ಮಂಗಳವಾರ, ಜೂನ್ 22, 2021
28 °C

ಭಾರತ-ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ಸರಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ): ಭಾರತ ಹಾಗೂ ಪ್ರವಾಸಿ ಆಸ್ಟ್ರೇಲಿಯಾ ಮಹಿಳೆಯರ ತಂಡಗಳ ನಡುವಣ ಮೂರು ಏಕದಿನ ಹಾಗೂ ಐದು ಟ್ವೆಂಟಿ-20 ಪಂದ್ಯಗಳ ಸರಣಿ ಮಾರ್ಚ್ ಎರಡನೇ ವಾರದಲ್ಲಿ ಆರಂಭವಾಗಲಿದೆ.ಆಸ್ಟ್ರೇಲಿಯಾ ವನಿತೆಯರ ತಂಡವು ಭಾರತಕ್ಕೆ ಆಗಮಿಸಿದ್ದು ಬುಧವಾರ ಅಹಮದಾಬಾದ್‌ನಲ್ಲಿ ಅಭ್ಯಾಸ ನಡೆಸಲಿದೆ. ಕಾಂಗರೂಗಳ ನಾಡಿನ ಪಡೆಗೆ ಜೋಡೆ ಫೀಲ್ಡ್ಸ್ ನಾಯಕಿಯಾಗಿದ್ದಾರೆ. ಭಾರತ ತಂಡವನ್ನು ಅಂಜುಮ್ ಚೋಪ್ರಾ ಮುನ್ನಡೆಸುವರು.ಏಕದಿನ ಸರಣಿಯ ಮೂರು ಪಂದ್ಯಗಳು ಮಾರ್ಚ್ 12 (ಅಹಮದಾಬಾದ್), ಮಾ.14  ಮತ್ತು 16 ರಂದು (ಮುಂಬೈ) ನಡೆಯಲಿವೆ. ಐದು ಟ್ವೆಂಟಿ-20 ಪಂದ್ಯಗಳು ವಿಶಾಖಪಟ್ಟಣದಲ್ಲಿ ಮಾ.18, 19, 21, 22 ಹಾಗೂ 23ರಂದು ನಡೆಯಲಿವೆ ಎಂದು ಬಿಸಿಸಿಐ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.ತಂಡಗಳು ಇಂತಿವೆ: ಆಸ್ಟ್ರೇಲಿಯಾ: ಜೋಡೆ ಫೀಲ್ಡ್ಸ್ (ನಾಯಕಿ), ಅಲೆಕ್ಸ್ ಬ್ಲಾಕ್‌ವೆಲ್ (ಉಪ ನಾಯಕಿ), ಜೆಸ್ಸ್ ಕೆಮರೂನ್, ಸರಾಹ್ ಕೊಯೆಟ್, ಅಲಿಸಾ ಹ್ಯಾಲಿ, ಜೂಲಿ ಹಂಟರ್, ಜೆಸ್ಸಿಕಾ ಜಾನ್ಸನ್, ಮೆಗ್ ಲ್ಯಾನಿಂಗ್, ಶರೊನ್ ಮಿಲಾಂಟಾ, ಎರಿನ್ ಒಸ್ಬೊರ್ನ್, ಎಲ್ಲಿಸ್ ಪೆರ‌್ರಿ, ಲೆಹ್ ಪುಲ್ಟಾನ್ ಮತ್ತು ಲೀಸಾ ಸ್ತಾಳೇಕರ್.ಭಾರತ: ಅಂಜುಮ್ ಚೋಪ್ರಾ (ನಾಯಕಿ), ಮಿಥಾಲಿ ರಾಜ್ (ಉಪ ನಾಯಕಿ), ಜೂಲನ್ ಗೋಸ್ವಾಮಿ, ಪೂನಮ್ ರಾವತ್, ಅರ್ಚನಾ ದಾಸ್, ಎಸ್.ಸುಬ್ಬಲಕ್ಷ್ಮಿ, ರೀಮಾ ಮಲ್ಹೋತ್ರಾ. ರುಮೇಲಿ ದಾರ್, ಏಕ್ತಾ ಬಿಸ್ತ್, ಗೌಹರ್ ಸುಲ್ತಾನಾ, ಸುನಿತಾ ಆನಂದ್, ಹರ್ಮನ್‌ಪ್ರೀತ್ ಕೌರ್, ಮಮ್ತಾ ಕನೋಜಿಯಾ, ಸುಲಕ್ಷಣ್ ನಾಯಕ್ ಹಾಗೂ ನೂಶೀನ್ ಅಲ್ ಖಾದೀರ್.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.