ಖಾಸಗಿ ವಲಯದಲ್ಲಿ ಮೀಸಲಾತಿಯ ವಿಷಯ ಬಂದಾಗ ಷರೀಫರ `ಕೋಡಗನ ಕೋಳಿ ನುಂಗಿತ್ತಾ~ ತತ್ವಪದ ನೆನಪಾಗುತ್ತದೆ. ಸರ್ಕಾರದ ಪೋಷಣೆ, ನೆರವಿನಿಂದಲೇ ಬೃಹತ್ತಾಗಿ ಬೆಳೆದು ನಿಂತಿರುವ ಖಾಸಗಿ ಸಂಸ್ಥೆಗಳು ಇಂದು ಪ್ರಭುತ್ವಗಳನ್ನೇ ನುಂಗಿ ನೀರು ಕುಡಿಯುವಷ್ಟು ಪ್ರಭಾವಶಾಲಿಯಾಗಿವೆ.

ಪ್ರಧಾನಿ ಮನಮೋಹನ್ ಸಿಂಗ್ ಅವರ ಯುಪಿಎ ಸರ್ಕಾರದ ಸಾಮಾನ್ಯ ಕನಿಷ್ಠ ಕಾರ್ಯಕ್ರಮದಲ್ಲಿ `ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೂ ಖಾಸಗಿಕ್ಷೇತ್ರದಲ್ಲಿ ಮೀಸಲಾತಿ ವಿಸ್ತರಿಸಲಾಗುವುದು~ ಎಂಬುದನ್ನು ಬಿಟ್ಟರೆ ಅದು ಕೇವಲ ನೆಪಮಾತ್ರದ ಘೋಷಣೆಯಾಗಿಯೇ ಉಳಿದಿದೆ. ಅದಿರಲಿ, ಈಗ ಜಾತಿ ಮೀಸಲಾತಿ ಅಭಿವೃದ್ಧಿ, ಮುಕ್ತ ಮಾರುಕಟ್ಟೆ ಧೋರಣೆಗೆ ವಿರೋಧವೆಂಬ ಖಾಸಗಿ ಶಕ್ತಿಗಳ ದೃಢ ನಂಬಿಕೆಯನ್ನು ಬದಲಿಸುವುದಿರಲಿ, ಪ್ರಶ್ನಿಸುವ ತಾಕತ್ತು, ಇಚ್ಛೆಯೂ ಪ್ರಭುತ್ವಕ್ಕಿಲ್ಲ.

ಸ್ವಾತಂತ್ರ್ಯಪೂರ್ವ-ಸ್ವಾತಂತ್ರ್ಯೋತ್ತರದಲ್ಲಿ ಅಂಬೇಡ್ಕರ್ ಹೋರಾಟದ ಫಲವಾಗಿ, ಮೀಸಲಾತಿಯನ್ನು ಜಾರಿಗೊಳಿಸಲಾಯಿತೇ ವಿನಾ ಭಾರತದಲ್ಲಿ ಸಾಮಾಜಿಕ ನ್ಯಾಯವಾಗಲೀ, ಸಮಾನತೆಯಾಗಲೀ, ನಾಗರಿಕ ಹಕ್ಕುಗಳನ್ನಾಗಲೀ ಅಳವಡಿಸಿಕೊಳ್ಳಬೇಕೆಂಬ ಪ್ರಾಮಾಣಿಕ ಕಾರಣದಿಂದಲ್ಲ.

ಆಗ ದೇಶಿ ಬಂಡವಾಳವನ್ನು ಅಭಿವೃದ್ಧಿ ಪಡಿಸಲು ಸರ್ಕಾರವೇ ಬಂಡವಾಳ ಹೂಡಿ ಸರ್ಕಾರಿ ಬಂಡವಾಳದ ಒಂದು ಮಾದರಿಯನ್ನು ಪ್ರಾರಂಭಿಸಿತು. ಹೀಗಾಗಿ ಸಾರ್ವಜನಿಕ ವಲಯಕ್ಕೆ ಒತ್ತು ನೀಡಲಾಯಿತು.

