ದೇವನಹಳ್ಳಿಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬೆಂಗಳೂರಿನ ಸಂಸ್ಥಾಪಕ ಹಾಗೂ ಯಲಹಂಕ ನಾಡಪ್ರಭು ಕೆಂಪೇಗೌಡರ ಹೆಸರನ್ನು ಇಡಲು ಕೇಂದ್ರ ವಿಮಾನಯಾನ ಸಚಿವಾಲಯ ಒಪ್ಪಿಗೆ ನೀಡಿರುವುದು ಅತ್ಯಂತ ಸ್ವಾಗತಾರ್ಹ.

2008ರಲ್ಲಿ ಕಾರ್ಯಾರಂಭ ಮಾಡಿದ ಅಂತರರಾಷ್ಟ್ರೀಯ ದರ್ಜೆಯ ಈ ವಿಮಾನ ನಿಲ್ದಾಣ ದೇವನಹಳ್ಳಿಗೆ ಸಮೀಪದಲ್ಲಿದ್ದರೂ ಅಧಿಕೃತವಾಗಿ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ದೇಶ ವಿದೇಶಗಳಲ್ಲಿ ಪರಿಚಿತವಾಗಿದೆ.

ಈ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರನ್ನು ಇಡಬೇಕು ಎಂಬ ಒತ್ತಾಯ ಹಳೆಯದು ಅಷ್ಟೇ ಅಲ್ಲ, ಅದು ರಾಜ್ಯದ ಬಹುಜನರ ಅಪೇಕ್ಷೆ ಕೂಡ. ಇನ್ನೂ ಕೆಲವು ಹೆಸರುಗಳ ಪ್ರಸ್ತಾಪವೂ ಆಗಿತ್ತು.

ವಿಮಾನ ನಿಲ್ದಾಣ ದೇವನಹಳ್ಳಿಗೆ ಸಮೀಪದಲ್ಲಿರುವುದರಿಂದ ಅಲ್ಲಿಯೇ ಹುಟ್ಟಿ ಬೆಳೆದ ಹಿಂದಿನ ಮೈಸೂರು ಸಂಸ್ಥಾನದ ದಕ್ಷ ಆಡಳಿತಗಾರ ಹಾಗೂ ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಸೆಣಸಿದ್ದ ಟಿಪ್ಪುಸುಲ್ತಾನ್, ಹನ್ನೆರಡನೇ ಶತಮಾನದ ಸಮಾಜ ಸುಧಾರಕ ಬಸವಣ್ಣ, ಅಂತರರಾಷ್ಟ್ರೀಯ ಮನ್ನಣೆ ಗಳಿಸಿದ ಪ್ರಸಿದ್ಧ ಎಂಜಿನಿಯರ್ ಭಾರತ ರತ್ನ ಸರ್. ಎಂ. ವಿಶ್ವೇಶ್ವರಯ್ಯ ಹಾಗೂ ಕನ್ನಡಿಗರ ನೆಚ್ಚಿನ ನಟ ಡಾ. ರಾಜ್ಕುಮಾರ್ ಅವರ ಹೆಸರನ್ನು ಈ ವಿಮಾನ ನಿಲ್ದಾಣಕ್ಕೆ ಇಡಬೇಕು ಎಂದು ಕನ್ನಡ ಪರ ಸಂಘಟನೆಗಳು ಹಾಗೂ ಸಂಘ ಸಂಸ್ಥೆಗಳು ಒತ್ತಾಯಿಸಿದ್ದವು. ಈ ಎಲ್ಲ ಮಹನೀಯರೂ ಕರ್ನಾಟಕದ ಅಭಿವೃದ್ಧಿ ಹಾಗೂ ಸಾಂಸ್ಕೃತಿಕ ಶ್ರೀಮಂತಿಕೆ ಹೆಚ್ಚಿಸಲು ವಿಶಿಷ್ಟ ಕೊಡುಗೆ ನೀಡಿದವರೇ.

ಆದರೆ ಯಾರ ಹೆಸರು ಇಡಬೇಕು ಎಂಬ ವಿಷಯದಲ್ಲಿ ಒಮ್ಮತ ವ್ಯಕ್ತವಾಗಿರಲಿಲ್ಲ. ರಾಜ್ಯ ಸರ್ಕಾರ ಕೆಂಪೇಗೌಡರ ಹೆಸರು ಇಡುವಂತೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಇದೀಗ ವಿಮಾನಯಾನ ಸಚಿವಾಲಯ ಈ ಪ್ರಸ್ತಾವನೆಯನ್ನು ಒಪ್ಪಿಕೊಂಡಿದೆ. ಪ್ರಧಾನ ಮಂತ್ರಿಯವರೂ ಸಹಮತ ಸೂಚಿಸಿದ್ದಾರೆ. ಬೆಂಗಳೂರು ನಗರದ ಶಿಲ್ಪಿಯಾಗಿದ್ದ ಕೆಂಪೇಗೌಡರಿಗೆ ಇದು ಜನತೆ ನೀಡಿರುವ ಗೌರವವೂ ಆಗಿದೆ.

ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರಿಡುವುದಕ್ಕಷ್ಟೇ ಕೇಂದ್ರ ತನ್ನನ್ನು ಮಿತಿಗೊಳಿಸಿಕೊಳ್ಳಬೇಕಿಲ್ಲ. ಅಲ್ಲಿ ಕರ್ನಾಟಕದ ಸಾಂಸ್ಕೃತಿಕ ಮತ್ತು ಚಾರಿತ್ರಿಕ ಹಿರಿಮೆಯನ್ನು ಬಿಂಬಿಸುವಂತಹ ವಾತಾವರಣವನ್ನು ಸೃಷ್ಟಿಸಬೇಕು.

ಕೆಂಪೇಗೌಡ ಎನ್ನುವುದು ಕೇವಲ ಒಂದು ಹೆಸರಷ್ಟೇ ಅಲ್ಲ, ಅದು ಈ ನೆಲದ ಅದ್ಭುತ ಪರಂಪರೆಯ ದ್ಯೋತಕ ಹಾಗೂ ಇಡೀ ಜನಸಮುದಾಯದ ಅಭಿಮಾನದ ಸಂಕೇತ ಕೂಡ. ಬೆಂಗಳೂರು ವಿಮಾನ ನಿಲ್ದಾಣ ಅಂತರರಾಷ್ಟ್ರೀಯ ಗುಣಮಟ್ಟ ಪಡೆದಿದೆ.

ಐತಿಹಾಸಿಕ ಸ್ಮಾರಕಗಳಿಂದ ಸಮೃದ್ಧವಾಗಿರುವ ನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವಂತೆ ಒಳಾಂಗಣ ವಿನ್ಯಾಸವಿದ್ದರೆ ನಗರಕ್ಕೆ ಭೇಟಿ ನೀಡುವ ವಿದೇಶಿ ಪ್ರವಾಸಿಗರಿಗೆ ರಾಜ್ಯದ ಪ್ರವಾಸೋದ್ಯಮ ತಾಣಗಳ ಬಗ್ಗೆಯೂ ಕುತೂಹಲ ಮೂಡಿಸಿದಂತಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಸೂಕ್ತ ಕ್ರಮ ತೆಗೆದುಕೊಂಡರೆ ಕೆಂಪೇಗೌಡರ ಹೆಸರನ್ನು ಇಟ್ಟದ್ದಕ್ಕೇ ಸಾರ್ಥಕ ಆದೀತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.