ಸೋಮವಾರ, ಜನವರಿ 20, 2020
20 °C

ಭಗವದ್ಗೀತೆ ಪಠಣ ತಪ್ಪಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಗವದ್ಗೀತೆಯ ಒಂದೆರಡು ಶ್ಲೋಕಗಳನ್ನು  ಶಾಲಾ ಮಕ್ಕಳು ಪಠಣ ಮಾಡುವ ಕುರಿತು ಸರ್ಕಾರ ಚಿಂತನೆ ನಡೆಸಿರುವುದು ಸಮಯೋಚಿತವಾಗಿದೆ. 

 

ಪ್ರಸ್ತುತ ನಮ್ಮ ಸಾಮಾಜಿಕ ಸಂದರ್ಭದಲ್ಲಿ ಅಸೂಯೆ-ದ್ವೇಷ, ಅಹಂಕಾರದ ಭಾವನೆಗಳು ಹೆಚ್ಚಾಗಿವೆ. ಪ್ರಾಮಾಣಿಕತೆ ಕಡಿಮೆಯಾಗುತ್ತಿದೆ. ಜನರಲ್ಲಿ ಧಾರ್ಮಿಕ ಗುಣಗಳು ಕಣ್ಮರೆಯಾಗುತ್ತಿವೆ.

ಎಲ್ಲ ಧರ್ಮಗಳೂ ಮಾನವೀಯ ಮೌಲ್ಯಗಳನ್ನೇ ಎತ್ತಿ ಹೇಳುತ್ತವೆ. ಆದರೂ ನೈತಿಕ ಶಿಕ್ಷಣದ ಕೊರತೆ ಇದೆ. ಸ್ವಾರ್ಥ ತುಂಬಿ ತುಳುಕುತ್ತಿದೆ.ಮಾನವೀಯ ಮೌಲ್ಯಗಳನ್ನು, ಸುಸಂಸ್ಕೃತ ನಡವಳಿಕೆಗಳನ್ನು ಮಕ್ಕಳಲ್ಲಿ ಬೆಳೆಸುವ ಮೂಲಕವೇ ಭವಿಷ್ಯದ ಸಮಾಜವನ್ನು ರೂಪಿಸುವ ಹೊಣೆ ಎಲ್ಲರ ಮೇಲಿದೆ.

 

ಈ ನಿಟ್ಟಿನಲ್ಲಿ ಸರ್ಕಾರ ಭಗವದ್ಗೀತೆಯನ್ನು ಮಕ್ಕಳು ಪಠಣ ಮಾಡಲು ಚಿಂತಿಸಿರುವುದು ಸೂಕ್ತವಾಗಿದೆ. ಮಕ್ಕಳಲ್ಲಿ ಉತ್ತಮ ಗುಣಗಳನ್ನು ಬೆಳೆಸಲು ಇದು ಸೂಕ್ತ ಸಮಯ.

ಕೆಲವು ಕಾನ್ವೆಂಟ್ ಶಾಲೆಗಳಲ್ಲಿ ಯೇಸುವಿನ ನುಡಿಗಳನ್ನು ಪ್ರಾರ್ಥನೆ ಸಮಯದಲ್ಲಿ ಪಠಿಸುವ ಕ್ರಮವಿದೆ.ಉರ್ದು ಶಾಲೆಗಳ ಪ್ರಾರ್ಥನೆ ವೇಳೆಯಲ್ಲಿ ಒಂದೆರಡು ಧಾರ್ಮಿಕ ನುಡಿಗಳನ್ನು ಪಠಿಸುತ್ತಾರೆ.

 

ಎಲ್ಲ ಧರ್ಮಗಳೂ ಮನುಕುಲದ ಒಳಿತನ್ನೇ ಬಯಸುವುದರಿಂದ ಭಗವದ್ಗೀತೆಯ ಒಂದೆರಡು ಶ್ಲೋಕಗಳನ್ನು  ಪಠಣ ಮಾಡುವುದು ತಪ್ಪಲ್ಲ. ಅದನ್ನು ಸಂಶಯದಿಂದ ನೋಡುವುದು ಬೇಡ.

 

ಪ್ರತಿಕ್ರಿಯಿಸಿ (+)