ಮಂಗಳವಾರ, ಮೇ 18, 2021
31 °C

ಭಾರತ-ಅಮೆರಿಕ ಮೈತ್ರಿ ಇನ್ನಷ್ಟು ಗಾಢ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್ (ಐಎಎನ್‌ಎಸ್): ಭಾರತ ಮತ್ತು ಅಮೆರಿಕ ನಡುವಿನ ಬಾಂಧವ್ಯ 21ನೇ ಶತಮಾನದಲ್ಲಿ ಎಂದಿಗಿಂತಲೂ ಹೆಚ್ಚು ಸಮಗ್ರವಾಗಿ ಮುನ್ನಡೆಯಲಿದೆ ಎಂದು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಗಾಢ ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಉಭಯ ದೇಶಗಳು ಸಾಧಿಸಿರುವ ಮೈತ್ರಿಯು ಇಡೀ ವಿಶ್ವಕ್ಕೆ ಅದರಲ್ಲೂ ಏಷ್ಯಾ ಖಂಡದಲ್ಲಿನ ಶಾಂತಿ ಮತ್ತು ಅಭ್ಯುದಯಕ್ಕೆ ಬೆನ್ನೆಲುಬಾಗಲಿದೆ ಎಂದು ಅವರು ತಿಳಿಸಿದ್ದಾರೆ. ಅಮೆರಿಕದಲ್ಲಿ ಭಾರತದ ರಾಯಭಾರಿಯಾಗಿ ನೇಮಕಗೊಂಡಿರುವ ನಿರುಪಮಾ ರಾವ್ ಶುಕ್ರವಾರ ಒಬಾಮ ಅವರನ್ನು ಶ್ವೇತಭವನದ ಕಚೇರಿಯಲ್ಲಿ ಭೇಟಿಯಾಗಿ ತಮ್ಮ ನೇಮಕಕ್ಕೆ ಸಂಬಂಧಿಸಿದ ಪರಿಚಯ ಪತ್ರವನ್ನು ಒಬಾಮ ಅವರಿಗೆ ಸಲ್ಲಿಸಿದರು.ಈ ಸಂದರ್ಭದಲ್ಲಿ ಒಬಾಮ ತಮ್ಮ ಈ ಭಾವನೆಗಳನ್ನು ನಿರುಪಮಾ ಅವರೊಂದಿಗೆ ಹಂಚಿಕೊಂಡಿರುವುದಾಗಿ ಇಲ್ಲಿನ ರಾಯಭಾರ ಕಚೇರಿಯು ಬಿಡುಗಡೆ ಮಾಡಿರುವ ಪ್ರಕಟಣೆ ತಿಳಿಸಿದೆ.`ಭಾರತದೊಂದಿಗಿನ ಅಮೆರಿಕ ಮೈತ್ರಿ ಸಹಜವಾಗಿಯೇ ಗಾಢವಾದದ್ದು. ಅದರಲ್ಲೂ ಒಬಾಮ ಅವರು ಭಾರತದ ಬಗ್ಗೆ ವೈಯಕ್ತಿಕವಾಗಿ ಹೆಚ್ಚಿನ ಆದ್ಯತೆ ನೀಡಿರುವುದು ಶ್ಲಾಘನೀಯ~ ಎಂದು ನಿರುಪಮಾ ಈ ಸಂದರ್ಭದಲ್ಲಿ ಶ್ಲಾಘಿಸಿದ್ದಾಗಿ ಪ್ರಕಟಣೆ ವಿವರಿಸಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.