ಗುರುವಾರ , ಮಾರ್ಚ್ 4, 2021
29 °C

ಮಂಗಳನ ಅಂಗಳಕ್ಕೆ ಗಗನ ನೌಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳನ ಅಂಗಳಕ್ಕೆ ಗಗನ ನೌಕೆ

ಬೆಂಗಳೂರು:  `ಮಂಗಳ ಗ್ರಹದ ಸಮಗ್ರ ಅಧ್ಯಯನಕ್ಕೆ ಅಕ್ಟೋಬರ್ ಕೊನೆಯ ವಾರದಲ್ಲಿ ಗಗನ ನೌಕೆ  ಕಳುಹಿಸಲಾಗುವುದು' ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಅಧ್ಯಕ್ಷ ಡಾ.ಕೆ.ರಾಧಾಕೃಷ್ಣನ್ ಪ್ರಕಟಿಸಿದರು.ನಗರದ ಜವಾಹರಲಾಲ್ ನೆಹರೂ ತಾರಾಲಯದಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ `ನಮ್ಮ ಸೌರವ್ಯೆಹ' ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.`ಗಗನನೌಕೆಯನ್ನು ಶ್ರೀಹರಿಕೋಟಾದಿಂದ ಉಡಾವಣೆ ಮಾಡಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಮಂಗಳನ ಅಂಗಳದಲ್ಲಿ ಮಿಥೆನ್ ರೂಪುಗೊಂಡ ಬಗೆಗೆ ನೌಕೆ ವಿಶೇಷ ಅಧ್ಯಯನ ನಡೆಸಲಿದೆ' ಎಂದು ತಿಳಿಸಿದರು.ಅಧ್ಯಕ್ಷತೆ ವಹಿಸಿದ್ದ ಹಿರಿಯ ವಿಜ್ಞಾನಿ ಪ್ರೊ. ಯು.ಆರ್. ರಾವ್, `ನೂರಾರು ವರ್ಷಗಳಿಂದ ಸಂಶೋಧನೆಗಳು ನಡೆದಿದ್ದರೂ ಭೂಮಿಯ ಕುರಿತು ನಾವು ತಿಳಿದುಕೊಂಡಿದ್ದು ಅತ್ಯಲ್ಪವಾದುದು' ಎಂದು ಹೇಳಿದರು.`ಭೂಮಿಯಲ್ಲಿ ನೀರಿನ ಲಭ್ಯತೆ ಇದೆ. ಆಮ್ಲಜನಕ ಹೇರಳವಾಗಿದೆ. ಆದರೆ, ಪಕ್ಕದ ಗ್ರಹಗಳಾದ ಮಂಗಳ, ಶುಕ್ರನಲ್ಲಿ ಏಕಿಲ್ಲ,  ಸೌರ ಮಂಡಲ ಅಷ್ಟೊಂದು ಬಿಸಿಯಾಗಿರುವುದು ಏಕೆ ಎಂಬಂತಹ ಸಾವಿರಾರು ಪ್ರಶ್ನೆಗಳಿಗೆ ನಮಗೆ ಉತ್ತರ ಕಂಡುಕೊಳ್ಳಲು ಆಗಿಲ್ಲ' ಎಂದರು.`ನಮ್ಮದು ಮುಂದುವರಿದ ನಾಗರಿಕತೆ ಎಂದು ಹೇಳಲಾಗುತ್ತಿದೆ. ವಿಜ್ಞಾನದ ವಿಷಯ ಬಂದಾಗ ನಾವಿನ್ನೂ ನಾಗರಿಕತೆ ಮೊದಲ ಮೆಟ್ಟಿಲಲ್ಲಿದ್ದೇವೆ ಎನಿಸುತ್ತದೆ. ತಿಳಿದಿರುವುದು ಅಲ್ಪವಾಗಿದ್ದು, ತಿಳಿಯಲಾರದ್ದು ಬ್ರಹ್ಮಾಂಡದಷ್ಟಿದೆ' ಎಂದು ಹೇಳಿದರು.

`ಮಕ್ಕಳಲ್ಲಿ ಕುತೂಹಲ ಕೆರಳಿಸುವಂತಹ ಇಂತಹ ಪ್ರದರ್ಶನಗಳು ಪ್ರತಿ ಜಿಲ್ಲೆಯಲ್ಲೂ ನಡೆಯಬೇಕು. ಧಾರವಾಡ ಮತ್ತು ಉಡುಪಿಗಳಲ್ಲಿ ಈ ನಿಟ್ಟಿನಲ್ಲಿ ಸಣ್ಣ ಪ್ರಯತ್ನ ನಡೆದಿದೆ' ಎಂದು ತಿಳಿಸಿದರು. ತಾರಾಲಯದ ನಿರ್ದೇಶಕಿ ಡಾ. ಬಿ.ಎಸ್. ಶೈಲಜಾ ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.