ಬೇಡಿ ಕುರಿತ ಪುಸ್ತಕ ಇಂದು ಬಿಡುಗಡೆ

7

ಬೇಡಿ ಕುರಿತ ಪುಸ್ತಕ ಇಂದು ಬಿಡುಗಡೆ

Published:
Updated:

ಬೆಂಗಳೂರು: ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಬಿಷನ್ ಸಿಂಗ್ ಬೇಡಿ ಕುರಿತು ಸುರೇಶ್ ಮೆನನ್ ಬರೆದಿರುವ `ಬಿಷನ್- ಪೋರ್‌ಟ್ರೇಟ್ ಆಫ್ ಎ ಕ್ರಿಕೆಟರ್~ ಪುಸ್ತಕದ ಬಿಡುಗಡೆ ಶನಿವಾರ ನಡೆಯಲಿದೆ. ಸಮಾರಂಭದಲ್ಲಿ ಇ.ಎ.ಎಸ್. ಪ್ರಸನ್ನ ಅವರು ಬೇಡಿ ಕುರಿತು ಮಾತನಾಡಲಿದ್ದಾರೆ.ಜಾಗತಿಕ ಕ್ರಿಕೆಟ್ ಕಂಡಂತಹ ಶ್ರೇಷ್ಠ ಸ್ಪಿನ್ನರ್‌ಗಳಲ್ಲಿ ಒಬ್ಬರೆನಿಸಿದ್ದ ಬೇಡಿ ಜೀವನದ ಸಮಗ್ರ ಚಿತ್ರಣವನ್ನು ಮೆನನ್ ಈ ಪುಸ್ತಕದಲ್ಲಿ ತೆರೆದಿಟ್ಟಿದ್ದಾರೆ. ಅವರು ಬೆಳೆದುಬಂದ ಹಾದಿ, ಆಟಗಾರನಾಗಿ ಹೇಗಿದ್ದರು, ಭಾರತ ತಂಡದ ನಾಯಕನಾಗಿದ್ದ ಸಂದರ್ಭ ಸಹ ಆಟಗಾರರೊಂದಿಗೆ ಹೇಗೆ ವ್ಯವಹರಿಸುತ್ತಿದ್ದರು- ಮುಂತಾದ ವಿಷಯಗಳನ್ನು ಬರೆದಿದ್ದಾರೆ.ಕ್ರಿಕೆಟ್ ಜೀವನದಲ್ಲಿ ಅನುಭವಿಸಿದ್ದ ಕಷ್ಟದ, ಸೋಜಿಗದ ಸಂಗತಿಗಳನ್ನು ಇದು ಒಳಗೊಂಡಿದೆ. ಬೇಡಿ ಅವರನ್ನು ಹತ್ತಿರದಿಂದ ಬಲ್ಲವರು ನೀಡಿದ ಕುತೂಹಲಕರ ಮಾಹಿತಿಯೂ ಪುಸ್ತಕದಲ್ಲಿದೆ. ಅನಿಲ್ ಕುಂಬ್ಳೆ ಇದರ ಮುನ್ನುಡಿ ಬರೆದಿದ್ದಾರೆ.ಸ್ಥಳ: ಬೆಂಗಳೂರು ಇಂಟರ್‌ನ್ಯಾಷನಲ್ ಸೆಂಟರ್, ಟೆರಿ ಕಾಂಪ್ಲೆಕ್ಸ್, 4ನೇ ಮುಖ್ಯರಸ್ತೆ, 2ನೇ ಕ್ರಾಸ್, ದೊಮ್ಮಲೂರು 2ನೇ ಹಂತ, ಬೆಂಗಳೂರು. ಸಮಯ: ಬೆಳಿಗ್ಗೆ 11.00

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry