ಬುಧವಾರ, ಜೂನ್ 23, 2021
29 °C

ಬೀರೂರು: ಕುಸ್ತಿ ಪಂದ್ಯಾವಳಿಗೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀರೂರು: ಪುರಸಭೆ ವತಿಯಿಂದ ನಡೆಯಲಿರುವ ಮೂರು ದಿನಗಳ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿಗೆ ಶುಕ್ರವಾರ ಅಖಾಡ ಪೂಜೆ ನಡೆಸುವ ಮೂಲಕ ಚಾಲನೆ ನೀಡಲಾಯಿತು.ಶ್ರೀವೀರಭದ್ರಸ್ವಾಮಿ ರಥೋತ್ಸವ ಅಂಗವಾಗಿ ಪ್ರತಿವರ್ಷ ನಡೆದುಕೊಂಡು ಬಂದಿರುವ ಕುಸ್ತಿ ಪಂದ್ಯಾವಳಿಗೆ ಪುರಸಭೆ ಮಾಜಿ ಅಧ್ಯಕ್ಷ ಎಂ.ಪಿ.ಷಡಕ್ಷರಯ್ಯ ಚಾಲನೆ ನೀಡಿದರು.ನಂತರ ಮಾತನಾಡಿ, ಕುಸ್ತಿ ಪಂದ್ಯಾವಳಿ ಪಟ್ಟಣದಲ್ಲಿ ಬಹಳ ವರ್ಷಗಳಿಂದ ನಡೆದುಕೊಂಡು ಬಂದಿದೆ. ಈ ಬಾರಿ ಯಶಸ್ವಿಯಾಗಲಿ  ಎಂದರು. ರಾಜ್ಯದ ವಿವಿಧೆಡೆಯಿಂದ ಬರುವ ಕುಸ್ತಿಪಟುಗಳಿಗೆ ಉಚಿತ ಊಟ ಮತ್ತು ವಸತಿ ಕಲ್ಪಿಸಲಾಗಿದೆ.

 

ಪುರಸಭಾಧ್ಯಕ್ಷ ಎಸ್.ರಮೇಶ್, ಸದಸ್ಯರಾದ ಎಂ.ಪಿ.ದಯಾನಂದ್, ಡಿ.ಆರ್.ಯತೀಶ್, ಬಿ.ಸಿ.ಪ್ರಕಾಶ್, ರುದ್ರಪ್ಪ, ಸಿ.ಎಸ್.ರುದ್ರಪ್ಪ, ತೀರ್ಪುಗಾರರಾದ ಕಲ್ಲೇಶ್, ರಾಯಪ್ಪ, ಬಸಪ್ಪ, ಜಿ.ಕೃಷ್ಣಮೂರ್ತಿ, ಎಂ.ಐ.ಬಸವರಾಜ್, ಕುಮಾರಶಾಸ್ತ್ರಿ ಮತ್ತಿತರರು ಕಾರ್ಯಕ್ರಮದಲ್ಲಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.