ಶನಿವಾರ, ಮೇ 15, 2021
24 °C
ವಿಶ್ವ ಸ್ಕ್ವಾಷ್ ಚಾಂಪಿಯನ್‌ಷಿಪ್

ಭಾರತಕ್ಕೆ ಏಳನೇ ಸ್ಥಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಭಾರತದ ಆಟಗಾರರು, ಫ್ರಾನ್ಸ್‌ನ ಮುಲ್‌ಹೌಸ್‌ನಲ್ಲಿ ನಡೆಯುತ್ತಿರುವ ವಿಶ್ವ ಸ್ಕ್ವಾಷ್ ಚಾಂಪಿಯನ್‌ಷಿಪ್‌ನ ತಂಡ ವಿಭಾಗದಲ್ಲಿ ಏಳನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದಾರೆ.ಏಳನೇ ಸ್ಥಾನಕ್ಕಾಗಿ ನಡೆದ ಹೋರಾಟದಲ್ಲಿ ಭಾರತ 2-0ರಲ್ಲಿ ಮಲೇಷ್ಯಾ ತಂಡವನ್ನು ಸೋಲಿಸಿತು.ಭಾರತದ ಮಹೇಶ್ ಮಂಗಾಂವ್ಕರ್ 14-12, 11-4, 11-7ರಲ್ಲಿ ಮಲೇಷ್ಯಾದ ಮೊಹಮ್ಮದ್ ಅಶ್ರಫ್ ಅಜನ್ ಅವರ ವಿರುದ್ದ 3-0ರಲ್ಲಿ ಗೆದ್ದರು. ಸೌರವ್ ಘೋಷಾಲ್ 6-11, 7-11, 12-10, 11-7, 11-9ರಲ್ಲಿ ಆಂಗ್ ಬೆಂಗ್ ಹೀ ವಿರುದ್ಧ 3-2ರಲ್ಲಿ ಗೆದ್ದರು.ಇದಕ್ಕೂ ಮುನ್ನ ಐದನೇ ಸ್ಥಾನಕ್ಕಾಗಿ ನಡೆದ ಹೋರಾಟದಲ್ಲಿ ಜರ್ಮನಿ ಎದುರು 2-0 ರಲ್ಲಿ ಭಾರತ ಸೋಲು ಕಂಡಿತ್ತು.91 ನಿಮಿಷಗಳ ಹೋರಾಟದಲ್ಲಿ ಜರ್ಮನಿಯ ಸಿಮೊನ್ ರೊಸ್ನೆರ್, 3-11, 11-8, 10-12, 11-8, 11-7ರಲ್ಲಿ ಸೌರವ್ ಘೋಷಾಲ್ ಅವರನ್ನು; ರಫೇಲ್ ಕಂದ್ರಾ, 11-9, 14-12, 5-11, 3-11, 12-10ರಲ್ಲಿ ಹರಿಂದರ್ ಸಂಧು ಅವರನ್ನು ಮಣಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.