ಇದರ ಜತೆಗೆ ಕಲ್ಯಾಣ ರಾಜ್ಯದ ಪರಿಕಲ್ಪನೆ ಹುಟ್ಟುಹಾಕಬೇಕಾದ ಅಗತ್ಯವಿದ್ದುದರಿಂದ, ಅನೇಕ ಜನಪರ ಯೋಜನೆಗಳು ಜಾರಿಗೆ ಬಂದವು. ಆದರೆ, ಈ ಸರ್ಕಾರಿ ಪ್ರಣೀತ ಬಂಡವಾಳಶಾಹಿ, ಮೇಲಿನಿಂದ ಹೇರಿದ್ದರಿಂದ ಸಹಜ ಬಂಡವಾಳಶಾಹಿ ಬೆಳವಣಿಗೆ ತರಬಹುದಾದ ಪ್ರಗತಿಪರ ಸಾಮಾಜಿಕ ಬದಲಾವಣೆ ಆಗಲಿಲ್ಲ.

ಫ್ಯೂಡಲ್ ಶಕ್ತಿಗಳು ನಾಶವಾಗದೇ, ಅಪೂರ್ಣ ಬಂಡವಾಳಶಾಹಿ ಬೆಳೆಯುವಂಥ ವಿಚಿತ್ರ ಪರಿಸ್ಥಿತಿ ಏರ್ಪಾಡಾಯಿತು. ಇದರ ಮುಂದುವರೆದ ಭಾಗವೇ ಖಾಸಗೀಕರಣ. ಆದರೆ ಮುಕ್ತ ಮಾರುಕಟ್ಟೆಗೆ ಸಾಮಾಜಿಕ ನ್ಯಾಯದ ಹಂಗಿಲ್ಲದೆ ಇರುವುದರಿಂದ ಅದು ಮೀಸಲಾತಿ ಹಾಗೂ ತಳ ಸಮುದಾಯಗಳ ವಿರೋಧಿ ಕೂಡ. ಅದನ್ನು ಬೆಂಬಲಿಸಲೇಬೇಕಾದ ಅನಿವಾರ್ಯತೆ ಪ್ರಭುತ್ವಕ್ಕೆ.

ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ಪ್ರಶ್ನೆಯಲ್ಲಿ ಅಡಕವಾಗಿರುವ ಅಂಶಗಳು:

1. ಖಾಸಗಿ ವಲಯದಲ್ಲಿ ಮೀಸಲಾತಿ ಕೇಳುವುದರಿಂದ, ಖಾಸಗೀಕರಣಕ್ಕೆ ಬೆಂಬಲ ಕೊಟ್ಟಂತಾಗುವುದಿಲ್ಲವೇ?

2. ಖಾಸಗೀಕರಣ ಮತ್ತು ಮೀಸಲಾತಿ ಪರಸ್ಪರ ವಿರೋಧ ಪಾತಳಿಗಳ ಮೇಲೆ (ಸಾಮಾಜಿಕ ಸಮಾನತೆ, ನಾಗರಿಕ ಹಕ್ಕು, ಜಾತಿವಿನಾಶ ಇತ್ಯಾದಿ) ನಿಂತಿರುವುದರಿಂದ, ಅವುಗಳ ಒಳಗೊಂದು ವಿಪರ್ಯಾಸವಿದೆಯಲ್ಲವೇ?

3. ಖಾಸಗೀಕರಣ ನಿಂತಿರುವುದೇ ಲಕ್ಷಾಂತರ ಸಣ್ಣ ಉದ್ದಿಮೆ, ಬದುಕಿನ ಕ್ರಮವನ್ನು ನಿರ್ನಾಮ ಮಾಡುವುದರ ಮೇಲೆ. ಹೀಗಾಗಿ, ಒಂದು ವೇಳೆ ಖಾಸಗೀಕರಣದಲ್ಲಿ ಮೀಸಲಾತಿ ಜಾರಿಗೆ ಬಂದರೂ, ಅದು ಲಕ್ಷಾಂತರ ಬಡಜನರನ್ನು, ದಲಿತರನ್ನು ಸಾಮಾಜಿಕವಾಗಿ ಹೊರಗುಳಿಸುವ ಪ್ರಕ್ರಿಯೆಯನ್ನು ಹೇಗೆ ತಪ್ಪಿಸುವುದು?

4. ಮೀಸಲಾತಿಗೆ ಒತ್ತಾಯಿಸುವುದರ ಜೊತೆಗೆ, ಖಾಸಗೀಕರಣ, ಮುಕ್ತ ಮಾರುಕಟ್ಟೆ ಆರ್ಥಿಕ ನೀತಿಯನ್ನೇ ವಿರೋಧಿಸಬೇಕಲ್ಲವೇ?

