ಮಂಗಳೂರು: ಬಿಸಿಯೂಟ ನೌಕರರ ವೇತನ ಏರಿಕೆ ಮಾಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ ನಗರದ ಜಿಲ್ಲಾ ಪಂಚಾಯತ್ ಕಚೇರಿ ಮುಂದೆ ಶುಕ್ರವಾರ ಧರಣಿ ಸತ್ಯಾಗ್ರಹ ನಡೆಸಿತು.

ಈ ಹೋರಾಟದದಿಂದ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ರೂ500 ಏರಿಕೆ ಮಾಡಲು ಒಪ್ಪಿಕೊಂಡಿವೆ.

ದ.ಕ. ಸಿಐಟಿಯು ಪ್ರದಾನ ಕಾರ್ಯದರ್ಶಿ ವಸಂತ ಆಚಾರಿ ಸತ್ಯಾಗ್ರಹವನ್ನು ಉದ್ದೇಶಿಸಿ ಮಾತನಾಡಿ, ಈ ಹೋರಾಟದಿಂದ ಬಿಸಿಯೂಟ ನೌಕರರ ವೇತನ ಏರಿಕೆಯಾಗಲು ಇಡೀ ನೌಕರರು ಕಾರಣ. ಕನಿಷ್ಠ ₨3000 ವೇತನ ನೀಡಬೇಕು ಎಂಬುದು ಬೇಡಿಕೆ ಆಗಿತ್ತು. ಈಗ ಏರಿಕೆ ಆಗಿರುವ ಮೊತ್ತವನ್ನು ಸ್ವೀಕರಿಸಿ, ರಾಜ್ಯ ಸರ್ಕಾರ ಮುಂದಿನ ದಿನಗಳಲ್ಲಿ ವೇತನ ಏರಿಕೆ ಮಾಡಬೇಕು ಎಂದು ಅವರು ಒತ್ತಾಯಿಸಿದರು.

ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಜೆ. ಬಾಲಕೃಷ್ಣ ಶೆಟ್ಟಿ, ಸದಸ್ಯರಾದ ರಮಣಿ ಮೂಡುಬಿದಿರೆ, ಜಯಂತಿ.ಬಿ. ಶೆಟ್ಟಿ, ರಾಧ ಮೂಡುಬಿದಿರೆ, ಬಿ.ಕೆ. ಇಮ್ತಿಯಾಜ್ ಬಿಸಿಯೂಟ ನೌಕರರ ಸಂಘದ ಪದ್ಮಾವತಿ ಶೆಟ್ಟಿ, ಗಿರಿಜ ಮೂಡುಬಿದಿರೆ, ಭವ್ಯ. ಜೆ., ಸರೋಜಿನಿ ಉಳ್ಳಾಲ ಸತ್ಯಾಗ್ರಹದಲ್ಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.