ಗುರುವಾರ , ಫೆಬ್ರವರಿ 20, 2020
30 °C

ಭೋಪಾಲ್‌ ದುರಂತ: ಹೊಸ ಸಾಕ್ಷ್ಯ ಲಭ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನ್ಯೂಯಾರ್ಕ್‌ (ಐಎಎನ್‌ಎಸ್‌): ಭೋಪಾಲ್‌ ಅನಿಲ ದುರಂತ ಪ್ರಕ­ರಣ­ದಲ್ಲಿ ‘ಯೂನಿಯನ್‌ ಕಾರ್ಬೈಡ್‌ ಗ್ರೂಪ್‌’ ಪಾತ್ರವಿರುವುದನ್ನು ಪುಷ್ಟೀಕ­ರಿ­ಸುವ ಇನ್ನೊಂದು ಸಾಕ್ಷ್ಯವು ಬುಧವಾರ ಲಭ್ಯವಾಗಿದೆ. ಈ ಸಾಕ್ಷ್ಯವು ಭೋಪಾಲ್‌ ಕೀಟ­ನಾಶಕ ತಯಾರಿಕಾ ಸ್ಥಾವರದ ವಿನ್ಯಾಸ ಮತ್ತು ರಚನೆಯಲ್ಲಿ ಯೂನಿಯನ್‌ ಕಾರ್ಬೈಡ್‌ ನೇರವಾದ ಪಾತ್ರ ವಹಿಸಿದೆ ಎಂದು ದೃಢೀಕರಿಸುತ್ತದೆ.

ಹಿಂದಿನ ಯೂನಿಯನ್‌ ಕಾರ್ಬೈಡ್‌ನ ಕೆಲಸ­ಗಾರರ ಹೇಳಿಕೆಗಳು ಮತ್ತು ತಜ್ಞರ ಪರಿಶೀಲನೆಯನ್ನೂ ಒಳಗೊಂಡಿರುವ ಈ ಸಾಕ್ಷ್ಯದ ಪ್ರಕಾರ, ಕಂಪೆನಿಯ ಸ್ಥಾವರ ಮತ್ತು ಅದರ ತ್ಯಾಜ್ಯ ನಿರ್ವಹಣಾ ವ್ಯವಸ್ಥೆ ವಿನ್ಯಾಸವು ಅಸಮರ್ಪಕ­ವಾ­ಗಿತ್ತು. ಇದು ಭೋಪಾಲ್‌ನಲ್ಲಿ ವಿಷಪೂರಿತ ತ್ಯಾಜ್ಯಗ­ಳಿಂದ ತೊಂದರೆ ಉಂಟಾಗಲು ಕಾರಣ­ವಾಯ್ತು ಎಂದು ತಿಳಿದು ಬಂದಿದೆ.

ಈಗ ಮುಚ್ಚಲಾಗಿರುವ ಭೋಪಾಲ್‌ ಸ್ಥಾವರದ ಕಲುಷಿತ ಸ್ಥಳವನ್ನು ಸ್ವಚ್ಛ­ಗೊಳಿ­ಸಲು ಯೂನಿಯನ್‌ ಕಾರ್ಬೈಡ್‌ನ ಈಗಿನ ಅಂಗಸಂಸ್ಥೆ ಡೊವ್‌ ನಿರಾಕರಿ­ಸಿದ್ದು, ಅದಕ್ಕೆ ಯೂನಿಯನ್‌ ಕಾರ್ಬೈಡ್‌ನ ಹಿಂದಿನ ಅಂಗಸಂಸ್ಥೆ ಬೀಯರ್‌ ಜವಾಬ್ದಾರಿ ಎಂದು ಹೇಳಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)