ಬೆಂಗಳೂರು: ಲೋಕಾಯುಕ್ತ ಸಂಸ್ಥೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಪ್ರಕರಣದ ಸಂಬಂಧದಲ್ಲಿ ಮಾಜಿ ಲೋಕಾಯುಕ್ತ ನ್ಯಾ. ವೈ.ಭಾಸ್ಕರ ರಾವ್ ಅವರನ್ನು ವಿಶೇಷ ತನಿಖಾ ತಂಡ (ಎಸ್ಐಟಿ) ಬಂಧಿಸಬಹುದೇ..?

ವಿಶೇಷ ತನಿಖಾ ತಂಡ ಈಗಾಗಲೇ ವಿಶೇಷ ನ್ಯಾಯಾಲಯದಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿರುವುದರಿಂದ ಬಂಧಿಸುವ ಸಾಧ್ಯತೆ ಇಲ್ಲ ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಅವರನ್ನು ವಿಚಾರಣೆಗಾಗಿ ಪೊಲೀಸರ ವಶಕ್ಕೂ ಕೇಳುವುದಿಲ್ಲ ಎಂದೂ ವಿಶ್ವಸನೀಯ ಮೂಲಗಳು ತಿಳಿಸಿವೆ.

ಲೋಕಾಯುಕ್ತ ಸಂಸ್ಥೆಯಲ್ಲಿ ನಡೆಯಿತೆನ್ನಲಾದ ಭ್ರಷ್ಟಾಚಾರ ಪ್ರಕರಣದಲ್ಲಿ 7ನೇ ಆರೋಪಿ ಎಂದು ಹೆಸರಿಸಲಾಗಿರುವ ಭಾಸ್ಕರರಾವ್ ಅಮೆರಿಕಗೆ ಹೋಗಿಲ್ಲ. ದೇಶದೊಳಗೆ ಇದ್ದು ನಿರೀಕ್ಷಣಾ ಜಾಮೀನಿಗೂ ಅರ್ಜಿ ಸಲ್ಲಿಸುವುದಿಲ್ಲ ಎಂದು ಅವರ ಆಪ್ತ ಮೂಲಗಳು ಸ್ಪಷ್ಟಪಡಿಸಿವೆ.

ಕಾನೂನು ತಜ್ಞರು ಏನು ಹೇಳುತ್ತಾರೆ? ‘ಎಸ್ಐಟಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿರುವುದರಿಂದ ಕೋರ್ಟ್ ಈ ಸಂಬಂಧ ಆರೋಪಿಗೆ ಸಮನ್ಸ್ ಜಾರಿ ಮಾಡಬೇಕು. ಅದರಂತೆ ಆರೋಪಿ ಕೋರ್ಟ್ಗೆ ಹಾಜರಾಗಿ ಜಾಮೀನು ಪಡೆಯಬಹುದು’ ಎನ್ನುತ್ತಾರೆ ಹಿರಿಯ ವಕೀಲ ಅಶೋಕ ಹಾರನಹಳ್ಳಿ.

‘ಭಾಸ್ಕರರಾವ್ ಅವರು ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಆಗಿದ್ದವರು. ಲೋಕಾಯುಕ್ತ ಮುಖ್ಯಸ್ಥರಾಗಿದ್ದವರು. ಅಂತಹವರು ಹೇಗೆ ತಾನೇ ವಿಚಾರಣೆ ಎದುರಿಸದೆ ಓಡಿ ಹೋಗಲು ಸಾಧ್ಯ’ ಎಂದು ಹಾರನಹಳ್ಳಿ ಪ್ರಶ್ನಿಸುತ್ತಾರೆ.

‘ಸಾಮಾನ್ಯವಾಗಿ ಕೋರ್ಟ್ ಸಮನ್ಸ್ ಜಾರಿ ಮಾಡಿದ ಮೇಲೆ ಪ್ರಕರಣದ ಗಂಭೀರತೆಗೆ ಅನುಗುಣವಾಗಿ ಆರೋಪಿಗೆ ಜಾಮೀನು ಪಡೆಯಲು ಮುಕ್ತ ಅವಕಾಶ ನೀಡುವುದು ಕಾನೂನಿನ ಸಂಪ್ರದಾಯ. ಆದರೆ ಬಿ.ಎಸ್. ಯಡಿಯೂರಪ್ಪ ಪ್ರಕರಣದಲ್ಲಿ ಮಾತ್ರ ಸಮನ್ಸ್ ಜಾರಿ ಮಾಡಿದ ನಂತರ ಮೊದಲ ಹಾಜರಾತಿಯಲ್ಲೇ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು. ಇಂತಹ ವಿರಳ ಉದಾಹರಣೆಯಷ್ಟೇ ನಮ್ಮ ಕಣ್ಣ ಮುಂದಿದೆ. ಆದರೆ, ಭಾಸ್ಕರ ರಾವ್ ಪ್ರಕರಣದಲ್ಲಿ ಮೇಲ್ನೋಟಕ್ಕೆ ಅವರ ಬಂಧನದ ಭೀತಿ ಏನೂ ಕಾಣುತ್ತಿಲ್ಲ’ ಎಂಬುದು ಹಾರನಹಳ್ಳಿ ಅವರ ಅಂದಾಜು.

ಮತ್ತೊಬ್ಬ ಹಿರಿಯ ವಕೀಲ ಸಿ.ವಿ.ನಾಗೇಶ್ ಅವರ ಪ್ರಕಾರ, ‘ಈ ಹಂತದಲ್ಲಿ ಭಾಸ್ಕರರಾವ್ ಅವರ ಬಂಧನ ಸಾಧ್ಯವಿಲ್ಲ. ಯಾಕೆಂದರೆ ದೋಷಾರೋಪ ಪಟ್ಟಿ ಸಲ್ಲಿಸಿದ ಮೇಲೆ ಅದು ಏನಿದ್ದರೂ ಕೋರ್ಟ್ ಅಂಗಳದ ಚೆಂಡು’ ಎನ್ನುತ್ತಾರೆ.

ದೋಷಾರೋಪ ಪಟ್ಟಿಯಲ್ಲಿ ಆರೋಪಿಯ ವಿರುದ್ಧ ಪ್ರಥಮ ಗೋಚರಿಕೆ (ಸಂಜ್ಞೇಯ) ಅಂಶಗಳಲ್ಲಿ ಬಂಧಿಸಬಹುದೆಂಬ ಕಾರಣ ಕಂಡು ಬಂದರೆ ಮಾತ್ರವೇ ಕ್ರಮಕ್ಕೆ ಮುಂದಾಗಬಹುದು. ಅದರಲ್ಲೂ ಕೋರ್ಟ್ ಪ್ರಥಮ ಬಾರಿಗೆ ಆರೋಪಿಯನ್ನು ಬರಮಾಡಿಕೊಳ್ಳುವಾಗ ಸಮನ್ಸ್ ಅಥವಾ ವಾರೆಂಟ್ ಜಾರಿ ಮಾಡಬೇಕು. ಅದರಲ್ಲೂ ವಾರೆಂಟ್ ಜಾರಿ ಮಾಡಬೇಕಾದರೆ ಸಕಾರಣಗಳಿರಲೇಬೇಕು ಎಂಬುದನ್ನು ಸುಪ್ರಿಂಕೋರ್ಟ್ ಸ್ಪಷ್ಟಪಡಿಸಿದೆ’ ಎನ್ನುತ್ತಾರೆ ನಾಗೇಶ್.

ಯುವ ವಕೀಲ ಕೆ.ಬಿ.ಕೆ.ಸ್ವಾಮಿ ಅವರ ಪ್ರಕಾರ, ‘ಎಸ್ಐಟಿಯು ಭಾಸ್ಕರ ರಾವ್ ವಿರುದ್ಧ ಈಗ ಸಲ್ಲಿಸಿರುವ ದೋಷಾರೋಪ ಪಟ್ಟಿಯು, ಪೂರಕ ದೋಷಾರೋಪ ಅಥವಾ ಹೆಚ್ಚುವರಿ ದೋಷಾರೋಪ ಪಟ್ಟಿ. ಹೀಗಾಗಿ ಈ ಸಂದರ್ಭದಲ್ಲಿ ಭಾಸ್ಕರರಾವ್ ಬಂಧನ ಆಗದು’ ಎನ್ನುವ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

‘ಮೊದಲ ಆರೋಪ ಪಟ್ಟಿಯಲ್ಲಿ ಭಾಸ್ಕರ ರಾವ್ ಅವರ ಪುತ್ರ ಅಶ್ವಿನ್ ರಾವ್, ನಾರಾಯಣಗೌಡ, 420 ಭಾಸ್ಕರ ಸೇರಿದಂತೆ ಇತರರನ್ನು ಪ್ರಮುಖ ಆರೋಪಿಗಳನ್ನಾಗಿಸಲಾಗಿದೆ. ಅಂತೆಯೇ ಈ ಆರೋಪಿಗಳೆಲ್ಲಾ ಈಗ ನ್ಯಾಯಾಂಗ ಬಂಧನದಲ್ಲಿದ್ದಾರೆ. ಒಂದು ವೇಳೆ ಭಾಸ್ಕರರಾವ್ ಅವರನ್ನು ವಶಕ್ಕೆ ಪಡೆದು ಹೇಳಿಕೆ ಪಡೆಯಬೇಕಿತ್ತು ಮತ್ತು ಅವರನ್ನು ಬಂಧಿಸಬಹುದಿತ್ತು ಎಂದಿದ್ದರೆ ಮೊದಲ ಆರೋಪ ಪಟ್ಟಿ ಸಲ್ಲಿಸುವ ಸಂದರ್ಭದಲ್ಲೇ ಬಂಧಿಸಲಾಗುತ್ತಿತ್ತು’ ಎನ್ನುತ್ತಾರೆ.

ಭಾಸ್ಕರರಾವ್ ವಿರುದ್ಧ ಮೊಕದ್ದಮೆ ದಾಖಲಿಸಿ ವಿಚಾರಣೆಗೆ ರಾಜ್ಯಪಾಲ ವಿ.ಆರ್.ವಾಲಾ ಅವರು ಅನುಮತಿ ನೀಡಿದ ಕಾರಣ ಎಸ್ಐಟಿ ಲೋಕಾಯುಕ್ತ ನ್ಯಾಯಾಲಯಕ್ಕೆ ಹೆಚ್ಚುವರಿ ದೋಷಾರೋಪ ಪಟ್ಟಿ ಸಲ್ಲಿಸಿದೆ.

ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡಿದರೆಂಬ ಆರೋಪಕ್ಕೆ ಒಳಗಾಗಿ ಲೋಕಾಯುಕ್ತ ಹುದ್ದೆಗೆ ವೈ. ಭಾಸ್ಕರರಾವ್ ಕಳೆದ ವರ್ಷದ ಡಿಸೆಂಬರ್ ತಿಂಗಳಿನಲ್ಲಿ ರಾಜೀನಾಮೆ ನೀಡಿದ್ದರು. ಹೆಚ್ಚುವರಿ ದೋಷಾರೋಪ ಪಟ್ಟಿಯಲ್ಲಿ (ಚಾರ್ಜ್ ಶೀಟ್) ಭಾಸ್ಕರರಾವ್ ಅವರಿಗೆ ಸೇರಿದ ಸರ್ಕಾರಿ ಅಧಿಕೃತ ಕಚೇರಿ ಹಾಗೂ ನಿವಾಸದಲ್ಲೇ ಭ್ರಷ್ಟಾಚಾರ ನಡೆದಿದೆ ಎಂಬುದನ್ನು ಉಲ್ಲೇಖ ಮಾಡಲಾಗಿದೆ.

ಭಾರತದಲ್ಲೇ ಇದ್ದಾರೆ...
ಭಾಸ್ಕರರಾವ್ ಅವರು ಅಮೆರಿಕದಲ್ಲಿದ್ದಾರೆ ಎಂಬ ವದಂತಿಗಳನ್ನು ಅವರ ಆಪ್ತ ಮೂಲಗಳು ನಿರಾಕರಿಸಿವೆ. ‘ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ನನ್ನನ್ನು ಈಗ್ಗೆ ಎರಡು ದಿನಗಳ ಕೆಳಗೆ ಈ ರೀತಿ ಪ್ರಶ್ನಿಸಿದ್ದು ನಿಜ. ಆದರೆ ಭಾಸ್ಕರರಾವ್ ಎಲ್ಲೂ ಹೋಗಿಲ್ಲ. ಭಾರತದಲ್ಲೇ ಇದ್ದಾರೆ ಎಂದು ಮಾತ್ರ ಹೇಳಬಲ್ಲೆ. ಎಲ್ಲಿದ್ದಾರೆ ಎಂದು ಮಾತ್ರ ಕೇಳಬೇಡಿ’ ಎಂದು ಹೆಸರು ಹೇಳಲು ಇಚ್ಚಿಸದ ಹಿರಿಯ ಕ್ರಿಮಿನಲ್ ವಕೀಲರೊಬ್ಬರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.