ಸೋಮವಾರ, ಜನವರಿ 27, 2020
17 °C
ಬೆಳಗಾವಿ ವಿಧಾನಮಂಡಲ ಅಧಿವೇಶನ–2013

ಭೂಮಾಪನ: 6 ತಿಂಗಳಲ್ಲಿ 1.73 ಲಕ್ಷ ಅರ್ಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುವರ್ಣ ಸೌಧ (ಬೆಳಗಾವಿ): ಭೂ ಮಾಪನ ಕೋರಿ ರಾಜ್ಯದಲ್ಲಿ ಕಳೆದ ಆರು ತಿಂಗಳಲ್ಲಿ ಬಂದ ಅರ್ಜಿಗಳು ೧,೭೩,೦೭೯.

ಕಾಂಗ್ರೆಸ್ ನ ಕೆ.ಪ್ರತಾಪಚಂದ್ರ ಶೆಟ್ಟಿ ಕೇಳಿದ ಪ್ರಶ್ನೆಗೆ ಕಂದಾಯ ಸಚಿವ ಬುಧವಾರ ವಿಧಾನ ಪರಿಷತ್ತಿನಲ್ಲಿ ನೀಡಿದ ಉತ್ತರದಲ್ಲಿ ಈ ಮಾಹಿತಿಯನ್ನು ಒದಗಿಸಿದರು.ಕಳೆದ ಮೇ ತಿಂಗಳಿಂದ ಅಕ್ಟೋಬರ್ ವರೆಗೆ ಈ ಅರ್ಜಿಗಳು ಬಂದಿದ್ದು ಅವುಗಳ ಪೈಕಿ ೧,೧೮,೬೪೫ ಅರ್ಜಿ ಗಳನ್ನು ವಿಲೇವಾರಿ ಮಾಡ ಲಾಗಿದೆ ಎಂದು ತಿಳಿಸಿದ ಸಚಿವರು ನವೆಂಬರ್ ಒಂದರಿಂದ ಇಲಾಖೆಯ ಎಲ್ಲ ಸೇವೆ ಗಳನ್ನು ಗಣಕೀಕರಣಗೊಳಿಸಲಾಗಿದ್ದು ಅರ್ಜಿಗಳ ತ್ವರಿತ ವಿಲೇವಾರಿಗೆ ಇದು ನೆರವಾಗಲಿದೆ ಎಂದು ಹೇಳಿದರು.ರಾಜ್ಯದಲ್ಲಿ ಒಟ್ಟು ೩೪೬೨ ಮಂದಿ ಕಾಯಂ ಭೂಮಾಪಕರು ಮತ್ತು ೨೨೦೨ ಮಂದಿ ಪರವಾನಗಿ ಪಡೆದ ಭೂಮಾಪಕರು ಇದ್ದಾರೆ. ೧೮೬೯ ಮಂದಿಯನ್ನು ಹೊಸದಾಗಿ ನೇಮಕ ಮಾಡಲಾಗಿದ್ದು ಆರು ತಿಂಗಳ ತರಬೇತಿ ನಂತರ ಅವರು ಸೇವೆಗೆ ಸೇರಲಿದ್ದಾರೆ ಎಂದು ಸಚಿವರು ತಿಳಿಸಿದರು.

ಪ್ರತಿಕ್ರಿಯಿಸಿ (+)