ಮಂಗಳವಾರ, ಜೂನ್ 15, 2021
24 °C

ಭಾರತದ ರಾಯಭಾರಿಗೆ ಸಮನ್ಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |


ಇಸ್ಲಾಮಾಬಾದ್ (ಪಿಟಿಐ): ಪಾಕಿಸ್ತಾನದ 13 ಮೀನುಗಾರರನ್ನು ಬಂಧಿ­ಸಿರುವ  ಭಾರತದ ಕ್ರಮವನ್ನು ವಿರೋಧಿಸಿ ಪಾಕಿಸ್ತಾನ ವಿದೇಶಾಂಗ ಸಚಿವಾಲಯ, ಭಾರತದ ಉಪ ಹೈಕಮೀಷನರ್ ಗೋಪಾಲ್‌ ಬಾಗ್ಲೇ ಅವರಿಗೆ ಸೋಮವಾರ ಸಮನ್ಸ್ ನೀಡಿದೆ.

 

ಖಜರ್ ಕೊಲ್ಲಿ ಪ್ರದೇಶದಲ್ಲಿ ತನ್ನ ದೇಶದ ವ್ಯಾಪ್ತಿಯಲ್ಲೇ ಪಾಕಿಸ್ತಾನದ ಮೀನುಗಾರರ ದೋಣಿ ವಿಹರಿಸುತ್ತಿತ್ತು. ಆದರೂ ಪಾಕಿಸ್ತಾನದ ಮೀನುಗಾರ ರನ್ನು ಬಂಧಿಸಲಾಗಿದೆ ಎಂದು ಪಾಕಿ ಸ್ತಾನದ ಮೀನುಗಾರರ ಸಹಕಾರ ಸಂಘಟನೆ ದೂರಿದೆ. 

 

ಭಾರತ ತಕ್ಷಣವೇ ಪಾಕಿಸ್ತಾನದ ಮೀನುಗಾರರನ್ನು ಬಿಡುಗಡೆ ಮಾಡ ಬೇಕು ಎಂದು ಪಾಕಿಸ್ತಾನ ಭಾರತಕ್ಕೆ ಒತ್ತಾಯಿಸಿದೆ. ಮೀನುಗಾರರನ್ನು  ಬಂಧಿಸಿರುವ ಕ್ರಮ ಅಂತರರಾಷ್ಟ್ರೀಯ ಕಾನೂನಿಗೆ ವಿರುದ್ಧವಾಗಿದೆ ಎಂದೂ ಪಾಕಿಸ್ತಾನ ದೂರಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.