ಶುಕ್ರವಾರ, ಏಪ್ರಿಲ್ 23, 2021
22 °C

ಬೆಳ್ಳಿ ಪದಕ ವಿಜೇತ ವಿಜಯ್‌ಗೆ ಸನ್ಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿಮ್ಲಾ (ಪಿಟಿಐ): ಲಂಡನ್ ಒಲಿಂಪಿಕ್ಸ್‌ನ ಬೆಳ್ಳಿ ಪದಕ ವಿಜೇತ ವಿಜಯ್ ಕುಮಾರ್ ಅವರಿಗೆ ಹಿಮಾಚಲ ಪ್ರದೇಶ ಸರ್ಕಾರ ಬುಧವಾರ `ಹಿಮಾಚಲ ಗೌರವ ಸಮ್ಮಾನ್~ ಬಿರುದು ನೀಡಿ ಗೌರವಿಸಿತು. ಜೊತೆಗೆ ಒಂದು ಕೋಟಿ ರೂಪಾಯಿ ಬಹುಮಾನ ನೀಡಲಾಯಿತು.ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಪ್ರೇಮ್ ಕುಮಾರ್ ಧುಮಾಲ್ ಶೂಟರ್ ವಿಜಯ್ ಅವರನ್ನು ಸನ್ಮಾನಿಸಿದರು. ದೇಶಕ್ಕೆ ಹೆಮ್ಮೆ ತಂದ ಹರ್ಮಿಪುರ ಜಿಲ್ಲೆಯ ಯೋಧ ವಿಜಯ್ ಅವರ ಸಾಧನೆಯನ್ನು ಕೊಂಡಾಡಿದರು.ಅಷ್ಟು ಮಾತ್ರವಲ್ಲದೇ, ಸಾಧಕ ವಿಜಯ್ ಅವರಿಗೆ 1200 ಚದುರ ಅಡಿ ಜಮೀನು ನೀಡಿದರು. ವಿಜಯ್ 25 ಮೀಟರ್ಸ್‌ ರ‌್ಯಾಪಿಡ್ ಫೈರ್ ಪಿಸ್ತೂಲ್ ವಿಭಾಗದಲ್ಲಿ ಎರಡನೇ ಸ್ಥಾನ ಪಡೆದು ಬೆಳ್ಳಿ ಪದಕದ ಸಾಧನೆ ಮಾಡಿದ್ದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.