ಈ ಹಿನ್ನೆಲೆಯಲ್ಲಿ ಕೆಲವು ಸಂಗತಿಗಳನ್ನು ಕೆಳಗಿನಂತೆ ವಿಮರ್ಶಿಸಬಹುದು:

1. ಮೀಸಲಾತಿ ಕೊಡುವುದಕ್ಕೆ ಅಪೇಕ್ಷಣೀಯ ಮತ್ತು ಅನಪೇಕ್ಷಣೀಯ ಕಾರಣಗಳಿರಬಹುದು. ದಲಿತರು ಮತ್ತು ಇತರೆ ಅಲ್ಪಸಂಖ್ಯಾತರನ್ನು ಖಾಸಗಿ ಕ್ಷೇತ್ರದಿಂದ ಹೊರಗಿಟ್ಟರೆ ದಂಗೆ ಮತ್ತು ಅರಾಜಕತೆ ನಿರ್ಮಾಣವಾಗಬಹುದು ಎಂಬ ಆತಂಕ ಬಿಟ್ಟರೆ ಸಮಾನ ಸಮಾಜ ನಿರ್ಮಾಣ ಮತ್ತು ಸಾಮಾಜಿಕ ನ್ಯಾಯದ ಕಾಳಜಿಯಿಂದಲ್ಲ.

2. ಸದ್ಯಕ್ಕೆ ಇರುವ ಮೀಸಲಾತಿ, ಐಸಿಯುನಲ್ಲಿರುವ ರೋಗಿಯನ್ನು ಕೃತಕ ಉಳಿಕೆ ವ್ಯವಸ್ಥೆಯಲ್ಲಿ ಜೀವಂತವಾಗಿ ಇರಿಸಿದಂತಾಗುತ್ತದೆ. ಶಿಕ್ಷಣ, ಆರೋಗ್ಯ, ಉದ್ಯೋಗ ಇತ್ಯಾದಿ ಸಾರ್ವಜನಿಕ ವಲಯಗಳು, ದೇಶದ ಸಂಪತ್ತನ್ನು ಖಾಸಗಿ ವಲಯಕ್ಕೆ ಧಾರೆಯೆರೆದು ಕೊಡುತ್ತಿರುವ ಸಂದಿಗ್ಧ ಪರಿಸ್ಥಿತಿಯನ್ನು ನೋಡುತ್ತಿದ್ದೇವೆ.

3.ಖಾಸಗೀಕರಣವು ಮೂಲಭೂತವಾಗಿ `ರಚನಾತ್ಮಕ~ ಅಸಮಾನತೆ ಮೇಲೆ ನಿಂತಿದೆ. ಈ ಅಸಮಾನತೆ, ಜಾತಿಪದ್ಧತಿಯಿಂದ ನರಳುತ್ತಿರುವ ಸಮಾಜದ ರಚನೆಯನ್ನೇ ಹೋಲುತ್ತದೆ. ಆದ್ದರಿಂದ ಬಂಡವಾಳಶಾಹಿಗೂ, ಜಾತಿ ಸಮಾಜದ ಆಶಯ, ರಚನೆಗೂ ಸಾಮ್ಯಗಳಿವೆ. ವ್ಯವಸ್ಥಿತವಾಗಿ ಬಹುಸಂಖ್ಯಾತರಿಗೆ ಸಂಪನ್ಮೂಲಗಳನ್ನು ಸಿಗದಂತೆ ಮಾಡುವ ಮೂಲಕ ಬಂಡವಾಳಶಾಹಿ ಪ್ರಬಲವಾಗಿ ತನ್ನ ನೆಲೆಯನ್ನು ಕಂಡುಕೊಂಡಿದೆ.

ಖಾಸಗಿ ಕ್ಷೇತ್ರದಲ್ಲೂ ತನಗೆ ಬೇಕಾದವರನ್ನು ಆರಿಸಿಕೊಂಡು ತಳ ಸಮುದಾಯಗಳನ್ನು ಹೊರಗಿಟ್ಟಿರುವ ತಾರತಮ್ಯವನ್ನು ಕಾಣಬಹುದಾಗಿದೆ. ಖಾಸಗೀಕರಣವನ್ನು ಬಯಸುತ್ತಾ, ಅದರಿಂದ ಮೀಸಲಾತಿಯನ್ನು ಬಯಸುವುದೇ ವ್ಯಂಗ್ಯದಂತೆ ಕಾಣುತ್ತದೆ.

