ಭಾನುವಾರ, ಜನವರಿ 19, 2020
27 °C

ಮಂಗಳನಲ್ಲಿ ನೀರು, ಜೀವಸಂಕುಲ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್‌ (ಪಿಟಿಐ): ಮಂಗಳ ಗ್ರಹದ ಮೇಲೆ ಶುದ್ಧ ನೀರಿನ ಝರಿ ಅಥವಾ ಸರೋವರದ ಕುರುಹು  ಪತ್ತೆಯಾಗಿದೆ ಎಂದು ನಾಸಾ ಹೇಳಿಕೊಂಡಿದೆ.

ಸುಮಾರು 360 ಕೋಟಿ ವರ್ಷಗಳ ಹಿಂದೆ ಮಂಗಳನ ಮೇಲೆ ಜೀವಸಂಕುಲ ಹೇರಳವಾಗಿತ್ತು  ಎಂದು ನಾಸಾ ವಿಜ್ಞಾನಿಗಳು ಹೇಳಿದ್ದಾರೆ. ವಿಜ್ಞಾನಿಗಳ ತಂಡದಲ್ಲಿ ಭಾರತೀಯ ಮೂಲದ ವಿಜ್ಞಾನಿ ಇದ್ದಾರೆ.ಮಂಗಳನ ಮಧ್ಯರೇಖೆ ಬಳಿಯಿರುವ ದೊಡ್ಡ ಕುಳಿಯ ಸಮೀಪ ‘ಎಲ್ಲೊ ನೈಫ್‌ ಬೇ’ ಹೆಸರಿನ ಸಂಚಿತ ಶಿಲಾ ಪದರಗಳನ್ನು ವಿಶ್ಲೇಷಣೆಗೆ ಒಳಪಡಿಸಿರುವುದಾಗಿ ನಾಸಾ ಮಾರ್ಸ್‌ ಸೈನ್ಸ್‌ ಲ್ಯಾಬೋರೇಟರಿ (ಎಂಎಸ್ಎಲ್‌)  ‘ಕ್ಯೂರಿಯಾಸಿಟಿ’ ರೋವರ್‌ ಮಿಷನ್‌ನಲ್ಲಿ ತೊಡಗಿಸಿಕೊಂಡಿರುವ ವಿಜ್ಞಾನಿಗಳು ತಿಳಿಸಿದ್ದಾರೆ.150 ಕಿ.ಮೀ ವ್ಯಾಪ್ತಿಯಲ್ಲಿ  ಇರುವ ಈ ಕುಳಿಯ ಸುತ್ತಲೂ ಶಿಲಾ ಪದರಗಳು ಕಂಡು ಬಂದಿದ್ದು, ಸುಮಾರು 3೬೦ ಕೋಟಿ ವರ್ಷಗಳ ಹಿಂದೆ ಇಲ್ಲಿ ಸರೋವರ ಇದ್ದಿರಬಹುದು ಎಂದು ಅಂದಾಜಿಸಲಾಗಿದೆ.ಪ್ರಶಾಂತ ಸರೋವರದಲ್ಲಿ ಇಂಗಾಲ (ಕಾರ್ಬನ್‌), ಹೈಡ್ರೋಜನ್‌ (ಜಲಜನಕ), ಆಮ್ಲಜನಕ (ಆಕ್ಸಿಜನ್‌), ನೈಟ್ರೊಜನ್‌ (ಸಾರಜನಕ) ಮತ್ತು ಗಂಧಕ(ಸಲ್ಫರ್‌)ದಂತಹ ಜೈವಿಕ ಧಾತುಗಳನ್ನು ಹೊಂದಿದ್ದ ಶುದ್ಧ ನೀರು ಇತ್ತು. ಸೂಕ್ಷ್ಮಜೀವಿಗಳಿಗೆ ಇದು ಹೇಳಿ ಮಾಡಿಸಿದ ಸ್ಥಳ.‘ಮಂಗಳನ ಮೇಲೆ ಜೀವ ಇತ್ತು ಎನ್ನುವುದನ್ನು ಪುಷ್ಟೀಕರಿಸುವಂತಹ ಯಾವುದೇ ಮಹತ್ವದ ಸಾಕ್ಷ್ಯ ಸಿಕ್ಕಿಲ್ಲ. ಆದರೆ, ಜೀವ ಕುರುಹು ಸೂಚಿಸುವ ಕುಳಿಗಳು ಮಾತ್ರ ಪತ್ತೆಯಾಗಿವೆ. ಮಂಗಳನ ಮೇಲೆ ಕೈಗೊಂಡಿರುವ ಅನ್ವೇಷಣಾ ಕಾರ್ಯಕ್ರಮದ ನಿಟ್ಟಿನಲ್ಲಿ ಇದು ಸಕಾರಾತ್ಮಕ ಹೆಜ್ಜೆಯಾಗಿದೆ’ ಎಂದು ಲಂಡನ್‌ ಇಂಪೀರಿಯಲ್‌ ಕಾಲೇಜಿನ ಪ್ರಾಧ್ಯಾಪಕ ಸಂಜೀವ್‌ ಗುಪ್ತಾ ಹೇಳಿದ್ದಾರೆ. ಈ ಕುರಿತ ಅಧ್ಯಯನ ವರದಿಯನ್ನು ಜರ್ನಲ್‌ ಸೈನ್ಸ್‌ ಪ್ರಕಟಿಸಿದೆ.

ಪ್ರತಿಕ್ರಿಯಿಸಿ (+)