ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಲೋಕಾಯುಕ್ತ ವರದಿಯಲ್ಲಿ ಹೆಸರಿಸಲಾಗಿರುವ ಬಿ.ಶ್ರೀರಾಮುಲು ಮುಖ್ಯಮಂತ್ರಿ ಸದಾನಂದ ಗೌಡರ ಸಂಪುಟದಲ್ಲಿ ಸಚಿವ ಸ್ಥಾನ ಸಿಗದಿರುವ ಹಿನ್ನೆಲೆಯಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಪ್ರಕಟಿಸಿದ್ದಾರೆ. `ಲೋಕಾಯುಕ್ತ ವರದಿಯಲ್ಲಿ ಆರೋಪಿ ಎಂದು ಪ್ರಸ್ತಾಪವಾದರೆ ಸಚಿವ ಸ್ಥಾನ ತ್ಯಜಿಸುವುದಾಗಿ ಈ ಹಿಂದೆಯೇ ಹೇಳಿದ್ದೆ. ಆದ್ದರಿಂದ ಈಗ ಸಂಪುಟದಲ್ಲಿ ಸ್ಥಾನ ಸಿಗದಿರುವುದಕ್ಕೆ ನಿರಾಶೆಯೇನೂ ಆಗಿಲ್ಲ~ ಎಂದು ಹೇಳಿಕೊಂಡೇ ಬಂದ ಶ್ರೀರಾಮುಲು ಅವರ ಈಗಿನ ನಿಲುವಿನಲ್ಲಿ ಪ್ರಾಮಾಣಿಕತೆಯನ್ನು ದುರ್ಬೀನು ಹಾಕಿ ಹುಡುಕಿದರೂ ಕಾಣುವುದಿಲ್ಲ. ಬಳ್ಳಾರಿ ರೆಡ್ಡಿ ಸಹೋದರರು ಆಡಿಸಿದಂತೆ ಆಡುತ್ತಾರೆಂದೇ ಜನರಿಗೆ ಗೊತ್ತಿರುವ ಶ್ರೀರಾಮುಲು ಅವರ ಈ ನಿರ್ಧಾರ ಅವರದಲ್ಲ ಎನ್ನುವುದನ್ನು ತಿಳಿಯಲು ರಾಜ್ಯದ ಜನರಿಗೆ ಹೆಚ್ಚಿನ ರಾಜಕೀಯ ಪಾಂಡಿತ್ಯವೇನೂ ಬೇಕಿಲ್ಲ. ಅಕ್ರಮ ಗಣಿಗಾರಿಕೆಯಿಂದ ಸಂಪಾದಿಸಿದರೆನ್ನಲಾದ ಅಪಾರ ಧನಸಂಪತ್ತಿನಿಂದ ರಾಜ್ಯದ ರಾಜಕೀಯವನ್ನೇ ಹೊಲಸು ಮಾಡಿದ ಅಪಕೀರ್ತಿಗೆ ಭಾಜನರಾದ ಇಂತಹವರು ಶಾಸಕ ಸ್ಥಾನವನ್ನು ತ್ಯಜಿಸುವುದರಿಂದ ಯಾರಿಗೂ ನಷ್ಟ ಆಗಲಾರದು.

