ನವದೆಹಲಿ(ಪಿಟಿಐ): ಭಾರತದ ಸಾಮಾನ್ಯ ಹಾಗೂ ಗಣ್ಯ ಮಹಿಳೆಯರ ಸಾಧನೆಯನ್ನು ಅನಾವರಣಗೊಳಿಸುವ ಕಿರುಚಿತ್ರ ಸೋಮವಾರ ಇಲ್ಲಿ ಬಿಡುಗಡೆಯಾಗಿದೆ. ಲಿಂಗ ಸಮಾನತೆ ಮತ್ತು ಮಹಿಳಾ ಸಬಲೀಕರಣಕ್ಕಾಗಿ ಶ್ರಮಿಸುತ್ತಿರುವ ವಿಶ್ವಸಂಸ್ಥೆಯ ಮಹಿಳಾ ವಿಭಾಗದ ಸಹಯೋಗದಲ್ಲಿ ಐರೋಪ್ಯ ಒಕ್ಕೂಟ ಈ ಚಿತ್ರವನ್ನು ಬಿಡುಗಡೆ ಮಾಡಿದೆ.

ಸ್ಥಳೀಯ ಮಹಿಳೆಯರಿಗೆ ಸಣ್ಣ ವ್ಯಾಪಾರ ಮಾಡಲು ಸಹಾಯ ಮಾಡುವ ಮಾವಿನ ತೋಟದ ಮಾಲಕಿ, ಅಂಧ ಪರ್ವತಾರೋಹಿ, ಮಹಿಳಾ ಹೋರಾಟಗಾರ್ತಿಯರ ಜೀವನ ಕಥೆಯನ್ನು ಇದು ಒಳಗೊಂಡಿದೆ. ಮೌಂಟ್ ಎವರೆಸ್ಟ್ ಪರ್ವತವನ್ನು ಏರಿದ ಪ್ರಥಮ ಭಾರತೀಯ ಮಹಿಳೆ ಬಚೇಂದ್ರಿಪಾಲ್, ಉತ್ತಮ ಸ್ಕೌಟ್ ಹುಡುಗಿ ಕಾಂಚನಾ ಗಬಾ, ರಾಷ್ಟ್ರೀಯ ಮಹಿಳಾ ಕ್ರಿಕೆಟ್ ತಂಡದ ಅಂಜುಮ್ ಚೋಪ್ರಾ ಅವರ ಸಂದರ್ಶನವನ್ನು ಈ ಚಿತ್ರ ಒಳಗೊಂಡಿದೆ.

‘ಭಾರತದ ಮಹಿಳೆಯರ ಸಾಧನೆ ಉಲ್ಲೇಖನೀಯ. ಐರೋಪ್ಯ ಒಕ್ಕೂಟದ ಚಿತ್ರ ಅಂತಹ ಮಹಿಳೆಯರಿಗೆ ಈ ಚಿತ್ರವನ್ನು ಅರ್ಪಿಸುತ್ತದೆ. ಸಮಾನತೆಗಾಗಿ ಹೋರಾಡಿದ ಆ ಮಹಿಳೆಯರನ್ನು ಪ್ರೋತ್ಸಾಹಿಸಬೇಕು’ ಎಂದು ಭಾರತ ಹಾಗೂ ಭೂತಾನ್ನಲ್ಲಿ ಐರೋಪ್ಯ ಒಕ್ಕೂಟದ ರಾಯಭಾರಿಯಾಗಿರುವ ಜಾವೋ ಕ್ರವಿನೊ ಹೇಳಿದ್ದಾರೆ.

ಚಿತ್ರದಲ್ಲಿ ಸಾಧಕಿಯರ ಸಂದರ್ಶನವನ್ನು ಹೆಚ್ಚು ಕೇಂದ್ರೀಕರಿಸಲಾಗಿದೆ. ಪುರುಷ ಪ್ರಧಾನ ಸಮಾಜದಲ್ಲಿ ಎಲ್ಲಾ ಒತ್ತಡಗಳ ವಿರುದ್ಧ ಹೋರಾಡಿ ಗುರಿ ಸಾಧಿಸಿದ್ದಾರೆ ಎಂದು ನಿರ್ದೇಶಕ ರೋಹಿತ್ ಮೋಂಗಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.