ಗುರುವಾರ , ಜೂನ್ 24, 2021
21 °C

ಬೆಂಕಿ ಆಕಸ್ಮಿಕ: ಗುಡಿಸಲು, ಮನೆಗಳಿಗೆ ಹಾನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಕಿ ಆಕಸ್ಮಿಕ: ಗುಡಿಸಲು, ಮನೆಗಳಿಗೆ ಹಾನಿ

ಚಿಕ್ಕೋಡಿ: ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮವಾಗಿ 11 ಕುಟುಂಬಗಳಿಗೆ ಸೇರಿದ 9 ಗುಡಿಸಲು ಮತ್ತು ಮನೆಗಳು ಬೆಂಕಿಗೆ ಆಹುತಿಯಾಗಿದ್ದು, ಒಂದು ಮೇಕೆ, ಎರಡು ಮೇಕೆ ಮರಿಗಳು ದಹನಗೊಂಡಿವೆ.ಸಂಸಾರೋಪಯೋಗಿ ಮತ್ತು ಕೃಷಿ ಸಾಮಗ್ರಿಗಳು ಸುಟ್ಟು ಕರಕಲಾಗಿದ್ದು, ಅಪಾರ ಪ್ರಮಾಣ ನಷ್ಟ ಉಂಟಾದ ಘಟನೆ ಶುಕ್ರವಾರ ಮಧ್ಯಾಹ್ನ ಸುಮಾರು 12.30ಕ್ಕೆ ಸಂಭವಿಸಿದೆ.ತಾಲ್ಲೂಕಿನ ಸದಲಗಾ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ವಡಗೋಲ ಗ್ರಾಮದ ಹೊರವಲಯದಲ್ಲಿರುವ ಕಲ್ಲಪ್ಪಾ ಖೈರಮೋಡೆ (ಸಮಗಾರ) ಸೇರಿದಂತೆ ಇತರ ಎಂಟು ಕುಟುಂಬಗಳು ಮತ್ತು ಛಾಯಾ ಕಾಂಬಳೆ, ಅಣ್ಣಾಸಾಬ ಭಾಗಾಯಿ, ಮಹಾದೇವ ಭಾಗಾಯಿ ಅವರಿಗೆ ಸೇರಿದ ಗುಡಿಸಲು ಮತ್ತು ಮನೆಗಳೇ ಬೆಂಕಿಗೆ ಆಹುತಿಯಾಗಿವೆ.ಜಿ.ಪಂ. ಸದಸ್ಯ ಗಣೇಶ ಹುಕ್ಕೇರಿ, ಸದಲಗಾ ಪ.ಪಂ ಅಧ್ಯಕ್ಷ ಬಸವರಾಜ ಗುಂಡಕಲ್ಲೆ ಹಾಗೂ ಸದಸ್ಯರು, ಪ.ಪಂ ಮಾಜಿ ಅಧ್ಯಕ್ಷ ಅಣ್ಣಾಸಾಬ ಗುಂಡಕಲ್ಲೆ, ಉಪತಹಶೀಲ್ದಾರ ಡಿ.ಎನ್.ಸಂಕೇಶ್ವರಿ, ಪ.ಪಂ ಮುಖ್ಯಾಧಿಕಾರಿ ಎಸ್.ಕೆ. ಮಲಕಾಪುರೆ ಮುಂತಾದವರು ಭೇಟಿ ನೀಡಿ ಹಾನಿಗೀಡಾಗಿರುವ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ.ಪರಿಹಾರ: ಬೆಂಕಿ ಆಕಸ್ಮಿಕದಲ್ಲಿ ಆಸ್ತಿಪಾಸ್ತಿ ಕಳೆದುಕೊಂಡಿರುವ ಕುಟುಂಬಗಳಿಗೆ ತಲಾ 5 ಸಾವಿರ ರೂ.ಗಳ ಪರಿಹಾರ ಘೋಷಿಸಲಾಗಿದ್ದು, ತುರ್ತಾಗಿ ತಲಾ ಎರಡು ಸಾವಿರ ರೂ.ಗಳ ಪರಿಹಾರಧನವನ್ನು ವಿತರಿಸಲಾಗಿದೆ. ಉಳಿದ ತಲಾ ಮೂರು ಸಾವಿರ ರೂ.ಗಳನ್ನು ಶನಿವಾರ ವಿತರಿಸಲಾಗುವುದು ಎಂದು ತಿಳಿಸಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.