ಮಂಗಳವಾರ, ಜೂನ್ 22, 2021
23 °C

ಬ್ಯಾಡ್ಮಿಂಟನ್‌: ವಾಂಗ್‌ಗೆ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬರ್ಮಿಂಗ್‌ಹ್ಯಾಂ: ಚೀನಾದ ಶಿಕ್ಸಿಯಾನ್‌ ವಾಂಗ್‌ ಅವರು ಆಲ್‌ ಇಂಗ್ಲೆಂಡ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ ವಿಭಾಗದಲ್ಲಿ ಚಾಂಪಿಯನ್‌ ಆದರು.ಭಾನುವಾರ ನಡೆದ ಫೈನಲ್‌ನಲ್ಲಿ ನಾಲ್ಕನೇ ಶ್ರೇಯಾಂಕದ ವಾಂಗ್‌ 21-19, 21-18 ರಲ್ಲಿ ತಮ್ಮದೇ ದೇಶದ ಕ್ಸುಯೆರುಯ್‌ ಲಿ ವಿರುದ್ಧ ಗೆದ್ದರು. ಅಗ್ರಶ್ರೇಯಾಂಕ ಹೊಂದಿದ್ದ ಕ್ಸುಯೆರುಯ್‌ 50 ನಿಮಿಷಗಳಲ್ಲಿ ಸೋಲು ಅನುಭವಿಸಿದರು.ಪುರುಷರ ಡಬಲ್ಸ್‌ ವಿಭಾಗದ ಫೈನಲ್‌ನಲ್ಲಿ ಇಂಡೊನೇಷ್ಯದ ಮೊಹಮ್ಮದ್‌ ಅಹ್ಸಾನ್‌- ಹೆಂದ್ರಾ ಸೆತಿಯವಾನ್‌ 21-19, 21-19 ರಲ್ಲಿ ಜಪಾನ್‌ನ ಹಿರೋಕಿ ಎಂಡೊ- ಕೆನಿಚಿ ಹಯಕಾವ ವಿರುದ್ಧ ಗೆದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.