ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತಕ್ಕೆ ವುಡ್ಸ್‌ ಚೊಚ್ಚಲ ಭೇಟಿ

ಭಾರಿ ಬಿಗಿ ಭದ್ರತೆ
Last Updated 3 ಫೆಬ್ರುವರಿ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ/ಐಎಎನ್‌ಎಸ್‌): ವಿಶ್ವ ಖ್ಯಾತ ಗಾಲ್ಫರ್ ಅಮೆರಿಕದ ಟೈಗರ್‌ ವುಡ್ಸ್‌  ಮಂಗಳವಾರ ಇಲ್ಲಿ ನಡೆಯಲಿರುವ ಪ್ರದರ್ಶನ ಪಂದ್ಯದಲ್ಲಿ ಪಾಲ್ಗೊಳ್ಳಲು  ಭಾರಿ ಬಿಗಿ ಭದ್ರತೆಯಲ್ಲಿ ಸೋಮವಾರ ರಾಜಧಾನಿಗೆ ಬಂದಿಳಿದರು.

ಇದು  ಭಾರತಕ್ಕೆ ಅವರ ಮೊದಲ ಭೇಟಿ. ಅವರ ಈ ಭೇಟಿಯ ವಿಚಾರವನ್ನು ಮಾಧ್ಯಮದವರು ಹಾಗೂ ಸಾರ್ವಜನಿಕರಿಗೆ  ತಿಳಿಯದಂತೆ ರಹಸ್ಯವಾಗಿಡಲಾಗಿತ್ತು. ದುಬೈನಿಂದ ಅವರು ತಮ್ಮ ಸ್ವಂತ ವಿಮಾನದಲ್ಲಿ ಸೋಮವಾರ ಸಂಜೆ ದೆಹಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆ ವಿಐಪಿ ದ್ವಾರದ ಮೂಲಕ ರಹಸ್ಯವಾಗಿ ನಿಗದಿತ ಸ್ಥಳಕ್ಕೆ ಅವರನ್ನು ಕರೆದುಕೊಂಡು ಹೋಗಲಾಯಿತು.
ಕೇವಲ ಒಂದು ದಿನದ ಭೇಟಿಗಾಗಿ ಅವರಿಗೆ ₨15.5 ಕೋಟಿ ಮೊತ್ತ ನೀಡಲಾಗಿದೆ ಎಂದು ತಿಳಿದುಬಂದಿದೆ. 

ಇಷ್ಟು ಮಾತ್ರವಲ್ಲದೆ, ಬಿಲ್‌ ಕ್ಲಿಂಟನ್‌ , ಬರಾಕ್‌ ಒಬಾಮ ಅವರಂಥ ಅಗ್ರ ಗಣ್ಯರು ದೇಶಕ್ಕೆ ಭೇಟಿ ನೀಡಿದಾಗ ಉಳಿದುಕೊಳ್ಳುವ ಪ್ರಖ್ಯಾತ ಮೌರ್ಯ ಹೋಟೆಲ್‌ನ ‘ಪ್ರೆಸಿಡೆನ್ಶಿ ಯಲ್‌ ಸೂಟ್‌’ನಲ್ಲಿ ವುಡ್ಸ್‌ಗೂ ವಾಸ್ತವ್ಯ ವ್ಯವಸ್ಥೆ ಮಾಡಲಾಗಿದೆ. ಅವರು ಮಂಗಳವಾರ ಹೀರೊ ಕಂಪೆನಿಯ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ಪವನ್ ಮುಂಜಾಲ್ ಅವರೊಂದಿಗೆ ಕೆಲ ಸಮಯ ಗಾಲ್ಫ್‌ ಆಡಲಿದ್ದಾರೆ.

ಆ ನಂತರ ದೆಹಲಿ ಗಾಲ್ಫ್ ಕ್ಲಬ್‌ ಕೋರ್ಸ್‌ನಲ್ಲಿ ಭಾರತದ ಗಾಲ್ಫರ್‌ ಗಳಾದ ಶಿವ ಕಪೂರ್,  ಅರ್ಜುನ್‌ ಅತ್ವಾಲ್ ಅಥವಾ ಅನಿರ್ಬಾನ್ ಲಾಹಿರಿ ಜೊತೆ ಆಡಲಿದ್ದಾರೆ. ವುಡ್ಸ್‌ ಅವರ ಭೇಟಿಯ ಅವಧಿಯಲ್ಲಿ ಅವರ ಹಸ್ತಾಕ್ಷರ ಪಡೆಯುವುದು, ಅವರೊಂದಿಗೆ ಫೋಟೊ ತೆಗೆಸಿಕೊಳ್ಳುವುದನ್ನು ನಿಷೇಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT