ಕೋಲಾರ: ಸ್ವರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ಭಾಷೆಯ ಮೇಲೆ ಪ್ರಭುತ್ವ ಸಾಧಿಸಬೇಕು. ಆಗ ಮಾತ್ರ ಯಶಸ್ಸು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ವೀರಣ್ಣ ಜಿ. ತಿಗಡಿ ಹೇಳಿದರು.

ನಗರದ ಟಿ.ಚನ್ನಯ್ಯ ರಂಗಮಂದಿರಲ್ಲಿ ಬುಧವಾರ ಕೋಲಾರ ಮತ್ತು ಬೆಂಗಳೂರು ರೋಟರಿ ಸಂಸ್ಥೆ ಜಂಟಿ ಆಶ್ರಯದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ 8ನೇ ತರಗತಿಯ ಒಂದು ಸಾವಿರ ವಿದ್ಯಾರ್ಥಿಗಳಿಗೆ ಉಚಿತ ನಿಘಂಟು ವಿತರಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಮಾತೃಭಾಷೆ ಕನ್ನಡವಾದರೂ ಇಂಗ್ಲಿಷ್ ಕಲಿಯುವುದು ಬಹಳ ಮುಖ್ಯ. ಉದ್ಯೋಗ ಕ್ಷೇತ್ರದಲ್ಲಿ ಇಂಗ್ಲಿಷ್ ಕಲಿಯದವರಿಗೆ ಅವಕಾಶಗಳಿಲ್ಲ. ಇಂಗ್ಲಿಷ್ ಭಾಷೆ ಮೇಲೆ ಪ್ರಭುತ್ವ ಸಾಧಿಸಿದರೆ ಮಾತ್ರ ವಿಶ್ವದ ಯಾವುದೇ ಮೂಲೆಯಲ್ಲಾದರೂ ಬದುಕು ನಡೆಸಲು ಸಾಧ್ಯ ಎಂದರು.

ಸಾಮಾಜಿಕ ಸೇವೆಗೆ ರೋಟರಿ ಸಂಸ್ಥೆ ಉತ್ತಮ ನಿದರ್ಶನ. ತಾಲ್ಲೂಕಿನ 8 ಸರ್ಕಾರಿ ಪ್ರೌಢಶಾಲೆಗಳ 8ನೇ ತರಗತಿಯ ಒಂದು ಸಾವಿರ ವಿದ್ಯಾರ್ಥಿಗಳಿಗೆ ಉಚಿತವಾಗಿ ಇಂಗ್ಲಿಷ್ ನಿಘಂಟುಗಳನ್ನು ವಿತರಿಸುತ್ತಿರುವುದು ಶ್ಲಾಘನೀಯ. ಪ್ರತಿಭಾವಂತರಾದರೂ ಇಂಗ್ಲಿಷ್ ಕಲಿಕೆ ಮತ್ತು ಬಳಕೆಯಲ್ಲಿ ಹಿನ್ನಡೆ ಸಾಧಿಸುವ ಗ್ರಾಮೀಣ ಮಕ್ಕಳ ಪ್ರಗತಿಗೆ ನಿಘಂಟು ಸಹಕಾರಿಯಾಗಲಿ ಎಂದರು.

