ಹುಣಸೂರು: ಕಲ್ಲು ಒಡೆದು ಹೊಟ್ಟೆ ತುಂಬಿಸಿಕೊಳ್ಳುವ ಈ ಜನರ ಬದುಕು ಅಕ್ಷರಶಃ ಕಲ್ಲಾಗಿ ಹೋಗಿದೆ. ನಾಗರಿಕ ಸಮಾಜಕ್ಕೆ ಅಗತ್ಯವಿರುವ ಕನಿಷ್ಠ ಸೌಲಭ್ಯಗಳೂ ಇಲ್ಲಿನ ಜನರಿಗೆ ಸಿಕ್ಕಿಲ್ಲ. ಹೀಗಾಗಿ ಇವರ ಬದುಕು ಇನ್ನೂ ಕಲ್ಲೊಳಗಿನ ಕನಸು!

ತಾಲ್ಲೂಕಿನ ವಿನೋಬಾ ಕಾಲೋನಿಯ ಸ್ಥಿತಿ ಇದು. ಹುಣಸೂರು-ರತ್ನಾಪುರಿ ಮಾರ್ಗದಲ್ಲಿರುವ ವಿನೋಬಾ ಕಾಲೋನಿಯಲ್ಲಿ ಶೇ 90 ರಷ್ಟು ಬೋವಿ ಸಮಾಜಕ್ಕೆ ಸೇರಿದ ಜನರಿದ್ದಾರೆ. ಉಳಿದವರೆಲ್ಲ ಒಕ್ಕಲಿಗರು ಮತ್ತು ತಮಿಳರು. ಬೋವಿ ಸಮಾಜದವರಿಗೆ ಕಲ್ಲು ಒಡೆಯುವ ಮತ್ತು ಮಣ್ಣಿನ ಕೆಲಸ ಮಾತ್ರ ಗೊತ್ತು. ಈ ಜನರು ತಮ್ಮ ಹೊಟ್ಟೆಪಾಡಿಗಾಗಿ ಈ ವೃತ್ತಿಯನ್ನೇ ಅವಲಂಬಿಸಿದ್ದಾರೆ. ಗ್ರಾಮದಲ್ಲಿ ಶೈಕ್ಷಣಿಕ ವ್ಯವಸ್ಥೆಗಳು ಹೇಳಿಕೊಳ್ಳುವಂತೆ ಇಲ್ಲ. ಆದರೂ ಗ್ರಾಮಸ್ಥರು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿದ್ದರಿಂದ ಇಂದು 250ಕ್ಕೂ ಹೆಚ್ಚು ಮಕ್ಕಳು ಸರ್ಕಾರಿ ಮತ್ತು ಖಾಸಗಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

ಚುನಾವಣೆ ವೇಳೆ ಬಂದು ಮುಖ ತೋರಿಸಿ ಹೋದ ಜನಪ್ರತಿನಿಧಿಗಳು ಮತ್ತೆ ಈ ಗ್ರಾಮದತ್ತ ಸುಳಿದಿಲ್ಲ. ಅಧಿಕಾರಿ ವರ್ಗಕ್ಕಂತೂ ಇಲ್ಲಿನ ಸ್ಥಿತಿಗಳ ಬಗ್ಗೆ ತಿಳಿಯುವ ಸಣ್ಣ ಕಾಳಜಿಯೂ ಇಲ್ಲ. ಹೀಗಾಗಿ ಗ್ರಾಮದ ಜನ ಕುಡಿಯುವ ನೀರು, ರಸ್ತೆ, ಚರಂಡಿ, ಉದ್ಯೋಗ, ಪಡಿತರ ವ್ಯವಸ್ಥೆ ಹೀಗೆ ಎಲ್ಲ ರೀತಿಯ ಸಮಸ್ಯೆಗಳನ್ನೂ ಎದುರಿಸಬೇಕಾಗಿದೆ.

ಒಂದೇ ಕೊಳವೆಬಾವಿ: 1975ರಲ್ಲಿ ಅಂದಿನ ಮುಖ್ಯಮಂತ್ರಿ ದಿ.ದೇವರಾಜ ಅರಸು ಮಂಜೂರು ಮಾಡಿದ್ದ ಕೊಳವೆಬಾವಿ ಈಗ ಪಳಿಯುಳಿಕೆಯಾಗಿದೆ. ಇರುವ ಒಂದೇ ಕೊಳವೆಬಾವಿಯಿಂದ ಕಾಲೋನಿಯ ಜನರಿಗೆ ನೀರು ಪಡೆಯಬೇಕಿದೆ. ಕೊಯಮತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರುವ ಈ ಕಾಲೋನಿ ಕಳೆದ 6 ತಿಂಗಳಿಂದ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದೆ. ಸರ್ಕಾರ ಕುಡಿಯುವ ನೀರಿಗಾಗಿ ವಿಶೇಷ ಯೋಜನೆ ಸಿದ್ಧಪಡಿಸಿ ಅನುದಾನ ಬಿಡುಗಡೆ ಮಾಡಿದ್ದರೂ ತಾಲ್ಲೂಕು ಪಂಚಾಯಿತಿ ಅದನ್ನು ಜಾರಿ ಮಾಡಿಲ್ಲ.

