ಸೋಮವಾರ, ಜೂನ್ 14, 2021
27 °C

ಭರವಸೆಯ ಕ್ಯಾಲೆಂಡರ್ ಸಮನ್ವಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಣ್ಣಿಲ್ಲದಿದ್ದರೂ ಬದುಕಂತೂ ನಿಲ್ಲುವುದಿಲ್ಲ. ಕತ್ತಲನ್ನು ಕೊರತೆ ಎಂದುಕೊಳ್ಳದೆ ಆತ್ಮವಿಶ್ವಾಸದಿಂದ ಬದುಕುವ ದೃಷ್ಟಿ ಇಲ್ಲದ ನತದೃಷ್ಟರು ನಮ್ಮ ನಡುವೆ ಇದ್ದಾರೆ.ಅವರಿಗಾಗಿ ವಿಶೇಷ ಸ್ಟಿಕ್, ಅವರಿಗಾಗಿಯೇ ವಿಶೇಷ ವಾಚುಗಳು ಬಂದಿವೆ. ಆದರೆ ದಿನಚರಿಗೆ ಅನುಕೂಲವಾಗಲಿ ಎಂದು ಕರ್ನಾಟಕ ಅಂಧರ ಕ್ಷೇಮಾಭಿವೃದ್ಧಿ ಸಂಸ್ಥೆ ಹೊಸತೊಂದು ಟೇಬಲ್ ಟಾಪ್ ಕ್ಯಾಲೆಂಡರ್ ತಯಾರಿಸಿದೆ.ಇದರ ಹೆಸರು `ಸಮನ್ವಯ~. ಬ್ರೇಲ್ ಲಿಪಿಯಲ್ಲಿಯೇ ಇರುವ ಕ್ಯಾಲೆಂಡರ್ ಇದು. ಇದರೊಂದಿಗೆ ಇಂಕ್‌ಪ್ರಿಂಟ್‌ನ ಬಳಕೆ ಸಹ ಮಾಡಲಾಗಿದೆ.ಅಂಧರ ಕ್ಷೇಮಾಭಿವೃದ್ಧಿ ಸಂಸ್ಥೆಯು ಈ ವರೆಗೆ 800 ಜನರಿಗೆ ತರಬೇತಿ ನೀಡಿದೆ. ಉದ್ಯೋಗ ಅವಕಾಶಗಳನ್ನೂ ಒದಗಿಸಿ ಕೊಡುತ್ತದೆ. ಯಾರಿಂದಲೂ ಸಹಾಯಧನ, ದೇಣಿಗೆ ಅಪೇಕ್ಷಿಸದೆ ಸಂಸ್ಥೆ ತನ್ನ ಸ್ವಂತ ಖರ್ಚಿನಲ್ಲಿ ಈ ಕ್ಯಾಲೆಂಡರ್ ಸಿದ್ಧಪಡಿಸಿದೆ.

ಸದ್ಯಕ್ಕೆ ಅಂಧರಿಗೆ `ಕೊಡುಗೆ~ಯಾಗಿ ನೀಡಲೆಂದೇ ಇವನ್ನು ಸಿದ್ಧಪಡಿಸಲಾಗಿದೆ. ಸದ್ಯ ಸಂಸ್ಥೆಯಲ್ಲಿ 250 ಕ್ಯಾಲೆಂಡರುಗಳು ಲಭ್ಯ.ಮಾರಾಟಕ್ಕೆ ಅವಕಾಶವಿಲ್ಲ. ಆದರೆ ಆಸಕ್ತರು ತಮ್ಮ ಸಾಮರ್ಥ್ಯಕ್ಕೆ ತಕ್ಕಷ್ಟು ದೇಣಿಗೆ ನೀಡಿ ಇವನ್ನು ಪಡೆಯಬಹುದಾಗಿದೆ ಎಂದು ಸಂಸ್ಥೆಯು ತಿಳಿಸಿದೆ.

ಹೆಚ್ಚಿನ ಮಾಹಿತಿಗೆ: 2336 9703. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.