ಮಂಗಳವಾರ, ಜೂನ್ 22, 2021
28 °C

ಬೆಸ್ಕಾಂ: ಹೊಸ ಸಂಪರ್ಕಕ್ಕೆ ಆನ್‌ಲೈನ್‌ ಅರ್ಜಿ ಕಡ್ಡಾಯ

ಪ್ರಜಾವಾಣಿ ವಾರ್ತೆ/ಮಂಜುನಾಥ ಹೆಬ್ಬಾರ್‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹೊಸದಾಗಿ ವಿದ್ಯುತ್‌ ಸಂಪರ್ಕ ಪಡೆಯಲು ಗ್ರಾಹಕರು ಮುಂಬರುವ ದಿನಗಳಲ್ಲಿ ಬೆಂಗಳೂರು ವಿದ್ಯುತ್‌ ಸರಬ­ರಾಜು ಕಂಪೆನಿಯ (ಬೆಸ್ಕಾಂ) ಕಚೇರಿಗಳಲ್ಲಿ ಸರತಿ ಸಾಲಿನಲ್ಲಿ ಗಂಟೆಗಟ್ಟಲೆ ನಿಲ್ಲಬೇಕಿಲ್ಲ. ಅಂತ­ರ್ಜಾಲದ ಮೂಲಕವೇ ಅರ್ಜಿ ಸಲ್ಲಿಸಿ ನಿರಾಳರಾಗಿರಬಹುದು.ಅರ್ಜಿದಾರರು ಸಲ್ಲಿಸಿದ ದಾಖಲೆಗಳು ಸಮರ್ಪಕ ವಾಗಿದ್ದರೆ ತಿಂಗಳೊಳಗೆ ವಿದ್ಯುತ್‌ ಸಂಪರ್ಕ ಲಭ್ಯವಾಗಲಿದೆ. ಗ್ರಾಹಕರಿಗೆ ಸುಲಲಿತವಾಗಿ ಸೇವೆ ಒದಗಿಸುವ ಉದ್ದೇಶದಿಂದ ಬೆಸ್ಕಾಂ ‘ಸ್ವಯಂಚಾಲಿತ ಅಂತರ್ಜಾಲ ವ್ಯವಸ್ಥೆ’ (ವೆಬ್‌ ಸೆಲ್ಫ್‌ ಸರ್ವಿಸ್‌ ಫೋರ್ಟಲ್‌) ಜಾರಿಗೆ ತರಲು ತೀರ್ಮಾನಿಸಿದೆ. ಈ ವ್ಯವಸ್ಥೆ ಜಾರಿಗೆ ಬಂದರೆ ಅರ್ಜಿದಾರರು ಕಡ್ಡಾಯವಾಗಿ ಆನ್‌ಲೈನ್‌ ಮೂಲಕವೇ ಅರ್ಜಿ ಸಲ್ಲಿಸಬೇಕಿದೆ. ಗ್ರಾಹಕರ ಅರ್ಜಿ ಯನ್ನು ಪರಿಶೀಲಿಸಿ ಅಧಿಕಾರಿಗಳು ಅರ್ಜಿಯ ಪ್ರಗತಿಯ ಬಗ್ಗೆ ಎಸ್‌ಎಂಎಸ್‌ ಮೂಲಕ ಮಾಹಿತಿ ನೀಡಲಿದ್ದಾರೆ.ವಿದ್ಯುತ್‌ ಗುತ್ತಿಗೆದಾರರ ಪಾತ್ರ ಮನೆ ಗಳಿಗೆ ವೈರಿಂಗ್‌ ಮಾಡುವುದು ಹಾಗೂ ವಿದ್ಯುತ್‌ ಕಂಬಗಳನ್ನು ಅಳವಡಿಸು ವುದಕ್ಕೆ ಸೀಮಿತವಾಗಲಿದೆ. ವಿವಿಧ ಶುಲ್ಕದ ಹೆಸರಿನಲ್ಲಿ ಮಧ್ಯವರ್ತಿಗಳು ಗ್ರಾಹಕರನ್ನು ಸುಲಿಗೆ ಮಾಡುವುದಕ್ಕೆ ಸಹ ಕಡಿವಾಣ ಬೀಳಲಿದೆ. ಮೊದಲ ಹಂತದಲ್ಲಿ 25 ಪಟ್ಟಣಗಳಲ್ಲಿ ಈ ವ್ಯವಸ್ಥೆ ಜಾರಿಗೆ ತರಲು ಉದ್ದೇಶಿಸ ಲಾಗಿದೆ. ಬೆಸ್ಕಾಂ ವೆಬ್‌ಸೈಟ್‌ನಲ್ಲಿ ಈ ಅಂತರ್ಜಾಲ ವ್ಯವಸ್ಥೆ ಲಭ್ಯವಾಗಲಿದೆ.‘ಅಂತರ್ಜಾಲ ವ್ಯವಸ್ಥೆಯ ಸಾಧಕ ಬಾಧಕಗಳ ಬಗ್ಗೆ ಪ್ರಾಯೋಗಿಕ ಪರೀಕ್ಷೆ ನಡೆದಿದೆ. ಶೀಘ್ರದಲ್ಲಿ ನಗರ ಭಾಗದಲ್ಲಿ ವ್ಯವಸ್ಥೆಯನ್ನು ಅನುಷ್ಠಾನಕ್ಕೆ ತರಲಾಗು ವುದು. ಯಶಸ್ಸು ಗಮನಿಸಿ ಗ್ರಾಮಾಂತರ ಭಾಗದಲ್ಲೂ ಜಾರಿ ಮಾಡಲಾಗು ವುದು’ ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಪಂಕಜ್‌ ಕುಮಾರ್‌ ಪಾಂಡೆ ‘ಪ್ರಜಾವಾಣಿ’ಗೆ ತಿಳಿಸಿದರು.‘ಹೊಸ ವಿದ್ಯುತ್‌ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸಿದ ಒಂದು ತಿಂಗಳೊಳಗೆ ಗ್ರಾಹಕರಿಗೆ ಸಂಪರ್ಕ ನೀಡಬೇಕು ಎಂದು ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗ (ಕೆಇಆರ್‌ಸಿ) ಮಾರ್ಗಸೂಚಿ ರೂಪಿಸಿದೆ. ಹೀಗಾಗಿ ತ್ವರಿತ ಸೇವೆ ಒದಗಿಸಲು ತಂತ್ರಜ್ಞಾನದ ನೆರವು ಪಡೆಯಲಾಗಿದೆ. ಜೊತೆಗೆ ಗ್ರಾಹಕರ ಅಲೆದಾಟವನ್ನು ತಪ್ಪಿಸುವ ಉದ್ದೇಶ ಹೊಂದಲಾಗಿದೆ’ ಎಂದು ಅವರು ತಿಳಿಸಿದರು.

