆ. ಅಡುಗೆ ತಯಾರಿಸುವವರ ನಿರ್ಲಕ್ಷ್ಯದಿಂದ ಮಹತ್ವದ ಯೋಜನೆಗೆ, ಶಾಲೆಗೆ ಕೆಟ್ಟ ಹೆಸರು ಬರುತ್ತಿದೆ.  ಈ ರೀತಿಯ ನಿರ್ಲಕ್ಷ್ಯದಿಂದ ನೂರಾರು ವಿದ್ಯಾರ್ಥಿಗಳಿಗೆ ತೊಂದರೆಯಾ­ಗುತ್ತದೆ.ತಾವು ಮಾಡುವ ಅಡುಗೆ ಮುಗ್ಧ ಮಕ್ಕಳ ಜೀವಕ್ಕೆ ಕುತ್ತು ತರಬಾರದು ಎನ್ನುವ ಅರಿವು ಸಿಬ್ಬಂದಿಗೆ ಇರಬೇಕು. ಸದಾ ಎಚ್ಚರ ವಹಿಸಬೇಕು.  ಶಿಕ್ಷಕರು ಅವರಿಗೆ ತಿಳಿಹೇಳಬೇಕು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.