ಸೋಮವಾರ, ಮೇ 17, 2021
26 °C

ಬೀದರ್ ಉತ್ಸವ ರದ್ದುಪಡಿಸಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್: `ಬೀದರ್ ಉತ್ಸವ~ ರದ್ದುಪಡಿಸುವಂತೆ ಒತ್ತಾಯಿಸಿ ವಿವಿಧ ಸಂಘಟನೆಗಳ ಪ್ರಮುಖರು ಜಿಲ್ಲಾ ಉಸ್ತುವಾರಿ ಸಚಿವ ರೇವುನಾಯಕ್ ಬೆಳಮಗಿ ಅವರಿಗೆ ನಗರದಲ್ಲಿ ಗುರುವಾರ ಮನವಿ ಸಲ್ಲಿಸಿದರು.ಸಚಿವ ಬೆಳಮಗಿ ಅವರು ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಬಾಬು ಜಗಜೀವನರಾಮ್ ಅವರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದರು. ಈ ವೇಳೆ ಅವರನ್ನು ಭೇಟಿಯಾಗಲು ಬಂದ ಸಂಘಟನೆಗಳ ಪ್ರಮುಖರು ಕಚೇರಿಯ ಎದುರು ಜಮಾಯಿಸಿದರು.ಸಚಿವರು ಕಾರ್ಯಕ್ರಮ ಮುಗಿಸಿಕೊಂಡು ಬಿಜೆಪಿ ಕಚೇರಿಯಿಂದ ಹೊರ ಬರುತ್ತಲೇ ಘೋಷಣೆಗಳನ್ನು ಹಾಕಿದರು. ಬೀದರ್ ಉತ್ಸವ ಜಿಲ್ಲಾಧಿಕಾರಿಗಳ ಉತ್ಸವವಾಗಿದೆ. ಉತ್ಸವ ಯಾರಿಗೂ ಬೇಕಿಲ್ಲ. ಆದರೆ, ಜಿಲ್ಲಾಧಿಕಾರಿಗಳು ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆಪಾದಿಸಿದರು.ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಇದೆ. 50 ಸಾವಿರ ಬಾವಿಗಳು ಬತ್ತಿ ಹೋಗಿವೆ. ಇಂತಹ ಸಂದರ್ಭದಲ್ಲಿ ದೇಣಿಗೆ ಸಂಗ್ರಹಿಸಿ ಉತ್ಸವ ಆಚರಿಸಲಾಗುತ್ತಿದೆ. ಆದ್ದರಿಂದ ಉತ್ಸವವನ್ನು ರದ್ದುಪಡಿಸಿ ಆ ಹಣವನ್ನು ಕುಡಿಯುವ ನೀರು ಮತ್ತು ಮೇವು ಖರೀದಿಗೆ ಬಳಸಬೇಕು ಎಂದು ಒತ್ತಾಯಿಸಿದರು.ಬೀದರ್ ಉತ್ಸವ ವಿರೋಧಿ ಒಕ್ಕೂಟದ ಪ್ರಮುಖರಾದ ಈಶ್ವರಪ್ಪ ಚಾಕೋತೆ, ರಾಜಕುಮಾರ ಮೂಲಭಾರತಿ, ಅರುಣ ಕುದರೆ ಮತ್ತಿತರರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.