ಸುರಪುರ: ನದಿಯನ್ನು ಪಕ್ಕದಲ್ಲೆ ಇಟ್ಟುಕೊಂಡು ಕುಡಿವ ನೀರಿಗೆ ಪರದಾಡುವ ಪರಿಸ್ಥಿತಿ ನಮ್ಮದಾಗಿದೆ, ಪ್ರತಿ ವರ್ಷ ಬೇಸಿಗೆ ಸಮಯದಲ್ಲಿ ಈ ಸಮಸ್ಯೆ ಉದ್ಬವಿಸುತ್ತಿದೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಶೆಳ್ಳಿಗಿ ಹತ್ತಿರ ಬ್ರಿಜ್ ಕಂ ಬ್ಯಾರೇಜ್ ಅಥವಾ ಚೆಕ್ ಡ್ಯಾಂ ನಿರ್ಮಾಣ ಮಾಡಲು ಯೋಚಿಸಿದ್ದೇನೆ.

ಈ ಬಗ್ಗೆ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸುವುದಾಗಿ ಸಣ್ಣ ಕೈಗಾರಿಕೆ ಸಚಿವ ರಾಜೂಗೌಡ ಹೇಳಿದರು.ಪಟ್ಟಣಕ್ಕೆ ಕುಡಿವ ನೀರು ಪೂರೈಸುವ ಶೆಳ್ಳಿಗಿ ಹತ್ತಿರ ಕೃಷ್ಣಾ ನದಿ ಬತ್ತಿದ ಹಿನ್ನೆಲೆಯಲ್ಲಿ ಭಾನುವಾರ ಆ ಸ್ಥಳಕ್ಕೆ ಭೇಟಿ ನೀಡಿ ಸುದ್ದಿಗಾರರಿಗೆ ತಮ್ಮ ಯೋಜನೆಯ ಬಗ್ಗೆ ಅವರು ತಿಳಿಸಿದರು.

ನದಿಗೆ ನಾರಾಯಣಪುರ ಜಲಾಶಯದಿಂದ ಒಂದು ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಸೂಚಿಸಿದ್ದೇನೆ. ಇಂದು (ಭಾನುವಾರ) ರಾತ್ರಿ ನೀರು ಶೆಳ್ಳಿಗಿ ತಲುಪಲಿದೆ. ಎಕ್ಸ್ಪ್ರೆಸ್ ವಿದ್ಯುತ್ ಲೈನ್ಗೆ ಇರುವ ಅನಧಿಕೃತ ಸಂಪರ್ಕಗಳನ್ನು ತೆಗೆಯುವಂತೆ ಜೆಸ್ಕಾಂ ಇಲಾಖೆಗೆ ಸೂಚಿಸಿದ್ದೇನೆ. ಶೀಘ್ರದಲ್ಲಿ ನೀರಿನ ಅವ್ಯವಸ್ಥೆ ಸರಿಪಡಿಸುವಂತೆ ಪುರಸಭೆಗೆ ಆದೇಶಿಸಿದ್ದೇನೆ. ಅವಶ್ಯವಿರುವ ಕಡೆ ಟ್ಯಾಂಕರ್ ಮೂಲಕ ನೀರು ಪೂರೈಸುವಂತೆ ತಿಳಿಸಿದ್ದೇನೆ ಎಂದು ವಿವರಿಸಿದರು.

ಕಳೆದ ಒಂದು ತಿಂಗಳಿಂದ ಪಟ್ಟಣಕ್ಕೆ ನೀರು ಪೂರೈಕೆಯಿಲ್ಲದೆ ಜನ ಪರದಾಡುವಂತೆ ಆಗಿದೆ. ಈ ಹಿನ್ನೆಲೆಯಲ್ಲಿ ನಾಗರಿಕರು ಹೋರಾಟಗಳನ್ನು ನಡೆಸಿದ್ದರು. ನೀರು ಪೂರೈಸುವ ಮುಖ್ಯ ಪೈಪ್ಲೈನ್ 17 ಕಡೆ ಒಡೆದಿದ್ದರಿಂದ ಮತ್ತು ವಿದ್ಯುತ್ ವ್ಯತ್ಯಯದಿಂದ ನೀರು ಪೂರೈಕೆ ಜಟಿಲವಾಗಿತ್ತು. ಪೈಪ್ಲೈನ್ ದುರಸ್ತಿ ಮಾಡುವುದರೊಳಗೆ ನದಿಯಲ್ಲಿ ನೀರು ಬತ್ತಿದ್ದರಿಂದ ಸಮಸ್ಯೆ ಇನ್ನಷ್ಟು ಭೀಕರತೆ ಪಡೆದಿತ್ತು.

ಎಚ್ಚೆತ್ತ ಪುರಭೆ ಸಚಿವ ರಾಜೂಗೌಡ ಅವರ ಸೂಚನೆಯ ಮೇರೆಗೆ ಶೆಳ್ಳಗಿ ನದಿಯ ಜಾಕ್ವೆಲ್ ಹತ್ತಿರ ಹಿಟಾಚಿ ಯಂತ್ರದ ಮೂಲಕ ನೀರು ಸಂಗ್ರಹಿಸುವ ಕಾಮಗಾರಿ ನಡೆಸಿದೆ. ಒಂದು ಸಾವಿರ ಉಸುಕಿನ ಚೀಲಗಳಿಂದ ರಿಂಗ್ಬಾಂಡ್ ಮಾಡಿ ನೀರನ್ನು ಸಂಗ್ರಹಿಸುವ ಕೆಲಸ ನಡೆದಿದೆ. ಇದಕ್ಕೆ 50 ಜನ ಕಾರ್ಮಿಕರು ದುಡಿಯುತ್ತಿದ್ದಾರೆ. ಈ ಕಾಮಗಾರಿಯನ್ನು ಸಚಿವ ರಾಜೂಗೌಡ ಭಾನುವಾರ ಪರಿಶೀಲಿಸಿದರು.

ಪುರಸಭೆ ಅಧ್ಯಕ್ಷ ಚಂದ್ರಶೇಖರ ಜಡಿಮರಳ, ಸದಸ್ಯರಾದ ತಿಪ್ಪಣ್ಣ ಬೋವಿ, ವೇಣುಮಾಧವನಾಯಕ್, ಸಿದ್ರಾಮ ಪಾಟೀಲ, ವೆಂಕಟೇಶ ಹೊಸಮನಿ, ಮುಖಂಡರಾದ ರಾಜಾ ಹನುಮಪ್ಪನಾಯಕ್, ಯಲ್ಲಪ್ಪ ಕುರಕುಂದಿ, ಪ್ರಕಾಶ ಗುತ್ತೇದಾರ್, ವೆಂಕಟೇಶ ಪೋತಲಕರ್, ಶರಣಗೌಡ ಶೆಳ್ಳಿಗಿ, ಪುರಸಭೆ ಮುಖ್ಯಾಧಿಕಾರಿ ಶಿವುಕುಮಾರ ಹಿರೇಮಠ, ವ್ಯವಸ್ಥಾಪಕ ಯಲ್ಲಪ್ಪನಾಯಕ್, ನೈರ್ಮಲ್ಯ ನೀರೀಕ್ಷಕ ಜೀವನ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.