ಮಕ್ಕಳಿಗೆ ಬುದ್ಧಿ ಹೇಳುವುದು ನನಗಿಷ್ಟವಿಲ್ಲ. ಯಾವತ್ತೂ ಏನನ್ನಾದರೂ ಹೇಳುವ ಅಮ್ಮ ನಾನಲ್ಲವೇ ಅಲ್ಲ ಅಂತ ಹಾಲಿವುಡ್ ನಟಿ ಏಂಜಲಿನಾ ಜ್ಯೂಲಿ ಹೇಳಿಕೊಂಡಿದ್ದಾರೆ.

ಬ್ರಾಡ್ ಪ್ರಿಟ್ನೊಂದಿಗೆ ಆರು ಮಕ್ಕಳನ್ನು ಸಲಹುತ್ತಿರುವ ಏಂಜಲಿನಾ ತಮ್ಮ ಪ್ರವಾಸದ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡುವುದಾಗಿಯೂ ಹೇಳುತ್ತಾರೆ.

ನನ್ನ ಸಮಾಜ ಸೇವೆಯ ಬಗ್ಗೆ ಮಕ್ಕಳಿಗೆ ಉಪದೇಶಗಳನ್ನು ನೀಡುವುದಿಲ್ಲ. ಆದರೆ ನನ್ನ ಪ್ರವಾಸ, ರೆಫ್ಯೂಜಿ ಕ್ಯಾಂಪುಗಳಿಗೆ ಭೇಟಿ ಮುಂತಾದವುಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತೇನೆ. ಎಲ್ಲಿಗೆ ಹೊರಟಿದ್ದೇನೆ, ಯಾಕೆ ಹೊರಟಿದ್ದೇನೆ ಎಂಬುದನ್ನು ಸ್ಪಷ್ಟ ಪಡಿಸುತ್ತೇನೆ. ಕೆಲವೆಡೆ ಸಾಧ್ಯವಿದ್ದಲ್ಲಿ ಅವರನ್ನೂ ಕರೆದೊಯ್ಯುತ್ತೇನೆ. ಜಗತ್ತು ಇದ್ದಂತೆಯೇ ಅವರು ನೋಡಲಿ ಎಂಬುದು ನನ್ನ ಬಯಕೆ. ನನ್ನ ಕಣ್ಣಿನಿಂದ ಅವರು ಲೋಕವನ್ನು ನೋಡಬೇಕಾಗಿಲ್ಲ. ಅವರು ತಮ್ಮ ತಾಯ್ನಾಡಿಗೂ ಆಗಾಗ ಭೇಟಿ ನೀಡುತ್ತಾರೆ. ಇದರಿಂದ ವಿಶ್ವದ ಬಗ್ಗೆ ವಾಸ್ತವ ಚಿತ್ರಣ ದೊರೆಯುತ್ತದೆ ಎಂದು ಹೇಳುತ್ತಾರೆ ಅವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.