ಸಪ್ತ ಸೇವೆಗಳು...

ಸ್ವಯಂಚಾಲಿತ ಅಂತರ್ಜಾಲ ವ್ಯವಸ್ಥೆ ಮೂಲಕ ಬೆಸ್ಕಾಂ ಗ್ರಾಹಕರಿಗೆ ಏಳು ಸೇವೆಗಳನ್ನು ಒದಗಿಸಲಿದೆ.

*ಹೊಸ ಸಂಪರ್ಕಕ್ಕೆ: ಗ್ರಾಹಕರು ಅಗತ್ಯ ಮಾಹಿತಿ ಹಾಗೂ ದಾಖಲೆ ಗಳೊಂದಿಗೆ ಹೊಸ ವಿದ್ಯುತ್‌ ಸಂಪರ್ಕ ಕ್ಕಾಗಿ ಆನ್‌ಲೈನ್‌ ಮೂಲಕವೇ ಅರ್ಜಿ ಸಲ್ಲಿಸಬೇಕು.*ಅರ್ಜಿಯ ಸ್ಥಿತಿಗತಿಯ ಪರಿ ಶೀಲನೆ: ಗ್ರಾಹಕರು ಇ – ಮೇಲ್ ವಿಳಾಸ ಹಾಗೂ ಅರ್ಜಿ ಸಂಖ್ಯೆ ನೀಡುವ ಮೂಲಕ ಅರ್ಜಿಯ ಸ್ಥಿತಿಗ ತಿಯ ಬಗ್ಗೆ ಕಾಲ ಕಾಲಕ್ಕೆ ಪ್ರಗತಿಯ ವಿವರವನ್ನು ಪಡೆಯಬಹುದು.*ಹೆಸರು ಬದಲಾವಣೆ: ಈಗಾ ಗಲೇ ವಿದ್ಯುತ್‌ ಸಂಪರ್ಕ ಹೊಂದಿ ರುವ ಗ್ರಾಹಕರು ಹೆಸರು ಬದಲಾ ವಣೆಗಾಗಿ ಆನ್‌ಲೈನ್‌ ಮೂಲಕವೇ ಅರ್ಜಿ ಸಲ್ಲಿಸಬಹುದು.*ದರ ಪಟ್ಟಿ ಬದಲಾವಣೆ: ಈ ವ್ಯವಸ್ಥೆ ಗ್ರಾಹಕರಿಗೆ ಈಗಿನ ವಿದ್ಯುತ್‌ ದರ ಹಾಗೂ ಬದಲಾವಣೆ ಆಗಲಿ ರುವ ವಿದ್ಯುತ್‌ ದರದ ಬಗ್ಗೆ ಮಾಹಿತಿ ನೀಡಲಿದೆ.*ಆನ್‌ಲೈನ್‌ ಬಿಲ್‌ ಪಾವತಿ: ಗ್ರಾಹಕರು ತಮ್ಮ ವಿದ್ಯುತ್‌ ದರಗ ಳನ್ನು ಕ್ರೆಡಿಟ್‌, ಡೆಬಿಟ್‌ ಅಥವಾ ನೆಟ್‌ ಬ್ಯಾಂಕಿಂಗ್‌ ಮೂಲಕ ಆನ್‌ಲೈನ್‌ನಲ್ಲಿ  ಬಿಲ್‌ ಪಾವತಿ ಮಾಡಬಹುದು.*ಗ್ರಾಹಕರ ಇತಿಹಾಸ: ಈ ವ್ಯವಸ್ಥೆ ನೆರವಿನಿಂದ ಗ್ರಾಹಕರು ಬಿಲ್‌ ಪಾವತಿ ಯ ಇತಿಹಾಸದ ಬಗ್ಗೆ ಮಾಹಿತಿ ಪಡೆ ಯಬಹುದು. ತಮ್ಮದೇ ಖಾತೆಯನ್ನು ಸೃಷ್ಟಿಸಿಕೊಳ್ಳಬಹುದು. 24 ತಿಂಗಳ ಬಿಲ್‌ ಪಾವತಿಯ ವಿವರವನ್ನು ಪಡೆ ದುಕೊಳ್ಳಬಹುದು. ಜೊತೆಗೆ ಈ ಬಿಲ್‌ ಗಳ ನಕಲು ಪ್ರತಿಗಳನ್ನು ಪಡೆದು  ಕೊಳ್ಳಬಹುದು.*ಸೇವಾ ಬದ್ಧತೆಗಳು: ಗ್ರಾಹಕರಿಗೆ ವಿದ್ಯುತ್‌ ಬಿಲ್‌ ಬಗ್ಗೆ ಸಂಸ್ಥೆ ಮುಂಚಿತ ವಾಗಿ ಎಸ್‌ಎಂಎಸ್‌ ಮೂಲಕ ವಿವರ ನೀಡಲಿದೆ. ಅನಿಯಮಿತ ವಿದ್ಯುತ್‌ ಕಡಿತದ ಬಗ್ಗೆಯೂ ಮುಂಚಿತವಾಗಿ ಮಾಹಿತಿ ನೀಡಲಿದೆ.

ಆರಂಭಿಕ ಹಂತದಲ್ಲಿ ಎಲ್ಲೆಲ್ಲಿ ಜಾರಿ

ಬೆಂಗಳೂರು, ಆನೇಕಲ್‌, ಚಿಕ್ಕ ಬಳ್ಳಾಪುರ, ಹೊಸಕೋಟೆ, ರಾಮ ನಗರ, ಚನ್ನಪಟ್ಟಣ, ತುಮಕೂರು, ಬಂಗಾರಪೇಟೆ, ಚಳ್ಳಕೆರೆ, ಚಿಂತಾ ಮಣಿ, ಚಿತ್ರದುರ್ಗ, ದಾವಣಗೆರೆ, ದೊಡ್ಡಬಳ್ಳಾಪುರ, ಗೌರಿಬಿದ ನೂರು, ಹರಪನಹಳ್ಳಿ, ಹರಿಹರ, ಹಿರಿಯೂರು, ಕನಕಪುರ, ಕೋಲಾರ, ಕುಣಿಗಲ್‌, ಮುಳ ಬಾಗಿಲು, ಶಿಡ್ಲಘಟ್ಟ, ಶಿರಾ, ತಿಪಟೂರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.