ಶುಕ್ರವಾರ, ಜೂನ್ 18, 2021
27 °C

ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿ ಅವಶ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಸವನಬಾಗೇವಾಡಿ: `ರೈತರು ಬೆಳೆದ ಬೆಳೆಗಳಿಗೆ ಸ್ಥಿರ ವೈಜ್ಞಾನಿಕ ಬೆಲೆ ನೀಡಿದರೆ ರೈತರು ಆರ್ಥಿಕವಾಗಿ ಸಬಲರಾಗುವರು~ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಕಾಶಿನಾಥ ಸಿಂಧೂರ ಹೇಳಿದರು.ಸಮೀಪದ ಉಪ್ಪಲದಿನ್ನಿ ತಾಂಡಾದಲ್ಲಿ ಬುಧವಾರ ಕರ್ನಾಟಕ ರಾಜ್ಯ ರೈತ ಸಂಘದ ಗ್ರಾಮ ಘಟಕ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.ರೈತರು ಸುಖಿಯಾಗಿದ್ದರೆ ಎಲ್ಲರೂ ಸುಖಿಯಾಗಿರುತ್ತಾರೆ.  ರೈತರು ಸುಖಿಯಾಗಿರಬೇಕಾದರೆ ಅವರ ಸಮಸ್ಯೆಗಳನ್ನು ಶಾಶ್ವತವಾಗಿ ಬಗೆಹರಿಸುವ  ನಿಟ್ಟಿನಲ್ಲಿ ಸರಕಾರಗಳು ಕೆಲಸ ಮಾಡಬೇಕು. ಆದರೆ ಸಮಸ್ಯೆ ಎದುರಾದಾಗ ಮಾತ್ರ ಕಣ್ಣೋರೆಸುವ ಭರವಸೆಗಳನ್ನು ನೀಡಿ ರೈತಹ ಹಿತವನ್ನು ಕಡೆಗಣಿಸಲಾಗುತ್ತಿದೆ.

 

ಹೀಗೆ ಮುಂದುವರಿದರೆ ಅನ್ನದಾತ ನಿರಂತರ ಸಮಸ್ಯೆ ಎದುರಿಸಬೇಕಾಗುತ್ತದೆ. ರೈತರು ಸಮಸ್ಯೆಯಿಂದ ಹೋರಬರಬೇಕಾದರೆ ಒಗ್ಗಟ್ಟಾಗಿ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಸರಕಾರವನ್ನು ಒತ್ತಾಯಿಸಬೇಕು ಎಂದರು.ಸಂಘದ ಜಿಲ್ಲಾ ಘಟಕದ ಸಂಘಟನಾ ಕಾರ್ಯದರ್ಶಿ ಅರವಿಂದ ಕುಲಕರ್ಣಿ, ಜಿಲ್ಲೆಯಲ್ಲಿ ಐದು ನದಿಗಳು ಹರಿದರು ನೀರಿನ ಸಮಸ್ಯೆ ತಪ್ಪಿಲ್ಲ. ಏಂಟು ಜನ ಶಾಸಕರಿದ್ದರು ನೀರಿನ ಸಮಸ್ಯೆ ಬಗೆಹರಿಸಲು ಸಾಧ್ಯವಾಗುತ್ತಿಲ್ಲ. ನೀರಿನ ಸಮಸ್ಯೆ ನಿವಾರಣೆಯಾಗಬೇಕಾದರೆ ಇಚ್ಛಾಶಕ್ತಿ ಇರಬೇಕು. ಅಂದಾಗ ನೀರಾವರಿ ಸೌಲಭ್ಯ ಪಡೆಯಲು ಸಾಧ್ಯವಾಗುತ್ತದೆ ಎಂದರು.ತಾಲ್ಲೂಕು ಘಟಕದ ಅಧ್ಯಕ್ಷ ನಿಂಗರಾಜ ಆಲೂರ, ಕಾರ್ಯಾಧ್ಯಕ್ಷ ಬಸನಗೌಡ ಪಾಟೀಲ ಮಾತನಾಡಿ ಅಸಮರ್ಪಕ ವಿದ್ಯುತ್ ಪೂರೈಕೆಯಿಂದಾಗಿ ರೈತರ ಬೆಳೆಗಳಿಗೆ ಸಮಯಕ್ಕೆ ಸರಿಯಾಗಿ ನೀರು ದೊರಕುತ್ತಿಲ್ಲ. ಇದರಿಂದಾಗಿ ರೈತರು ಕಂಗಾಲಾಗಿದ್ದರೆ ಎಂದು ಹೇಳಿದರು.ಕಾರ್ಯಕ್ರಮವನ್ನು ರಾಚಯ್ಯ ಹಿರೇಮಠ ಉದ್ಘಾಟಿಸಿದರು, ಬಸಣ್ಣ ದೇಸಾಯಿ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ , ರಾಮನಗೌಡ ಪಾಟೀಲ, ಬಾಬು ಪತ್ತಾರ, ಕಾಶೀನಾಥ ರಾಠೋಡ, ಶಿವಪ್ಪ ಇಂಗಳೇಶ್ವರ, ನರಸಪ್ಪ ಬಂಡಿವಡ್ಡರ,  ಸೀತು ಲಮಾಣಿ, ಸತ್ಯಪ್ಪ ಲಮಾಣಿ, ಶಂಕರ ಲಮಾಣಿ, ಬಸವರಾಜ ಲಮಾಣಿ, ನಿಂಬು ಲಮಾಣಿ, ರೇವಣೆಪ್ಪ ಲಮಾಣಿ, ಬಾಬು ಲಮಾಣಿ, ಭೀಮು ಲಮಾಣಿ, ರಮೇಶ ಲಮಾಣಿ, ಅವಪ್ಪ ತಳ್ಳೋಳ್ಳಿ ಮುಂತಾದವರು ಉಪಸ್ಥಿತರಿದ್ದರು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.