4. ಖಾಸಗಿ ಎನ್ನುವುದು ನಿಜಕ್ಕೂ ಎಷ್ಟು ಖಾಸಗಿ? ಅಗ್ಗದಲ್ಲಿ ಭೂಮಿ, ಸರ್ಕಾರಿ ಸಾಲ, ವಿದ್ಯುತ್, ನೀರು, ತೆರಿಗೆ ವಿನಾಯಿತಿ, ಸಬ್ಸಿಡಿ, ಇತರೆ ಸಂಪನ್ಮೂಲಗಳ ಬೆಂಬಲವಿಲ್ಲದೆ ಇಂದು ನಮ್ಮ ದೇಶದ ಬೃಹತ್ ಖಾಸಗಿ ಕ್ಷೇತ್ರದ ಬಂಡವಾಳ ಬೆಳವಣಿಗೆ ಸಾಧ್ಯವಾಗುತ್ತಿರಲಿಲ್ಲ. ಪ್ರಭುತ್ವ ಮತ್ತು ಸಾರ್ವಜನಿಕ ಸಂಸ್ಥೆಗಳಿಂದ ಪಡೆದ ಸವಲತ್ತುಗಳಿಂದಾಗಿ ಶುದ್ಧ ಖಾಸಗಿ ವಲಯ ಸಮಾಜದಲ್ಲಿ ಇರುವುದಕ್ಕೆ ಸಾಧ್ಯವಿಲ್ಲ.

ಆದ್ದರಿಂದ ಈ ವಲಯದಲ್ಲಿ ಮೀಸಲಾತಿ ಎನ್ನುವುದು, ಸರ್ಕಾರವಾಗಲೀ, ಖಾಸಗಿ ಸಂಸ್ಥೆಗಳಾಗಲೀ ಕೊಡಮಾಡುವ ಭಿಕ್ಷೆಯಲ್ಲ. ಅದನ್ನು, ಅಂಬೇಡ್ಕರ್ ಪ್ರತಿಪಾದಿಸುತ್ತಿದ್ದ ನಾಗರಿಕ ಹಕ್ಕಿನ, ಘನತೆಯಿಂದ ಬಾಳುವ ಅವಕಾಶದ ಹಕ್ಕಿನ ಪ್ರಶ್ನೆಯನ್ನಾಗಿಸಬೇಕಾಗಿದೆ.
5. ಭಾರತದಲ್ಲಿ ಮೀಸಲಾತಿ ಸರ್ಕಾರಿ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿದ್ದರೆ ಅನೇಕ ದೇಶಗಳಲ್ಲಿ, ಉದಾಹರಣೆಗೆ ಅಮೆರಿಕಾ, ಉತ್ತರ ಐರ್ಲ್ಯಾಂಡ್, ದಕ್ಷಿಣ ಆಫ್ರಿಕಾ, ಮಲೇಷಿಯಾ ಮೊದಲಾದ ದೇಶಗಳಲ್ಲಿ ಮೀಸಲಾತಿಯಂತಹ ದೃಢ ಸಂಕಲ್ಪ ಅ್ಛ್ಛಜ್ಟಿಞಠಿಜಿಛಿ ಚ್ಚಠಿಜಿಟ್ಞ ನೀತಿಗಳು ಸಾರ್ವಜನಿಕ ಮತ್ತು ಖಾಸಗಿ ವಲಯಗಳಲ್ಲಿ ಜಾರಿಯಲ್ಲಿವೆ.

ಸರ್ಕಾರದ ವಿವಿಧ ಸವಲತ್ತುಗಳನ್ನು ಅನುಭವಿಸುವ, ಸಾರ್ವಜನಿಕ ಹಣಕಾಸು ಸಂಸ್ಥೆಗಳಿಂದ ಸಾಲಪಡೆಯುವ ಎಲ್ಲ ಕೈಗಾರಿಕೆಗಳು, ವಸತಿ, ಶಿಕ್ಷಣ, ರಾಜಕೀಯ ಸಂಸ್ಥೆಗಳು... ಇತ್ಯಾದಿ ಎಲ್ಲವನ್ನು ಒಳಗೊಂಡಿರುವ ಉದಾಹರಣೆಗಳಿವೆ. ಕೇವಲ ಔಪಚಾರಿಕ ಹಕ್ಕುಗಳಾಗಿ ಉಳಿಯದೆ ಇವುಗಳ ಚಾಲನೆ ಮತ್ತು ಕಾರ್ಯಗತಕ್ಕೆ ಸಂಬಂಧಪಟ್ಟ ಕಾನೂನುಗಳು ಮತ್ತು ಸಂಸ್ಥೆಗಳು ಇರುವುದನ್ನು ಗಮನಿಸಬಹುದು.