6 ವರ್ಷಗಳ ಹಿಂದೆ ನಿರ್ಮಿಸಲಾದ ಹೊಸ ಬಡಾವಣೆಯಲ್ಲಿ ಕೂಡ ಪ್ರಾಥಮಿಕ ಸವಲತ್ತುಗಳಿಲ್ಲದೆ ಜನ ಪರದಾಡಬೇಕಾಗಿದೆ. ಸುವರ್ಣ ಗ್ರಾಮ ಯೋಜನೆಯಲ್ಲಿ ಗ್ರಾಮಕ್ಕೆ ರೂ. 22 ಲಕ್ಷ ಅನುದಾನ ನೀಡಿ `ಮೂಗಿಗೆ ತುಪ್ಪ~ ಸವರಲಾಗಿದೆ. ರಸ್ತೆ, ಚರಂಡಿ ಇಲ್ಲ. ಜೋರಾಗಿ ಮಳೆ ಬಂದರೆ ಮನೆಯೊಳಗೆ ನೀರು ನುಗ್ಗುತ್ತದೆ. ಮನೆ ಸುತ್ತಮುತ್ತ ಎಲ್ಲೆಂದರಲ್ಲಿ ಚರಂಡಿ ನೀರು ಮತ್ತು ತ್ಯಾಜ್ಯ ಸಂಗ್ರಹವಾಗಿದೆ. ಇದರಿಂದ ಇಡೀ ಗ್ರಾಮದಲ್ಲಿ ವಾತಾವರಣ ಮಲಿನವಾಗಿದೆ. ಮಕ್ಕಳು, ಗರ್ಭಿಣಿಯರು, ಬಾಣಂತಿಯರು, ವೃದ್ಧರು ಸಾಂಕ್ರಾಮಿಕ ರೋಗಗಳಿಂದ ತಪ್ಪಿಸಿಕೊಳ್ಳಲು ಇನ್ನಿಲ್ಲದ ಸಾಹಸ ಮಾಡಬೇಕಿದೆ.

ಪರಿಶಿಷ್ಟ ಜಾತಿ ಯೋಜನೆಯಲ್ಲಿ ಗ್ರಾಮದ ಅಭಿವೃದ್ಧಿ ಕಾಮಗಾರಿ ಕೈಗೋಳ್ಳುವ ಅವಕಾಶವಿದ್ದರೂ ಸ್ಥಳೀಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಮನಸ್ಸು ಮಾಡಿಲ್ಲ. ಇದರಿಂದ ಗ್ರಾಮಸ್ಥರ ಹಿಡಿಶಾಪ ಅವರ ಬೆನ್ನುಬಿಟ್ಟಿಲ್ಲ.

ಶೇ 60 ರಷ್ಟು ಶೌಚಾಲಯ: ಶೌಚಾಲಯ ನಿರ್ಮಿಸಿಕೊಳ್ಳಲು ಗ್ರಾಮಸ್ಥರಿಗೆ ನಿವೇಶನವಿದ್ದರೂ ಸರ್ಕಾರ ನೀಡುವ ಅನುದಾನ ಸಮರ್ಪಕವಾಗಿ ಸಿಗುತ್ತಿಲ್ಲ. ಆದರೂ ಗ್ರಾಮದಲ್ಲಿ ಶೇ 60ರಷ್ಟು ಮನೆಗಳಿಗೆ ಶೌಚಾಲಯ ಇವೆ. ಈ ವಿಚಾರದಲ್ಲಿ ಅಧಿಕಾರಿಗಳು ಹಿಂದೆ ಬಿದ್ದಿದ್ದರೂ ಗ್ರಾಮಸ್ಥರು ಒಲವು ತೋರಿದ್ದಾರೆ. ಇನ್ನಷ್ಟು ಜನ ನೀರು, ಅನುದಾನದ ತೊಂದರೆ ಯಿಂದಾಗಿ ಶೌಚಾಲಯ ನಿರ್ಮಿಸಿಕೊಳ್ಳಲು ಮುಂದೆ ಬಂದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.