ಶುಕ್ರವಾರ, ಫೆಬ್ರವರಿ 26, 2021
30 °C
ಐಎಎಎಫ್‌ ಡೈಮಂಡ್‌ ಲೀಗ್‌ ಅಥ್ಲೆಟಿಕ್ಸ್‌

ಬೆಳ್ಳಿ ಗೆದ್ದ ವಿಕಾಸ್‌ ಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳ್ಳಿ ಗೆದ್ದ ವಿಕಾಸ್‌ ಗೌಡ

ನವದೆಹಲಿ (ಪಿಟಿಐ): ಕರ್ನಾಟಕದ ಡಿಸ್ಕಸ್‌ ಎಸೆತಗಾರ ವಿಕಾಸ್‌ ಗೌಡ ದೋಹಾದಲ್ಲಿ ನಡೆದ ಐಎಎಎಫ್‌ ಡೈಮಂಡ್‌ ಲೀಗ್‌ ಅಥ್ಲೆಟಿಕ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದಾರೆ.ಶುಕ್ರವಾರ ನಡೆದ ಸ್ಪರ್ಧೆಯಲ್ಲಿ ವಿಕಾಸ್‌ ಡಿಸ್ಕಸ್‌ ಅನ್ನು 63.23 ಮೀ. ದೂರ ಎಸೆದು ಎರಡನೇ ಸ್ಥಾನ ಪಡೆದುಕೊಂಡರು. ಪೋಲೆಂಡ್‌ನ ಪಿಯೊಟರ್‌ ಮಲಾಚೊವ್‌ಸ್ಕಿ (66.72 ಮೀ.) ಚಿನ್ನದ ಪದಕ ತಮ್ಮದಾಗಿಸಿಕೊಂಡರು.ಎಸ್ಟೋನಿಯದ ಗರ್ಡ್‌ ಕ್ಯಾಂಟರ್‌ (62.90 ಮೀ.) ಮೂರನೇ ಸ್ಥಾನ ಪಡೆದು ಕಂಚಿನ ಪದಕ ಗಿಟ್ಟಿಸಿಕೊಂಡರು.

2010ರ ಏಷ್ಯನ್‌ ಕ್ರೀಡಾಕೂಟದಲ್ಲಿ ಕಂಚು ಜಯಿಸಿದ್ದ ವಿಕಾಸ್‌ ಅವರ ವೈಯಕ್ತಿಕ ಶ್ರೇಷ್ಠ ಸಾಧನೆ 66.90 ಮೀ. ಆಗಿದೆ. 2013 ರಲ್ಲಿ ಅವರಿಂದ ಈ ಸಾಧನೆ ಮೂಡಿಬಂದಿತ್ತು.ಟಿಂಟುಗೆ ಆರನೇ ಸ್ಥಾನ: ಮಹಿಳೆಯರ 800 ಮೀ. ಓಟದಲ್ಲಿ ಭಾರತದ ಟಿಂಟು ಲೂಕಾ ಆರನೇ ಸ್ಥಾನ ಪಡೆದರು.

ಕೇರಳದ ಅಥ್ಲೀಟ್‌ ನಿಗದಿತ ಗುರಿಯನ್ನು 2:00:56 ಸೆಕೆಂಡ್‌ಗಳಲ್ಲಿ ಕ್ರಮಿಸಿದರು. ಕೀನ್ಯಾದ ಯೂನೈಸ್‌ ಜೆಪ್ಕೊಚ್‌ (1:59.33) ಈ ವಿಭಾಗದಲ್ಲಿ ಚಿನ್ನದ ಪದಕ ಗೆದ್ದುಕೊಂಡರು.ಅಮೆರಿಕದ ಶಾನೆಲ್‌ ಪ್ರೈಸ್‌ (1:59:75) ಮತ್ತು ಜೆಕೊಸ್ಲೊವಾಕಿಯದ ಲೆನ್ಕಾ ಮನ್ಸಾ (2:00:20) ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕ ಪಡೆದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.