ಭಗವದ್ಗೀತೆ ಸರಳ ರೂಪ: ಮಹತ್ವದ ಕೊಡುಗೆ

ಬುಧವಾರ, ಮೇ 22, 2019
29 °C

ಭಗವದ್ಗೀತೆ ಸರಳ ರೂಪ: ಮಹತ್ವದ ಕೊಡುಗೆ

Published:
Updated:

ಬೆಂಗಳೂರು: `ಸಾಹಿತ್ಯಿಕ, ಸಾಂಸ್ಕೃತಿಕ ಮತ್ತು ಅಧ್ಯಾತ್ಮಿಕ ಮೌಲ್ಯಗಳನ್ನು ಹೊಂದಿರುವ ಭಗವದ್ಗೀತೆಯ ಶ್ಲೋಕಗಳನ್ನು ಸರಳ ರೂಪದಲ್ಲಿ ನೀಡುವ ಮೂಲಕ ಕಬ್ಬಿನಾಲೆಯವರು ಸಾಹಿತ್ಯ ಕ್ಷೇತ್ರಕ್ಕೆ ಮಹತ್ತರ ಕೊಡುಗೆ ನೀಡಿದ್ದಾರೆ~ ಎಂದು ಹಿರಿಯ ಸಂಶೋಧಕ ಪ್ರೊ.ಹಂಪ ನಾಗರಾಜಯ್ಯ ಶ್ಲಾಘಿಸಿದರು.ಸುಂದರ ಪ್ರಕಾಶನವು ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಡಾ.ಕಬ್ಬಿನಾಲೆ ವಸಂತ ಭಾರದ್ವಾಜ ಅವರ `ಭಗವಂತನ ಭಾವಗೀತೆ~ ಮತ್ತು ಎಸ್.ಎ.ಕೀರ್ತನಾ ಅವರ ಇಂಗ್ಲಿಷ್ ಕಾದಂಬರಿ `ದಿ ಕೆರಿಯಾಡ್ಸ್~ ಪುಸ್ತಕಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.`ಭಗವದ್ಗೀತೆಯಲ್ಲಿರುವ ವಿಚಾಧಾರೆಯು ಕಾಲಕ್ಕೆ ಅನುಗುಣವಾಗಿ ಮರುಹುಟ್ಟು ಪಡೆಯಬೇಕು. ಜೀವನ ತತ್ವವನ್ನು ಅದ್ಭುತವಾಗಿ ಬೋಧಿಸುವ ಗೀತೆ ಸಾರವು ಸದಾ ಸಾಹಿತ್ಯಾಸಕ್ತರನ್ನು ಹಿಡಿದಿಡುತ್ತದೆ~ ಎಂದು ಹೇಳಿದರು.`ವಯೋಸಹಜ ಕಲ್ಪನೆಯ ಮೂಸೆಯಲ್ಲಿ ಕೀರ್ತನಾ ಅವರ ಕೆರಿಯಾಡ್ಸ್ ಪುಸ್ತಕವು ಅರಳಿದ್ದು, ವಯಸ್ಸಿಗೆ ಮೀರಿದ ಶಬ್ಧ ಭಂಡಾರದ ಬಳಕೆಯಿಂದ ಓದುಗರನ್ನು ಅಚ್ಚರಿಗೊಳಿಸುತ್ತಾರೆ. `ಭಗವಂತನ ಭಾವಗೀತೆ~ ದಾರ್ಶನಿಕ ನೆಲೆಯಲ್ಲಿದ್ದರೆ, ಕೆರಿಯಾಡ್ಸ್ ಕಾಲ್ಪನಿಕವಾಗಿ ಗಟ್ಟಿಗೊಂಡಿದೆ~ ಎಂದು ಅಭಿಪ್ರಾಯಪಟ್ಟರು.ಶಿಕ್ಷಣ ತಜ್ಞ ಪ್ರೊ.ಕೆ.ಇ.ರಾಧಾಕೃಷ್ಣ, `ಸಾರ್ವಕಾಲಿಕ ಸತ್ಯವನ್ನು ಪ್ರತಿಪಾದಿಸುವ ಭಗವದ್ಗೀತೆಯನ್ನು ಹದವಾದ ಭಾವ ಮತ್ತು ಕಾವ್ಯದ ಮೂಲಕ ಕಟ್ಟಿಕೊಟ್ಟಿರುವುಅೇ ಒಂದು ವಿಶೇಷ. ರೋಚಕ ಸನ್ನಿವೇಶಗಳನ್ನು ಒಳಗೊಂಡಿರುವ ಕೆರಿಯಾಡ್ಸ್ ಕೂಡ ಹ್ಯಾರಿಪಾಟರ್‌ನ ಪ್ರಭಾವದಿಂದ ಮುಕ್ತವಾಗಿಲ್ಲವೆಂಬುದು ಸ್ಪಷ್ಟಗೊಳ್ಳುತ್ತದೆ~ ಎಂದರು.`13ನೇ ವಯಸ್ಸಿಗೆ ರೋಚಕ ಪಾತ್ರಗಳನ್ನು ಸೃಷ್ಟಿಸಿ, ನಿರೂಪಿಸಿರುವ ಕೀರ್ತನಾ ಅವರದ್ದು ದೈತ್ಯ ಪ್ರತಿಭೆ. ತಮ್ಮ ಕಾದಂಬರಿಯಲ್ಲಿ ಒಳಿತು- ಕೆಡುಕುಗಳ ನಡುವೆ ನಡೆಯುವ ಸಂಘರ್ಷವನ್ನು ವಿಭಿನ್ನವಾಗಿ ನಿರೂಪಿಸಿದ್ದಾರೆ~ ಎಂದು ಅವರು ತಿಳಿಸಿದರು.ಇದೇ ಸಂದರ್ಭದಲ್ಲಿ ಕ್ಲಾರಿಯೋನೆಟ್ ವಾದಕ ಡಾ.ನರಸಿಂಹಲು ವಡವಾಟಿ ಅವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ನಟ ಶ್ರೀಧರ್, ಪ್ರಕಾಶನದ ಗೌರಿ ಸುಂದರ್ ಇತರರು ಉಪಸ್ಥಿತರಿದ್ದರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry