ಭ್ರಷ್ಟಾಚಾರ ಮಾಡುವುದು ಧರ್ಮವೇ?

7

ಭ್ರಷ್ಟಾಚಾರ ಮಾಡುವುದು ಧರ್ಮವೇ?

Published:
Updated:

ಪ್ರೊ.ಮುಮ್ತಾಜ್ ಅಲಿಖಾನ್‌ರವರು `ಸಂಕಟ ನೋಡಿ ಸಂತಸ ಪಡೆಯುವುದು ಅಧರ್ಮ~ ಎಂಬ (ವಾವಾ ಅ. 20) ಪತ್ರದಲ್ಲಿ   ಜೈಲು ಸೇರಿರುವ ಭ್ರಷ್ಟಾಚಾರದ ಆರೋಪ ಹೊತ್ತಿರುವ ರಾಜಕಾರಣಿಗಳಿಗೆ ಕನಿಕರ ತೋರಿರುವುದು ಹಾಸ್ಯಾಸ್ಪದವಾಗಿದೆ.

 ತಮ್ಮ ಈ ಪತ್ರದಲ್ಲಿ ಅವರು ಪ್ರವಾದಿ ಮಹಮ್ಮದ್ ಮತ್ತು ಮದರ್ ತೆರೇಸಾರವರ ಹಿತವಾಣಿಯನ್ನು ಉಲ್ಲೇಖಿಸಿದ್ದಾರೆ.

ಸಂಕಷ್ಟದಲ್ಲಿರುವವರಿಗೆ ಅತ್ಯಂತ ದಯಾಮಯಿ ಎನ್ನುವುದು ತಿಳಿಯುತ್ತದೆ. ಯಾರೇ ಕಷ್ಟದಲ್ಲಿದ್ದಾಗ ಅವರ ನೋವಿನಲ್ಲಿ ಭಾಗಿಯಾಗುವುದು ಅವರ ಅತ್ಯಂತ ಸಹಜ ಗುಣ, ಎಂದಾಗ ಗಣಿಧಣಿ ಜನಾರ್ದನ ರೆಡ್ಡಿ, ಮಾಜಿ ಮುಖ್ಯಮಂತ್ರಿಗಳು ಹಾಗೂ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಜಗದೀಶ್ ಕಟ್ಟಾ...ಇವರೆಲ್ಲಾ ಮಹಾನ್ ಘನಂದಾರಿ ಕೆಲಸ ಮಾಡಿ ಜೈಲು ಸೇರಿ ಸಂಕಷ್ಟದಲ್ಲಿದ್ದಾರೆ ಎಂದು ಮುಮ್ತಾಜ್ ಅಲಿಖಾನ್ ಅವರು ತಿಳಿದುಕೊಂಡಂತಿದೆ. ಆದ್ದರಿಂದ ದಯಾಮಯಿ ಪ್ರ್ರೊಫೆಸರರು ಇವರೆಲ್ಲರ ಸಂಕಷ್ಟದಲ್ಲಿ ಜೊತೆಗೂಡಿ ಈ ಘನಂದಾರಿ ಕೆಲಸ ಮಾಡಿ ಸಂಕಟದಲ್ಲಿರುವ ಮಹಾನುಭಾವರು ಬಿಡುಗಡೆಯಾಗುವವರೆಗೂ ಅವರೊಂದಿಗೇ ಇದ್ದು ತಾವು ದಯಾಮಯಿ ಎಂಬುದನ್ನು ಸಾಬೀತುಪಡಿಸಲಿ!

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry