ಬೆಂಗಳೂರು: ಎಂಇಜಿ ತಂಡದವರು ಕರ್ನಾಟಕ ರಾಜ್ಯ ಬ್ಯಾಸ್ಕೆಟ್ಬಾಲ್ ಸಂಸ್ಥೆ ಆಶ್ರಯದಲ್ಲಿ ನಡೆದ ‘ಎ’ ಡಿವಿಷನ್ ರಾಜ್ಯ ಮಟ್ಟದ ಬ್ಯಾಸ್ಕೆಟ್ಬಾಲ್ ಟೂರ್ನಿಯಲ್ಲಿ ಚಾಂಪಿಯನ್ ಆದರು. ನಗರದ ಕಂಠೀರವ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಎಂಇಜಿ 61-55 ಪಾಯಿಂಟ್ಗಳಿಂದ ವಿಜಯಾ ಬ್ಯಾಂಕ್ ತಂಡವನ್ನು ಮಣಿಸಿ ಚಾಂಪಿಯನ್ ಪಟ್ಟ ತನ್ನದಾಗಿಸಿಕೊಂಡಿತು.

ವಿರಾಮದ ವೇಳೆಗೆ 22-33ರಲ್ಲಿ ಹಿನ್ನಡೆ ಹೊಂದಿದ್ದ ಎಂಇಜಿ ನಂತರ ಚುರುಕಿನ ಆಟವಾಡಿತು. ಜೋಸೆಫ್ (18), ಅಮಲ್ ಜೇಮ್ಸ್ (16) ಗಳಿಸಿ ಗಮನ ಸೆಳೆದರು.
‘ಬಿ’ ಡಿವಿಷನ್ ವಿಭಾಗದ ಅಂತಿಮ ಪಂದ್ಯದಲ್ಲಿ ಸಿಎಂಪಿ 50-34 ಪಾಯಿಂಟ್ಗಳಿಂದ ಕೋರಮಂಗಲ ತಂಡವನ್ನು ಮಣಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ವಿರಾಮದ ವೇಳಗೆ ಸಿಎಂಪಿ 30-11ಪಾಯಿಂಟ್ಗಳ ಮುನ್ನಡೆ ಹೊಂದಿತ್ತು. ಇದೇ ಟೂರ್ನಿಯ ‘ಸಿ’ ಡಿವಿಷನ್ನ ಪಂದ್ಯದಲ್ಲಿ ಭಾರತ್ ಸ್ಪೋಟ್ಸ್ ತಂಡ 36-34 ಪಾಯಿಂಟ್ಗಳಲ್ಲಿ ಮಂಗಳೂರಿನ ಕೆ.ಎಸ್. ಹೆಗ್ಡೆ ತಂಡವನ್ನು ಮಣಿಸಿ ಪ್ರಶಸ್ತಿಯನ್ನು ಗಳಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.