ಅಮೆರಿಕಾದಲ್ಲಿ Equal Opportunity (Employment) Laws ಮತ್ತು Equal Employment Opportunities Commission; ದಕ್ಷಿಣ ಆಫ್ರಿಕಾದಲ್ಲಿ The Employment Equity Act, 1998, ಮತ್ತು The Promotion of Equality and Prevention of Unfair Discrimination Act, 2000 ; ನೆದರ್ಲೆಂಡಿನಲ್ಲಿ Fair Employment Act… ಕೆಲವು ಉದಾಹರಣೆಗಳಾಗಿವೆ.

6. ಒಟ್ಟಾರೆ, ಖಾಸಗಿ ವಲಯದಲ್ಲಿ ಮೀಸಲಾತಿಯ ಪ್ರಸ್ತಾವನೆ, ಭಾರತ ಸಂವಿಧಾನದ ಪರಿಚ್ಛೇದ 39(ಬಿ) ಮತ್ತು (ಸಿ)ಯಲ್ಲಿ ಉಲ್ಲೇಖಿಸಿರುವಂತೆ ಈ ದೇಶದ ಸಂಪತ್ತು ಮತ್ತು ಸಂಪನ್ಮೂಲಗಳನ್ನು ಪ್ರಜಾಪ್ರಭುತ್ವೀಕರಿಸುವುದು; ಪರಿಚ್ಛೇಧ 38(2)ರ ಪ್ರಕಾರ ವ್ಯಕ್ತಿ-ವ್ಯಕ್ತಿಗಳು ಮತ್ತು ಸಮುದಾಯಗಳ ನಡುವೆ ಅಸಮಾನತೆ ಮತ್ತು ತಾರತಮ್ಯಗಳನ್ನು ಹೋಗಲಾಡಿಸುವುದು, ಈ ತತ್ವಗಳಲ್ಲಿ ಅಡಗಿದೆ.

ಇದಕ್ಕೆ ನೇರ ಸಂಬಂಧಿಸಿದಂತೆ ಪರಿಚ್ಛೇದ 14 ಮತ್ತು 15 ಸ್ಪಷ್ಟವಾದ ನಿಲುವುಗಳನ್ನು ಹೊಂದಿದೆ. ಆಮೂಲಾಗ್ರ ಸಾಮಾಜಿಕ ಬದಲಾವಣೆ ತರುವುದೇ ನಮ್ಮ ಇಡೀ ಸಂವಿಧಾನದ ಮೂಲ ಆಶಯ.

ಆದ್ದರಿಂದ, ಖಾಸಗಿ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳು ಹಾಗೂ ಇತರೆ ತಳ ಸಮುದಾಯಗಳಿಗೆ ಮೀಸಲಾತಿ ನೀಡಿಕೆ ಕುರಿತು ಸರ್ಕಾರ ಹಸ್ತಕ್ಷೇಪ ಮಾಡಬೇಕು ಎಂಬ ವಾದವನ್ನು ಮಂಡಿಸುವುದಕ್ಕಿಂತಲೂ ಈ ದೇಶದ ಅಪಾರ ಜನರ ಸಾಮಾನ್ಯ ಜೀವನಮಟ್ಟ ಸುಧಾರಿಸಲು ಸರ್ಕಾರವೇ ಖಾಸಗಿ ಕ್ಷೇತ್ರದಲ್ಲಿ ಕಡ್ಡಾಯ ಮೀಸಲು ನೀಡಲೇಬೇಕೆಂಬ ಆದೇಶ ಹೊರಡಿಸಬೇಕಿದೆ. ಅಂಬೇಡ್ಕರ್ ಪ್ರಕಾರ Reservation is neither a policy matter, a political gimmick, nor a matter of charity. It is a constitutional obligation.

(ಲೇಖಕರು `ರಾಷ್ಟ್ರೀಯ ಕಾನೂನು ಶಾಲೆ~ಯ ಸಾಮಾಜಿಕ ಪ್ರತ್ಯೇಕತೆ ಮತ್ತು ಒಳಗೊಳ್ಳುವಿಕೆ ನೀತಿಯ ಅಧ್ಯಯನ ಕೇಂದ್ರದ ನಿರ್ದೇಶಕರು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.