ಶುಕ್ರವಾರ, ಜೂನ್ 25, 2021
27 °C

ಬ್ಯಾಸ್ಕೆಟ್‌ಬಾಲ್‌: ಸುರಾನ ಕಾಲೇಜಿಗೆ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸುರಾನ ಕಾಲೇಜು ತಂಡ ಇಲ್ಲಿ ಆರಂಭವಾದ ರಾಜ್ಯ ಕಾಲೇಜು ಲೀಗ್‌ ಬ್ಯಾಸ್ಕೆಟ್‌ಬಾಲ್‌ ಟೂರ್ನಿಯಲ್ಲಿ ಜಯ ಗಳಿಸಿದೆ.

ಸರ್ಜಾಪುರದ ನ್ಯೂ ಹಾರಿಜನ್‌ ಎಂಜಿನಿಯರಿಂಗ್‌ ಕಾಲೇಜು ಮೈದಾನದಲ್ಲಿ ಸೋಮವಾರ ನಡೆದ ಪುರುಷರ ವಿಭಾಗದ ಪಂದ್ಯದಲ್ಲಿ ಸುರಾನ ಕಾಲೇಜು 44–22ರಲ್ಲಿ ಪ್ರೆಸಿಡೆನ್ಸಿ ಕಾಲೇಜು ತಂಡವನ್ನು ಮಣಿಸಿತು.ದಿನದ ಇನ್ನೊಂದು ಪಂದ್ಯದಲ್ಲಿ ಸೇಂಟ್‌ ಜೋಸೆಫ್‌ ವಾಣಿಜ್ಯ ಕಾಲೇಜು 51–16ರಲ್ಲಿ ಸಿಂಧಿ ಕಾಲೇಜಿನ ಎದುರು ಗೆಲುವು ಪಡೆಯಿತು.

ಈ ವಿಭಾಗದ ಇತರ ಪಂದ್ಯಗಳಲ್ಲಿ ಜೈನ್‌ ಕಾಲೇಜು ತಂಡ 37–10ರಲ್ಲಿ ಬಿಎಂಎಸ್‌ಸಿಇ ಎದುರೂ, ನ್ಯೂ ಹಾರ್ಜ್‌ ಎಂಜಿನಿಯರಿಂಗ್‌ ಕಾಲೇಜು ತಂಡ 53–35ರಲ್ಲಿ ಆರ್‌ವಿ ಎಂಜಿನಿಯರಿಂಗ್‌ ಕಾಲೇಜು ತಂಡದ ಮೇಲೂ ಜಯ ಪಡೆದವು.ಮೌಂಟ್‌ ಕಾರ್ಮೆಲ್‌ಗೆ ಗೆಲುವು: ಟೂರ್ನಿಯ ಮಹಿಳೆಯರ ವಿಭಾಗದ ಪಂದ್ಯದಲ್ಲಿ ಮೌಂಟ್‌ ಕಾರ್ಮೆಲ್‌ ಕಾಲೇಜು ತಂಡ 44–33ರಲ್ಲಿ ಬಿಎಂಎಸ್‌ಸಿಇ ತಂಡವನ್ನು ಸೋಲಿಸಿತು.ದಿನದ ಇನ್ನೊಂದು ಪಂದ್ಯದಲ್ಲಿ ಸೇಂಟ್‌ ಜೋಸೆಫ್‌ ವಾಣಿಜ್ಯ ಕಾಲೇಜು 54–48ರಲ್ಲಿ ಜೈನ್‌ ಕಾಲೇಜಿನ ಎದುರು ಗೆದ್ದು     ಬೀಗಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.