ರೆಡ್ಡಿ ಸಹೋದರರು ಮತ್ತು ಶ್ರೀರಾಮುಲು ಅವರು ಈ ಹಿಂದೆ ಸಚಿವರಾಗಿ ಕಂದಾಯ, ಪ್ರವಾಸೋದ್ಯಮ ಮತ್ತು ಆರೋಗ್ಯದಂತಹ ಪ್ರಮುಖ ಖಾತೆಗಳನ್ನು ಪಡೆದುಕೊಂಡಿದ್ದರೂ, ಆ ಕ್ಷೇತ್ರಗಳಿಗೆ ಅವರು ಮಾಡಿದ ಸಾಧನೆ ಶೂನ್ಯ ಎಂದರೆ ಅಚ್ಚರಿಯೇನಿಲ್ಲ. ಸಚಿವರಾಗಿ ಅವರು ವಿಧಾನಸೌಧದಲ್ಲಿ ಕುಳಿತು ಕಡತ ನೋಡಿದವರಲ್ಲ; ಕಷ್ಟ ಕಾರ್ಪಣ್ಯ ಹೇಳಿಕೊಳ್ಳಲು ಬಂದ ಜನರಿಗೆ ಪರಿಹಾರ ನೀಡುವುದಿರಲಿ, ಮುಖದರ್ಶನಕ್ಕೂ ಸಿಕ್ಕಿದವರಲ್ಲ. ಸಂಪುಟದ ಸಭೆ ಇದ್ದಾಗ ಅತಿಥಿಗಳಂತೆ ಬಂದು ಹೋಗುತ್ತಿದ್ದುದನ್ನು ಬಿಟ್ಟರೆ ಅವರೆಂದೂ ತಾವು ಪಡೆದ ಸಚಿವ ಖಾತೆಗಳಿಗೆ ನ್ಯಾಯ ಒದಗಿಸಿದವರಲ್ಲ. ಅವರು ವಿಧಾನಸೌಧದಲ್ಲಿನ ಅಧಿಕಾರ ಗಿಟ್ಟಿಸಿಕೊಂಡದ್ದು ತಮ್ಮ ದಂಧೆ ನಡೆಸಲು ಅನುಕೂಲವಾಗಲೆಂದೇ ಎನ್ನುವುದು ಜನಜನಿತ. ಅಕ್ರಮ ಗಣಿಗಾರಿಕೆಯ ದಂಧೆಯಲ್ಲಿ ತೊಡಗಿದ್ದ ಇವರನ್ನು ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಚಿವರನ್ನಾಗಿ ಮಾಡಿದ್ದೇ ತಪ್ಪು ಎನ್ನುವ ಜನರ ಅನಿಸಿಕೆಯನ್ನು ತಳ್ಳಿಹಾಕಲಾಗದು. ಬಿಜೆಪಿ ಅಧಿಕಾರಕ್ಕೆ ಬರುವಲ್ಲಿ ಮತ್ತು `ಆಪರೇಷನ್ ಕಮಲ~ದಿಂದ ಬೇರೆ ಪಕ್ಷಗಳ ಶಾಸಕರ ಬೆಂಬಲ ಪಡೆಯಲು ಬಳ್ಳಾರಿ ಸಚಿವರ ಆರ್ಥಿಕ ಸಂಪತ್ತಿನ ಬಳಕೆ ಆಗಿದೆ ಎನ್ನುವುದು ನಿಜವಿರಬಹುದು. ಹಾಗೆಯೇ ಯಡಿಯೂರಪ್ಪ ಸರ್ಕಾರದಲ್ಲಿನ ಭಿನ್ನಮತೀಯ ಚಟುವಟಿಕೆಗೂ ಅವರ `ಕಾಣಿಕೆ~ಯೂ ಇತ್ತು ಎನ್ನುವುದೂ ಗುಟ್ಟಾಗಿ ಉಳಿದಿಲ್ಲ. ಹಣದ ಬಲದಿಂದ ಬಿಜೆಪಿ ಸರ್ಕಾರವನ್ನು ತಮ್ಮ ತುದಿ ಬೆರಳಲ್ಲಿ ಆಡಿಸುತ್ತಾ ಬಂದ ಇವರಿಂದ ಸರ್ಕಾರಕ್ಕೆ ಒಳ್ಳೆಯದಾಗುವ ಬದಲಿಗೆ ಅದರ ವರ್ಚಸ್ಸಿಗೆ ಧಕ್ಕೆ ಆಗಿರುವುದೇ ಹೆಚ್ಚು. ತಮ್ಮ ಅಧಿಕಾರಾವಧಿಯಲ್ಲಿ ಅವರು ಮಾಡಿಕೊಂಡು ಬಂದದ್ದು ಬ್ಲ್ಯಾಕ್ಮೇಲ್ ತಂತ್ರಗಾರಿಕೆ. ಆದ್ದರಿಂದ ಶ್ರೀರಾಮುಲು ಅವರ ಈಗಿನ ರಾಜೀನಾಮೆ ಪ್ರಹಸನವನ್ನು ಗಮನಿಸಿದರೆ ಅದೇ ತಂತ್ರಗಾರಿಕೆಯನ್ನು ಈಗಲೂ ಮುಂದುವರಿಸಿದ್ದಾರೆ ಎನ್ನುವುದು ಸ್ಪಷ್ಟ. ಬಳ್ಳಾರಿ ಗಣಿಧಣಿಗಳ ಋಣಬಾಧೆಯಲ್ಲಿರುವ ಬಿಜೆಪಿ ಮತ್ತು ಸರ್ಕಾರ ಇವರ ಆಟವನ್ನೆಲ್ಲಾ ಸಹಿಸಿಕೊಂಡು ಬಂದದ್ದು ಆ ಪಕ್ಷದ ದೌರ್ಬಲ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.