ಬ್ಯಾಸ್ಕೆಟ್ಬಾಲ್ ಸಂಸ್ಥೆ ಅಧ್ಯಕ್ಷರಾಗಿ ಓಂ ಪ್ರಕಾಶ್
ಬೆಂಗಳೂರು: ಕರ್ನಾಟಕ ರಾಜ್ಯ ಬ್ಯಾಸ್ಕೆಟ್ಬಾಲ್ ಸಂಸ್ಥೆಯ ಅಧ್ಯಕ್ಷರಾಗಿ ಪೊಲೀಸ್ ಮಹಾನಿರ್ದೇಶಕ (ಅಗ್ನಿಶಾಮಕ ದಳ ಮತ್ತು ತುರ್ತುಸೇವಾ ಇಲಾಖೆ) ಓಂ ಪ್ರಕಾಶ್ ಮತ್ತು ಕಾರ್ಯದರ್ಶಿಯಾಗಿ ಕೆ.ಗೋವಿಂದರಾಜ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಭಾನುವಾರ ನಡೆದ ಸಂಸ್ಥೆಯ ವಾರ್ಷಿಕ ಮಹಾಸಭೆಯಲ್ಲಿ ಆಯ್ಕೆಯಾದ ಇತರ ಪದಾಧಿಕಾರಿಗಳು ಇಂತಿದ್ದಾರೆ.
ಉಪಾಧ್ಯಕ್ಷರು: ಆರ್.ರಾಜನ್, ನಂದಿನಿ ಬಸಪ್ಪ, ಡಿ.ಸಿ.ತಮ್ಮಣ್ಣ, ರಾಜೇಂದ್ರ ಪ್ರಸಾದ್, ಜಂಟಿ ಕಾರ್ಯದರ್ಶಿಗಳು: ಎಸ್.ಗುಣಶೇಖರ್, ಆರ್.ಪ್ರಕಾಶ್, ಮೋಹನ್ ಕುಮಾರ್. ಖಜಾಂಚಿ;ಎಚ್.ಶ್ರೀನಿವಾಸಮೂರ್ತಿ. ಸದಸ್ಯರು: ದಾವಣಗೆರೆಯ ಮರ್ಚೆಂಟ್ಸ್ ಸ್ಪೋರ್ಟ್ಸ್ ಕ್ಲಬ್, ಕೋಲಾರದ ಕನಕ ಬ್ಯಾಸ್ಕೆಟ್ಬಾಲ್ ಕ್ಲಬ್, ದೇವಾಂಗ ಯೂನಿಯನ್ ಸ್ಪೋರ್ಟ್ಸ್ ಕ್ಲಬ್, ಜಯನಗರ ಸ್ಪೋರ್ಟ್ಸ್ ಕ್ಲಬ್, ವಿವೇಕನಗರ ಬ್ಯಾಸ್ಕೆಟ್ಬಾಲ್ ಕ್ಲಬ್ ಮತ್ತು ವಿಜಯಾ ಬ್ಯಾಂಕ್.
ರಾಜ್ಯ ಆಟಗಾರರಿಗೆ ಮಾಸಿಕ ವೇತನ: ಸಭೆಯಲ್ಲಿ 50 ಲಕ್ಷ ರೂಪಾಯಿಗಳ ವಾರ್ಷಿಕ ಬಜೆಟ್ನ ವಿವರಗಳನ್ನು ನೀಡಲಾಯಿತು. ಇದರ ಪ್ರಕಾರ ರಾಜ್ಯ ತಂಡದ ಆಟಗಾರರಿಗೆ ಮಾಸಿಕ ವೇತನವನ್ನು ನೀಡಲಾಗುವುದು. ರಾಷ್ಟ್ರೀಯ ಚಾಂಪಿಯನ್ಷಿಪ್ನಲ್ಲಿ ಗೆಲ್ಲುವ ತಂಡಕ್ಕೆ ಎರಡು ಲಕ್ಷ ರೂಪಾಯಿಗಳನ್ನು ನೀಡಲಾಗುತ್ತದೆ.
ನವೆಂಬರ್ 22ರಿಂದ ಶಿವಮೊಗ್ಗದಲ್ಲಿ ರಾಜ್ಯ ಅಸೋಸಿಯೇಷನ್ ಕಪ್ ಟೂರ್ನಿ ಮತ್ತು ಜನವರಿ ಕೊನೆಯ ವಾರದಲ್ಲಿ ಬೆಂಗಳೂರಿನಲ್ಲಿ ಫೆಡರೇಷನ್ ಕಪ್ ಟೂರ್ನಿಗಳನ್ನು ಸಂಘಟಿಸಲಾಗುವುದು ಎಂದೂ ಸಭೆಯಲ್ಲಿ ಪ್ರಕಟಿಸಲಾಯಿತು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.