ಮಂಗಳವಾರ, ಏಪ್ರಿಲ್ 13, 2021
23 °C

ಭೂಮಿ ಸಕ್ರಮಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 ಕುಮಟಾ : ಇಲ್ಲಿಯ ಸರಕಾರಿ ಆಸ್ಪತ್ರೆ ಸುತ್ತಲಿನ ಕಂದಾಯ ಭೂಮಿ ಅತಿಕ್ರಮಣದಾರರು ಸಂಬಂಧಪಟ್ಟ ಅಧಿಕಾರಿಗಳು ತಮ್ಮನ್ನು ತೆರವು ಗೊಳಿಸದಂತೆ ಸಹಾಯ ಮಾಡಬೇಕು ಎಂದು ಶುಕ್ರವಾರ ಶಾಸಕ ದಿನಕರ ಶೆಟ್ಟಿ ಅವರಿಗೆ ಮನವಿ ಅರ್ಪಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅತಿಕ್ರಮಣದಾರರು, ಈ ಭಾಗದ ಸುಮಾರು 68 ಜನರ ಅತಿಕ್ರಮಣವನ್ನು ಜಿಲ್ಲಾಧಿಕಾರಿಗಳು ಸಕ್ರಮಗೊಳಿಸಿ ಅತಿಕ್ರಮಣದಾರರಿಂದ ಕರ ಪಾವತಿ ಮಾಡಿಸಿಕೊಂಡಿದ್ದಾರೆ. ಕೆಲ ಅತಿಕ್ರಮಣದಾರರಿಗೆ ಪಹಣಿ ಪತ್ರಿಕೆ ಸಿಕ್ಕದ್ದು, ಅದರ 9 ನೇ ನಂಬರ್ ಕಾಲಂನಲ್ಲಿ ಅತಿಕ್ರಮಣದಾರರ ಹೆಸರು ದಾಖ ಲಾಗಿದೆ. ಹೀಗಿರುವಾಗ ಸ್ಥಳೀಯ ಕಂದಾಯ ಇಲಾಖೆಯಿಂದ ಅತಿಕ್ರಮಣ ತೆರವುಗೊಳಿಸುವಂತೆ ತಮಗೆ ಪತ್ರಬಂದಿದೆ. ವಾಸಕ್ಕೆ ಮನೆ ಇಲ್ಲದ ನಾವೆಲ್ಲ ಐದು ರಿಂದ 1 ಗುಂಟೆವರೆಗೆ ಮಾತ್ರ ಮನೆ ಕಟ್ಟಿಕೊಳ್ಳಲು ಅತಿಕ್ರಮಣ ಮಾಡಿದ್ದೇವೆ. ಅದನ್ನು ಸರಕಾರ ಸಕ್ರಮಗೊಳಿಸಿ ಸಹಾಯ ಮಾಡಬೇಕು ಎಂದು ಶಾಸಕರಿಗೆ ನೀಡಿದ ಮನವಿಯಲ್ಲಿ ತಿಳಿಸಲಾಗಿದೆ.ಮನವಿ ಸ್ವೀಕರಿಸಿದ ಶಾಸಕರು, ಕೆಲವರಿಗೆ ಜಮೀನು ಪಟ್ಟಾ, ಇನ್ನು ಕೆಲವರಿಗೆ ಪಹಣಿ  ನೀಡಿ ಮತ್ತೆ ಜಾಗ ತೆರವುಗೊಳಿಸುವಂತೆ ಕಂದಾಯ ಇಲಾಖೆ ಅಧಿಕಾರಿಗಳು ನೊಟೀಸು ನೀಡಿದ್ದು,  ತೀರಾ ಗೊಂದಲಕಾರಿ ಯಾಗಿದೆ. ವಾಸಕ್ಕೆ ಮನೆ ಇಲ್ಲದ ಜನರನ್ನು ಒಕ್ಕಲೆಬ್ಬಿಸಲು ಸರಕಾರ ಮುಂದಾದರೆ ತಾವು ಕಂದಾಯ ಇಲಾಖೆ ಕಚೇರಿ ಎದುರು ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಭರವಸೆ ನೀಡಿದರು. ಜೆಡಿ(ಎಸ್)ನ ಬೀರಪ್ಪ ನಾಯ್ಕ, ನಾಗೇಶ ನಾಯ್ಕ ಮೊದಲಾದವರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.