ಮಂಗಳವಾರ, ಮೇ 18, 2021
22 °C

ಭಾರತೀಯನಿಗೆ ಬಿಡುಗಡೆ ಭಾಗ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದುಬೈ (ಪಿಟಿಐ): ಕಳೆದ 18 ವರ್ಷಗಳಿಂದ ವೇತನವೂ ಇಲ್ಲದೆ, ರಜೆಯೂ ಇಲ್ಲದೆ ದುಡಿಯುತ್ತಿದ್ದ ಭಾರತೀಯ ಕಾರ್ಮಿಕನಿಗೆ ಸ್ಥಳೀಯ ಪೊಲೀಸರ ಮಧ್ಯ ಪ್ರವೇಶದಿಂದಾಗಿ ತಾಯ್ನಾಡಿಗೆ ಮರಳುವ ಭಾಗ್ಯ ದೊರೆತಿದೆ.ಮೂಲತಃ ತಮಿಳುನಾಡಿನ ಪೆರಂಬಲೂರ್ ಜಿಲ್ಲೆಯ ಮಂಗಳಮೇಡು ತಾಲ್ಲೂಕಿನವರಾದ ಪಿ.ಪೆರಿಯಸ್ವಾಮಿ (45) 1994ರಲ್ಲಿ ಸೌದಿ ಅರೇಬಿಯಾದ ಹೇಲ್ ಪ್ರಾಂತ್ಯಕ್ಕೆ ಆಗಮಿಸಿ ಕುರಿಕಾಯುವ ವೃತ್ತಿಯಲ್ಲಿ ತೊಡಗಿಕೊಂಡಿದ್ದರು.18 ವರ್ಷಗಳ ಅವಧಿಯಲ್ಲಿ ಪೆರಿಯಸ್ವಾಮಿ ತಾಯ್ನಾಡಿಗೆ ವಾಪಸ್ಸಾಗುವ ತನ್ನ ಹಕ್ಕಿನ ಬಗ್ಗೆ ಎಂದೂ ಹೋರಾಟ ನಡೆಸಿರಲೇ ಇಲ್ಲ. ಬದಲಾಗಿ ಒಮ್ಮೆ ಆತ್ಮಹತ್ಯೆಗೆ ಯತ್ನಿಸಿದ್ದರು. ಇವರ ಕಷ್ಟ ಅರಿತ ಸೌದಿಯ ಸಹೃದಯಿಯೊಬ್ಬರು ಸ್ಥಳೀಯ ಪೊಲೀಸರು, ಗವರ್ನರ್‌ಗೆ ದೂರು ಸಲ್ಲಿಸಿದ್ದರು.ನಂತರದಲ್ಲಿ ಮಾಲೀಕನನ್ನು ಬಂಧಿಸಲಾಯಿತು. ಪೆರಿಯಸ್ವಾಮಿಗೆ ಬರಬೇಕಿದ್ದ ಬಾಕಿ ವೇತನ ಹಾಗೂ ವಿಮಾನ ಟಿಕೆಟ್ ಕೊಡಿಸುವ ವ್ಯವಸ್ಥೆ ಮಾಡುವಂತೆ ಗವರ್ನರ್ ಕಚೇರಿಯು ಪೆರಿಯಸ್ವಾಮಿ ಮಾಲೀಕನಿಗೆ ಸೂಚಿಸಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.