ಪ್ರಸಕ್ತ ಸಾಲಿನಲ್ಲಿ 75 ಸಾವಿರ ನಿಘಂಟುಗಳನ್ನು ವಿತರಿಸುವ ಗುರಿ ಇದೆ. ದಾನಿಗಳ ಹೆಚ್ಚಿನ ಸಹಕಾರದಿಂದ ಈ ಪ್ರಮಾಣ 1 ಲಕ್ಷ ದಾಟುತ್ತಿದೆ. ಜೂ. 16 ರಂದು ತುಮಕೂರಿನ ಸಿದ್ದಗಂಗಾ ಮಠದಲ್ಲಿ 10 ಸಾವಿರ ವಿದ್ಯಾರ್ಥಿಗಳಿಗೆ ನಿಘಂಟು ವಿತರಿಸಲಾಗುವುದು ಎಂದು ರೋಟರಿ ನಿಘಂಟು ಸಮಿತಿ ಅಧ್ಯಕ್ಷ ರೊ.ಶಂಕರ ಬಿ.ಕುಲಕರ್ಣಿ ತಿಳಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಚ್.ಡಿ.ಗೋವಿಂದಯ್ಯ, ಬೆಂಗಳೂರಿನ ರೋಟರಿ ಸಂಸ್ಥೆ ಅಧ್ಯಕ್ಷ ಎಂ.ಎಸ್.ಶ್ರೀನಿವಾಸಮೂರ್ತಿ ಮಾತನಾಡಿದರು. ನಿಘಂಟು ಸಮಿತಿ ಸಂಚಾಲಕ ಟಿ.ಎಸ್.ರಾಮಚಂದ್ರಗೌಡ ಪ್ರಾಸ್ತಾವಿಕ ಮಾತನಾಡಿದರು. ಕೋಲಾರ ರೋಟರಿ ಸಂಸ್ಥೆ ಅಧ್ಯಕ್ಷ ಪಿ.ಎಂ.ಶಂಕರಪ್ರಸಾದ್, ಬೆಂಗಳೂರು ಜಿಲ್ಲೆ ರೋಟರಿ ಪದಾಧಿಕಾರಿಗಳಾದ ಜಹೀರ್, ದೀಪಕ್ ನತ್ರ, ಜಿಲ್ಲಾ ರೋಟರಿ ಮಾಜಿ ಅಧ್ಯಕ್ಷ ವೆಂಕಟೇಶಪ್ಪ, ಡಾ.ಮೌನಿ, ಗೋವಿಂದರಾಜು, ಸುಧಾಕರ್, ಚಂದ್ರಪ್ಪ, ವೆಂಕಟೇಶ್, ಬೈಚಪ್ಪ ಉಪಸ್ಥಿತರಿದ್ದರು. ಸಂಗೀತ ಶಿಕ್ಷಕಿ ವಿಜಯಲಕ್ಷ್ಮಿ ಪ್ರಾರ್ಥಿಸಿದರು. ವಿಷಯ ಪರೀಕ್ಷಕ ಸಿ.ಆರ್. ಅಶೋಕ್ ನಿರೂಪಿಸಿದರು. ಆರ್.ಅಶೋಕ್ಕುಮಾರ್ ವಂದಿಸಿದರು.

ನಗರದ ಸರ್ಕಾರಿ ಬಾಲಕರ, ಬಾಲಕಿಯರ, ನೂತನ ಪದವಿ ಪೂರ್ವ ಕಾಲೇಜು, ಕಾಮಧೇನು ಹಳ್ಳಿ, ಕೆಂಬೋಡಿ, ದೊಡ್ಡಬೊಮ್ಮನಹಳ್ಳಿ ಪ್ರೌಢಶಾಲೆಗಳು, ಹುದುಕುಳ ಮತ್ತು ಕುರಟಿಹಳ್ಳಿಗಳ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ನಿಘಂಟು ವಿತರಿಸಲಾಯಿತು.

ವಿದ್ಯಾರ್ಥಿಗಳಿಗೆ ನಿಘಂಟು ವಿತರಣೆ
ಬಂಗಾರಪೇಟೆ: ಪಟ್ಟಣದ ಬಾಲಕಿಯರ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಬೆಂಗಳೂರು ಸೌತ್ ವೆಸ್ಟ್ ರೋಟರಿ ಕ್ಲಬ್ ವತಿಯಿಂದ ಮಂಗಳವಾರ ಉಚಿತವಾಗಿ ನಿಘಂಟು ವಿತರಿಸಲಾಯಿತು.

ಟ್ರಸ್ಟ್ ಅಧ್ಯಕ್ಷೆ ಅನುಪಮ ಅಗರವಾಲ್ ಅವರು 320 ವಿದ್ಯಾರ್ಥಿಗಳಿಗೆ ಕನ್ನಡ- ಕನ್ನಡ- ಇಂಗ್ಲಿಷ್ ನಿಘಂಟು ವಿತರಿಸಿದರು. ಪ್ರಾಂಶುಪಾಲ ವೆಂಕಟರಾಜು, ಉಪ ಪ್ರಾಂಶುಪಾಲ ಡಿ.ಎಸ್.ಶಂಕರಯ್ಯ, ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಚಂದ್ರೇಗೌಡ, ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಅಪ್ಪಾಜಿಗೌಡ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.