ಮಂಗಳವಾರ, ಏಪ್ರಿಲ್ 13, 2021
25 °C

ಬ್ಲೂಟೂತ್‌ನಿಂದ ಕೆಲಸ ಮಾಡುವ ಜಾಕ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಧುಗಿರಿ:  ಮೊಬೈಲ್ ಫೋನ್ ಹ್ಯಾಂಡ್‌ಸೆಟ್‌ನಲ್ಲಿರುವ ಬ್ಲೂಟೂತ್ ಸಾಧನದಿಂದ ಲಘು ವಾಹನಗಳನ್ನು ಸುಲಭವಾಗಿ ಮೇಲೆತ್ತಿ ಚಕ್ರ ಬದಲಾಯಿಸುವ ವಿಶಿಷ್ಟ `ಜಾಕ್~ ಉಪಕರಣವನ್ನು ಚಿತ್ರದುರ್ಗದ ಎಸ್‌ಜೆಎಂಐಟಿ ಎಂಜಿನಿಯರಿಂಗ್ ಕಾಲೇಜಿನ ಆಟೊಮೊಬೈಲ್ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿ ಎಂ.ಎನ್.ಅವಿನಾಶ್ ಮತ್ತು ತಂಡ ಅಭಿವೃದ್ಧಿಪಡಿಸಿದೆ.ಲಘು ವಾಹನಗಳನ್ನು ಮೇಲೆತ್ತಲು ಬಳಸುತ್ತಿದ್ದ ಸಾಂಪ್ರದಾಯಿಕ ಮಾದರಿಯ `ಜಾಕ್~ ಬಳಸಲು ಅಪಾರ ಶ್ರಮ ಹಾಗೂ ಹೆಚ್ಚು ಸಮಯ ಬೇಕು. ಅಶಕ್ತರು ಹಾಗೂ ಅಂಗವಿಕಲರಿಗೆ `ಜಾಕ್~ ಬಳಸುವುದು ಕಷ್ಟಕರ. ಆದರೆ ಅವಿನಾಶ್ ಮತ್ತು ತಂಡ ಅಭಿವೃದ್ಧಿಪಡಿಸಿರುವ ಹೊಸ ಉಪಕರಣದಲ್ಲಿ ಇದು ಹೂ ಎತ್ತಿದಷ್ಟು ಸುಲಭ.

 

ಜೆಸಿಬಿ ಯಂತ್ರದ ಕ್ರೇನ್ ಮಾದರಿಯಲ್ಲಿ ಹೊಸ ರೀತಿಯ ಜಾಕ್ ಕಾರ್ಯ ನಿರ್ವಹಿಸುತ್ತದೆ. ಆಟೊಮೊಬೈಲ್ ವಿಭಾಗದ ಉಪನ್ಯಾಸಕ ಎನ್.ವರುಣ್ ಮಾರ್ಗದರ್ಶನದಲ್ಲಿ ವಿದ್ಯಾರ್ಥಿ ಗೆಳೆಯರಾದ ಎನ್.ಕೆ.ಸುಜೀಂದ್ರ ಮತ್ತು ಗುರುಪ್ರಸಾದ್ ಜೊತೆಗೂಡಿ ಸತತ 2ತಿಂಗಳ ಪರಿಶ್ರಮದಿಂದ ಸೂಕ್ತ ತಂತ್ರಜ್ಞಾನ ಕಂಡುಕೊಂಡೆವು ಎಂದು ಎಂ.ಎನ್.ಅವಿನಾಶ್  ಹೇಳುತ್ತಾರೆ.ಇದಕ್ಕೆ ಸೀಜರ್ ಜಾಕ್, 12 ವ್ಯಾಟ್ ಬ್ಯಾಟರಿ, 12 ವೊಲ್ಟ್ ಡಿಸಿ ಮೋಟಾರ್, ಯೂನಿವರ್ಸಲ್ ಕಪ್ಲಿಂಗ್, ಎಲೆಕ್ಟ್ರಾನಿಕ್ ಸರ್ಕ್ಯೂಟ್ (ಮೈಕ್ರೊ ಕಂಟ್ರೋಲರ್, ವೋಲ್ಟೇಜ್ ರೆಗ್ಯೂಲೇಟರ್ 10 ಆಂಪ್ಸ್ 1 ರಿಲೆ) ಉಪಕರಣಕ್ಕೆ ಬಳಕೆಯಾಗಿರುವ ಬಿಡಿ ಭಾಗಗಳ ಜೊತೆ ಸಿಂಬಾಲಿಯನ್ ಮೊಬೈಲ್ ನೋಕಿಯಾ ಎನ್ 70, ಎಸ್ 60, ಬಿ-2 ಬಳಸಲಾಯಿತು.ಮೊಬೈಲ್ ಬ್ಲೂಟೂತ್ ಆನ್ ಮಾಡಬೇಕು. ಎಲೆಕ್ಟ್ರಿಕ್ ಸರ್ಕ್ಯೂಟ್‌ನಲ್ಲಿರುವ ಬ್ಲೂಟೂತ್‌ನೊಂದಿಗೆ ಸಂಪರ್ಕ ಏರ್ಪಟ್ಟ ನಂತರ ಮೈಕ್ರೊ ಕಂಟ್ರೋಲರ್‌ಗೆ ಮಾಹಿತಿ ರವಾನೆಯಾಗುತ್ತದೆ. ರಿಲೆ ಮುಖಾಂತರ ಹಾದು ಹೋಗಿ ಡಿಸಿ ಮೋಟಾರ್ ತಲುಪುತ್ತದೆ. ಮೋಟಾರ್ ಚಾಲನೆಯಾಗಿ ಯೂನಿವರ್ಸಲ್ ತಿರುಗುತ್ತದೆ. ಈ ಸಂದರ್ಭದಲ್ಲಿ ಜಾಕ್ ಏರಿಸುವ ಅಥವಾ ಇಳಿಸುವ ಕೆಲಸ ಮಾಡಬಹುದು.ಈ ಉಪಕರಣವನ್ನು `ಜಾಕ್~ ತಯಾರಿಕೆ ಕಂಪೆನಿಗಳು ಸಣ್ಣ ಗಾತ್ರದಲ್ಲಿ ಕೂಡಿಸಬಹುದು. ಕಾರ್ ಆಕ್ಸೆಲ್‌ಗೂ ಅಳವಡಿಸಬಹುದು.ಈ ಹೊಸ ಮಾದರಿಯ ಎಲೆಕ್ಟ್ರಾನಿಕ್ ಉಪಕರಣ ತಯಾರಿಸಲು ರೂ 9910 ಖರ್ಚಾಗಿದೆ. 1 ಟನ್ ಭಾರ ಎತ್ತುವ ಸಾಮರ್ಥ್ಯ ಹೊಂದಿದೆ. ಹೆಚ್ಚು ಸಾಮರ್ಥ್ಯದ ಮೋಟಾರ್ ಬಳಸಿ ದೊಡ್ಡ ವಾಹನವನ್ನು ಸಹ ಎತ್ತಬಹುದು ಎಂದು ಎಂ.ಎನ್.ಅವಿನಾಶ್ ಹೇಳುತ್ತಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.